ವಾಷಿಂಗ್ಟನ್‌ ಕಾವೇರಿಯಲ್ಲಿ ಚಿಗುರೊಡೆದ ವಿಷುನಾಮ ಯುಗಾದಿ

ವಾಷಿಂಗ್ಟನ್‌ ಡಿಸಿ : ಹೊಸತನವನ್ನು ಹೊತ್ತುಕೊಂಡು ಯುಗಾದಿ ಓಡಿ ಬಂದಿದೆ. ಸ್ವಾಗತಿಸಿ, ಸಂಭ್ರಮಿಸಿ, ಖುಷಿಯನ್ನು ಹಂಚಿಕೊಳ್ಳಲು ಇದಕ್ಕಿಂತ ಉತ್ತಮ ಸಮಯ ಬೇರೆ ಉಂಟೇ ? ತವರಿನ ಹಬ್ಬವಿದು, ಎಲ್ಲ ಕಷ್ಟ ಸುಖಗಳ ನಡುವೆ ಖುಷಿಯ ಹೇರಿಕೊಂಡು ಫೀನಿಕ್ಸ್‌ನಂತೆ ಬಂದ ಕಾಲನ ಹಬ್ಬ.

ವಾಷಿಂಗ್ಟನ್‌ ಡಿಸಿಯ ಕಾವೇರಿ ಕನ್ನಡ ಸಂಘದವರು ಏಪ್ರಿಲ್‌ ಏಳರಂದು ಯುಗಾದಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಸಜ್ಜಾಗಿದ್ದಾರೆ. ಅಂದು, ಶನಿವಾರ ಸಂಜೆ ನಾಲ್ಕೂವರೆಯಿಂದ ರಾತ್ರಿ ಒಂಬತ್ತುವರೆವರೆಗೆ ರಾಕ್‌ವಿಲ್ಲೆಯ ಹೈಸ್ಕೂಲಿನಲ್ಲಿ ಸಾಲು ಸಂಭ್ರಮದ ಕಾರ್ಯಕ್ರಮಗಳು. ನೃತ್ಯ, ನಾಟಕ, ಹಾಡು ... ಹೀಗೆ ಅದು ಯುಗಾದಿ ಉತ್ಸವ. ನೀವೂ ಭಾಗವಹಿಸಿ.

ದೊಡ್ಡವರ ವೇಷದಲ್ಲಿ ಪುಟ್ಟ ಪುಟ್ಟಿಯರು

ಏನೇನು ಕಾರ್ಯಕ್ರಮಗಳಿವೆ ಅಂತ ಒಂದು ಬಾರಿ ಆಮಂತ್ರಣ ಪತ್ರಿಕೆಯತ್ತ ಕಣ್ಣಾಡಿಸಿದರೆ ದಂಗಾಗುತ್ತೀರಿ. ಎಲ್ಲಕ್ಕಿಂತ ಮುಂಚೆ ಅಲ್ಲಿನ ಪುಟಾಣಿಗಳ ಕರ್ನಾಟಕ ಯಾತ್ರೆ ಇದೆ. ನಿಮ್ಮ ಪುಟ್ಟ ಪುಟ್ಟಿಯರು ಸಂಗೊಳ್ಳಿ ರಾಯಣ್ಣನ ವೇಷದಲ್ಲಿ , ಅಕ್ಕಮಹಾದೇವಿ ಭಕ್ತಿರಸದಲ್ಲಿ , ಕೃಷ್ಣ ದೇವರಾಯನ ಠೀವಿಯಲ್ಲಿ , ಕಿತ್ತೂರು ರಾಣಿಯ ವೀರಾವೇಷದಲ್ಲಿ ಮೆರವಣಿಗೆ ಹೊರಡುತ್ತಾರೆ. ವೇದಿಕೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಿಮ್ಮೆದೆಯ ಲಯಕ್ಕೆ ಹಾಡುತ್ತಾರೆ. ಜೊತೆಯಾಗುತ್ತದೆ ನಿಮ್ಮೂರಿನ ನೆನಪು ತರುವ ಗೀತಾಂಜಲಿ.

