ಕೆಸಿಎ: ಪಿಕ್‌ನಿಕ್ ಗುಂಗಿನಲ್ಲಿ ಚೌತಿಗೆ ಸಿದ್ಧತೆ
ಕೆಸಿಎ ಆಯೋಜಿಸಿದ ಪಿಕ್‌ನಿಕ್ ಭಾರೀ ಗಮ್ಮತ್ತಾಗಿತ್ತು ಅಂತ ಖುಷಿ ಪಟ್ಟಿರುವ ಸದಸ್ಯರು ಅನುಭವ ಹಂಚಿಕೊಂಡಿದ್ದಾರೆ. ಅದೊಂದು ಕನ್ನಡ ಮೇಳ !
ತಿನಿಸು, ತಮಾಷೆ, ಆಟೋಟ ಸ್ಪರ್ಧೆಗಳೊಂದಿಗೆ ಪಿಕ್‌ನಿಕ್‌ನ ಮಜಾದ ಗುಂಗು ಎರಡು ದಿನ ಕಳೆದರೂ ಮುಗಿಯದಷ್ಟು ದಟ್ಟವಾಗಿತ್ತು. ಅದು ಉತ್ಸಾಹಮಯ ದಿನವಾಗಿತ್ತು . ಸಂಯೋಜಕರು ನಿರೀಕ್ಷಿಸಿದ್ದಕ್ಕಿಂತ ಎರಡು ಪಟ್ಟು ಮಂದಿ ಕಾರ್ಯಕ್ರಮಕ್ಕೆ ಬಂದಿದ್ದರು. ಆಶ್ಚರ್ಯವೆಂದರೆ ಪ್ಲೇಟು, ತಟ್ಟೆ, ಲೋಟಕ್ಕೆ ಕೊರತೆ ಬಂದರೂ ತಂದಿದ್ದ ತಿಂಡಿ ತಿನಿಸುಗಳಲ್ಲಿ ಯಾವುದೇ ಕೊರತೆ ಆಗಲಿಲ್ಲ. ಅಂದರೆ ಅವರ ಬೊಗಸೆ ಎಷ್ಟು ದೊಡ್ಡದಿರಬಹುದು ಅಂತ ನೀವೇ ಊಹಿಸಿ.
ಪಿಕ್‌ನಿಕ್‌ನಲ್ಲಿ ಕ್ರಿಕೆಟ್ ಜೊತೆಗೆ ಇನ್ನೂ ಸಣ್ಣ ಪುಟ್ಟ ಆಟಗಳು ಸದಸ್ಯರನ್ನು ಖುಷಿಯಾಗಿರಿಸಿದ್ದವು.
ಕೆಸಿಎ ಮುಂದಿನ ದಿನಗಳಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳು -
ಆಗಸ್ಟ್ 26 ರಂದು ಗಣೇಶ ಪೂಜೆ, ಆಗಸ್ಟ್ 31ರಂದು ಕೆಸಿಎ ಪ್ರಶಸ್ತಿಗೆ ಹೆಸರು ಶಿಫಾರಸು ಮಾಡಲು ಕೊನೇ ದಿನ, ಅಕ್ಟೋಬರ್ 13ರಂದು ರಾಮ್‌ಪ್ರಸಾದ್‌ರಿಂದ ಸಂಗೀತ ಸಂಜೆ, ನವೆಂಬರ್‌ನಲ್ಲಿ ಮಕ್ಕಳ ದಿನ, ರಾಜ್ಯೋತ್ಸವ, ದೀಪಾವಳಿ..... ಓಹ್...ನಿಧಾನಕ್ಕೆ ವಿವರ ತಿಳಿಸುತ್ತೇವೆ.
ಗಣೇಶ ಹಬ್ಬದಂದು ಅಷ್ಟಸಿದ್ಧಿ ವಿನಾಯಕನ ಪೂಜೆ ಇಟ್ಟುಕೊಳ್ಳಲಾಗಿದೆ. ಕೆಸಿಎ ಸದಸ್ಯರು ಸ್ವತಃ ರಚಿಸಿರುವ ಎಂಟು ವಿನಾಯಕ ಮೂರ್ತಿಗಳ ಸ್ಥಾಪನೆ, ಮತ್ತು ಪೂಜೆ. ಭಾಗವಹಿಸಲು ನೀವು ಬಂದರೆ ಚೆಂದ. ಪೂಜಾ ಕಾರ್ಯಗಳಲ್ಲಿ ನಿಪುಣರಾದ ಶಿವರಾಮ್ ಪೂಜಾರಿಗಳಾಗಿರುತ್ತಾರೆ. ನೀವು ಬಂದು, ನೆರವು ನೀಡಿ ಪ್ರೋತ್ಸಾಹಿಸುತ್ತೀರಿ ತಾನೇ ?
ಕರ್ನಾಟಕ ಸಾಂಸ್ಕೃತಿಕ ಜಾಗೃತಿ ಪ್ರಶಸ್ತಿ
ಈ ವರ್ಷ ಕರ್ನಾಟಕ ಸಾಂಸ್ಕೃತಿಕ ಜಾಗೃತಿ ಪ್ರಶಸ್ತಿ (Karnataka Cultural Awareness Award)ನೀಡಲು ಕೆಸಿಎ ನಿರ್ಧರಿಸಿದೆ. ‘ಸಂಗಮ’ದಲ್ಲಿ ಈ ಬಗ್ಗೆ ವಿವರಗಳಿವೆ. ಮಕ್ಕಳ ದಿನಾಚರಣೆಯಂದು ಮೊದಲ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ‘ಕನ್ನಡ ಕಲಿ’ ತರಗತಿಗಳನ್ನು ಆರಂಭಿಸಲು ಕೆಸಿಎ ಸಿದ್ಧವಾಗಿದೆ. ಎಸ್‌ಎಫ್ ವ್ಯಾಲಿ ಮತ್ತು ಹಂಟಿಂಗ್‌ಟನ್ ಬೀಚ್ ಪ್ರದೇಶದಲ್ಲಿ ತರಗತಿಗಳನ್ನು ಆರಂಭಿಸಲಾಗುವುದು. ನಿಮ್ಮ ಮಕ್ಕಳನ್ನು ‘ಕನ್ನಡ ಕಲಿ’ ತರಗತಿಗಳಿಗೆ ಸೇರಿಸಿ. ಕೊನೆಯದಾಗಿ, ಸದಸ್ಯತ್ವ ನವೀಕರಿಸಲು ಮರೆಯಬೇಡಿ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications