• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅ ಆ ಇ ಈ ಕನ್ನಡ ಕಲಿ -ಚಞಟಕೆಸಿಎಗೆ ಶುಭ ಹೇಳಿ

By Staff
|

ಕ್ಯಾಲಿಫೋರ್ನಿಯಾ : ಇದನ್ನು ಭಾಷಾ ದಾಸೋಹ ಅಂದರೆ ಸರಿಯಾದೀತು. ಕನ್ನಡ ಬರದವರಿಗೆ ಕನ್ನಡ ಕಲಿಸಲು ಹೊರಡುವ ಮೂಲಕ ಕನ್ನಡ ಸಾಂಸ್ಕೃತಿಕ ಒಕ್ಕೂಟ (ಕೆಸಿಎ) ಸೀಮೆಯಾಚೆ ಕನ್ನಡ ಪರಿಮಳವನ್ನು ಅರ್ಥಪೂರ್ಣವಾಗಿ ಪಸರಿಸಲು ಹೊರಟಿದೆ. ಇದರಿಂದಾಗಿ ಕನ್ನಡಿಗರು ಇತರ ಭಾಷೆಗಳನ್ನು ಕಲಿಯುತ್ತಾರೆಯೇ ಹೊರತು ಇತರರಿಗೆ ಕನ್ನಡವನ್ನು ಕಲಿಸುವುದಿಲ್ಲ ಅನ್ನುವ ಆರೋಪಕ್ಕೊಂದು ಅಪವಾದ ಇದೆಯೆಂದಾಯಿತು. ಅದಕ್ಕಾಗಿ ಒಕ್ಕೂಟದ ಪದಾಧಿಕಾರಿಗಳು ಅಭಿನಂದನೆಗೆ ಅರ್ಹರು, ಅಭಿನಂದನೆಗಳು.

ಡೈಮನ್‌ ಬಾರ್‌ ಪ್ರದೇಶದಲ್ಲಿ ಕೆಸಿಎ ಕನ್ನಡ ತರಗತಿಗಳು ಶುರುವಾಗುವುದು ಏಪ್ರಿಲ್‌ 1 ರಿಂದ . ಶ್ರೀನಿವಾಸ್‌ ಭಟ್‌ ಅವರು ತರಗತಿಗಳ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಕವಿತಾ ಕೊಟ್ರಪ್ಪ ಆತಿಥ್ಯ ವಹಿಸಿದ್ದ, ತರಗತಿಗಳನ್ನು ಪ್ರಾರಂಭಿಸುವ ಮುನ್ನಿನ ಸಭೆಯಲ್ಲಿ 6 ಕುಟುಂಬಗಳು ಉತ್ಸಾಹದಿಂದ ಭಾಗವಹಿಸಿದ್ದವು. ಸ್ಯಾನ್‌ ಗ್ಯಾಬ್ರಿಯಲ್‌ ವ್ಯಾಲಿ ಮತ್ತು ಸುತ್ತು ಮುತ್ತಲಿನ ಮಂದಿ ತರಗತಿಗಳಿಗೆ ಎಲ್ಲ ರೀತಿಯ ಬೆಂಬಲ ಸೂಚಿಸಿದ್ದಾರೆ.

ಈಗಾಗಲೇ 8 ರಿಂದ 13 ರ ವಯೋಮಾನದ 10 ಮಕ್ಕಳು ಕನ್ನಡ ಕಲಿಕೆಗೆ ಉತ್ಸಾಹದಿಂದ ಮುಂದೆ ಬಂದಿವೆ. ನೀವು ಅಥವಾ ನಿಮ್ಮ ಮಕ್ಕಳು ತರಗತಿಗಳಿಗೆ ಹೆಸರನ್ನು ಇನ್ನೂ ನೋಂದಾಯಿಸದಿದ್ದಲ್ಲಿ ಕೂಡಲೇ ಮುಂದಾಗಿ. ನೋಂದಾವಣೆಗಾಗಿ vrbhats@yahoo.comವಿಳಾಸ ಅಥವಾ ದೂರವಾಣಿ ಸಂಖ್ಯೆ 909-623-3185 ಸಂಪರ್ಕಿಸಬಹುದು.

ಕನ್ನಡ ಕಲಿಸುವ ಈ ಯಜ್ಞದಲ್ಲಿ ಹವಿಸ್ಸನ್ನು ಸಲ್ಲಿಸಲು ನಿಮಗೂ ಅವಕಾಶವಿದೆ. ಇಷ್ಟ ಪಟ್ಟಲ್ಲಿ ನಿಮ್ಮ ವಾಸ ಸ್ಥಳದ ಪ್ರದೇಶದಲ್ಲಿ ಕನ್ನಡ ಕಲಿಕೆಯ ತರಗತಿಗಳನ್ನು ನೀವೇ ಪ್ರಾರಂಭಿಸಬಹುದು. ನೆರವಿಗೆ ಕೆಸಿಎ ಸಿದ್ಧ.

ಕೆಸಿಎ ನಡೆಸುತ್ತಿರುವ ಕನ್ನಡ ಕಲಿಕೆಯ ಕಾರ್ಯಕ್ರಮ ಅನೇಕ ದೃಷ್ಟಿಗಳಿಂದ ಮುಖ್ಯವಾದುದು. ನಾಡಿನೊಳಗೇ, ಬೆಂಗಳೂರಿನಂಥ ಪ್ರದೇಶಗಳಲ್ಲಿ ಇಂಥ ತರಗತಿಗಳನ್ನು ನಡೆಸುವುದು ಅಕಾಡೆಮಿಗಳಿಗೇ ಕಷ್ಟವಾಗಿರುವ ಸಂದರ್ಭದಲ್ಲಿ ಕೆಸಿಎ ಸೀಮೆಯಾಚೆ ಕನ್ನಡ ಕಲಿಸುವ ಕೆಲಸಕ್ಕೆ ಮುಂದಾಗಿದೆ. ಆ ಕಾರಣದಿಂದಲೇ ಅದು ಭಾಷಾ ದಾಸೋಹ ಅನ್ನಿಸಿಕೊಳ್ಳುತ್ತದೆ. ಕೆಸಿಎಗೆ ಮತ್ತೊಮ್ಮೆ ಅಭಿನಂದನೆ ಹಾಗೂ ಶುಭಾಶಯ .

(ಇನ್ಫೋ ವಾರ್ತೆ)

Click here to go to top
ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more