16ನೇ ಶತಮಾನದ ಸುಲಾಡಿ ನೃತ್ಯ

ಬೆಂಗಳೂರಿನ ನೂಪುರ ನೃತ್ಯ ಶಾಲೆಯವರು ಯುಗಾದಿಗೆ ನೃತ್ಯಗುಚ್ಛ ಅರ್ಪಿಸುತ್ತಾರೆ. ನೂಪುರ ನೃತ್ಯಶಾಲೆ ಗೊತ್ತಲ್ಲ. ಶಿರೋಮಣಿ, ಪ್ರಿಯದರ್ಶಿನಿ ಮತ್ತು ಕರ್ನಾಟಕ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡ ಅಗ್ಗಳಿಕೆಯ ಶಾಲೆಯದು. 16ನೇ ಶತಮಾನದ ಸುಲಾಡಿ ನೃತ್ಯ ಪ್ರಕಾರವನ್ನು ಕರಗತ ಮಾಡಿಕೊಂಡ ನೂಪುರದ ನೇಗಿಲು ಹಿಡಿದವರು, ಶ್ರೀನಿವಾಸನ್‌ ಮತ್ತು ಲಲಿತ ಶ್ರೀನಿವಾಸನ್‌. ಆದ್ದರಿಂದ, ಈ ಯುಗಾದಿ ಉತ್ಸವ ನೂಪುರದವರ ನೃತ್ಯ ವಿಶೇಷವನ್ನು ನೋಡಲು ನಿಮಗೊಂದು ಅಪೂರ್ವ ವೇದಿಕೆಯಾಗಲಿದೆ. ಮಿಸ್‌ ಮಾಡಿಕೊಂಡರೆ ಮತ್ತೆ ಬೇಜಾರು ಮಾಡಿಕೊಳ್ಳುತ್ತೀರಿ.

ವೇದಿಕೆಗೆ ದಾರಿ, ಟಿಕೇಟು ಇತ್ಯಾದಿ

ಕಾರ್ಯಕ್ರಮ ನಡೆಯುವ ಸ್ಥಳ ರಾಕ್‌ ವಿಲ್ಲೆ ಹೈಸ್ಕೂಲ್‌. (Rockville High School, 2100 Baltimore Road, Rockville, MD 20851)

ನೀವು ಕನ್ನಡ ಸಂಘದ ಸದಸ್ಯರಾದರೆ ಆರು ಡಾಲರ್‌ನ ಟಿಕೇಟು ಖರೀದಿಸಿದರೆ ಸಾಕು. ಇಲ್ಲವಾದರೆ ಹತ್ತು ಡಾಲರ್‌ನ ಟಿಕೇಟು ಖರೀದಿಸಬೇಕು. ಐದು ವರ್ಷದ ಮಕ್ಕಳನ್ನು ಕರೆದುಕೊಂಡು ಹೋಗಲು ಟಿಕೇಟು ಬೇಡ. ಕನ್ನಡ ಸಂಘದ ಸದಸ್ಯರಾಗಬೇಕಿದ್ದಲ್ಲಿ ಈ ವಿಳಾಸಕ್ಕೆ ನಿಮ್ಮ ಈ-ಮೇಯ್ಲ್‌ ವಿಳಾಸ ಕಳುಹಿಸಿ. ಕಾರ್ಯಕ್ರಮಕ್ಕೆ ಹೋದಾಗ ಸದಸ್ಯತ್ವ ನವೀಕರಿಸಲೂ ಬಹುದು. ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ನಂಬರ್‌ಗಳಿಗೆ ಫೋನಾಯಿಸಬಹುದು. ನಾಗಶಂಕರ್‌- (240) 631 0569, ಡಾ. ಶಾಮಲಾ -(301) 330 0919, ಸಂಜಯ್‌ ರಾವ್‌-(703) 442 3316

ಸರಿ ಮತ್ತೆ . ಯುಗಾದಿ ಉತ್ಸವ ಆಚರಿಸಿದ ಖುಷಿಯನ್ನು ಹಂಚಿಕೊಳ್ಳಲು ನಮ್ಮೊಂದಿಗೆ ಜೊತೆಯಾಗ್ತುತ್ತೀರಿ ತಾನೇ ?

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು / ಯುಗಾದಿ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+