ಜೆಎಸ್‌ಎಸ್ ಆಧ್ಯಾತ್ಮ ಪ್ರಚಾರ ಮಂಡಳಿ
ಜೆಎಸ್‌ಎಸ್ ಆಧ್ಯಾತ್ಮ ಪ್ರಚಾರ ಮಂಡಳಿ (JSS Spiritual Mission)ಲಾಭರಹಿತ ಧಾರ್ಮಿಕ ಸಂಘಟನೆ. ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ 1999ರಲ್ಲಿ ಸ್ಥಾಪಿಸಿದ ಆಧ್ಯಾತ್ಮ ಪ್ರಚಾರ ಮಂಡಳಿ ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಲಯದ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಯೋಜನೆಗಳ ವಿಸ್ತರಣೆಯ ಫಲ.
ದಕ್ಷಿಣ ಅಮೆರಿಕಾದ ಆಧ್ಯಾತ್ಮ ಜ್ಞಾನ ದಾಹಿಗಳ ಪಾಲಿಗೆ ಅಮೃತವಾಗಿರುವ ಮಂಡಳಿ, ವೀರಶೈವ ಸಿದ್ಧಾಂತ ಪ್ರತಿಪಾದನೆಯ ಗುರಿಯಿಟ್ಟುಕೊಂಡಿದೆ. ಮುಖ್ಯವಾಗಿ ಸಿದ್ಧೇಶ್ವರ ಸ್ವಾಮೀಜಿಗಳ ಉಪನ್ಯಾಸ ಪ್ರವಾಸವನ್ನು ಆಯೋಜಿಸುವ ಮೂಲಕ ಧಾರ್ಮಿಕ ವಿಚಾರ ಪ್ರಚಾರಕ್ಕೆ ಒತ್ತು ಕೊಡುತ್ತದೆ.
ಉಪನ್ಯಾಸ ನೀಡಲಿರುವ ಸಿದ್ಧೇಶ್ವರ ಸ್ವಾಮೀಜಿಗಳು
ಬಿಜಾಪುರದ ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಮಹಾಗುರುಗಳ ಉತ್ತರಾಧಿಕಾರಿಯಾಗಿರುವ ಸಿದ್ಧೇಶ್ವರ ಸ್ವಾಮೀಜಿಗಳು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜಗತ್ತಿನ ಶ್ರೇಷ್ಠ ಧರ್ಮಗಳ ಆಧ್ಯಾತ್ಮಿಕ ತಿರುಳನ್ನು ಅಭ್ಯಸಿಸಿದ್ದಾರೆ. 20ನೇ ವಯಸ್ಸಿನಲ್ಲಿ ಸನ್ಯಾಸಕ್ಕೆ ಕಾಲಿಟ್ಟರು. ಸರಳ ವ್ಯಕ್ತಿ. ಉತ್ತಮ ವಾಗ್ಮಿ. ಕನ್ನಡ , ಸಂಸ್ಕೃತ, ಹಿಂದಿ, ಮರಾಠಿ, ಇಂಗ್ಲಿಷ್ ಭಾಷಾ ಪರಿಣತರು. ಧಾರ್ಮಿಕ ಕೃತಿಗಳ ಕರ್ತೃ. ‘ಗಾಡ್, ವರ್ಲ್ಡ್ ಆ್ಯಂಡ್ ಸೌಲ್’ ಅವರ ಪ್ರಸಿದ್ಧ ಕೃತಿ. ವೇದಾಂತ, ಗೀತೆ, ಯೋಗಸೂತ್ರಗಳ ಬಗ್ಗೆ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಬಲ್ಲರು.
ಜೆಎಸ್‌ಎಸ್ ಮಹಾವಿದ್ಯಾಪೀಠ
ಜೆಎಸ್‌ಎಸ್ ಮಹಾವಿದ್ಯಾಪೀಠವು ಶಾಲೆ, ಕಾಲೇಜು, ತಾಂತ್ರಿಕ ಕಾಲೇಜುಗಳೂ ಸೇರಿದಂತೆ 247 ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿದೆ. ವಿದ್ಯಾಪೀಠ ಆರಂಭವಾದುದು 1954ರಲ್ಲಿ . ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ವಿದ್ಯಾಲಯವು ರಾಜ್ಯದ ಗಡಿ ದಾಟಿ ತಮಿಳುನಾಡು, ಉತ್ತರ ಪ್ರದೇಶದಲ್ಲಿಯೂ ವಿದ್ಯಾ ಸಂಸ್ಥೆಗಳನ್ನು ಆರಂಭಿಸಿತು. ಇವುಗಳ ಜೊತೆಗೆ ಸಂಸ್ಕೃತ ಪಾಠ ಶಾಲೆಗಳು, ಯೋಗಕೇಂದ್ರಗಳು ಮತ್ತು ಆಧ್ಯಾತ್ಮ ಶಿಬಿರಗಳನ್ನು ಜೆಎಸ್‌ಎಸ್ ಮಹಾವಿದ್ಯಾ ಪೀಠ ನಡೆಸುತ್ತಿದೆ.
ನೀವು ಸಹಾಯ ಮಾಡುತ್ತೀರಾದರೆ...
ಮೈಸೂರು ನಗರದಿಂದ 28 ಕಿಲೋ ಮೀಟರ್ ದೂರದಲ್ಲಿರುವ ಸುತ್ತೂರಿನಲ್ಲಿ ಜೆಎಸ್‌ಎಸ್ ಮಹಾವಿದ್ಯಾ ಪೀಠವಿದೆ. 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಲ್ಲಿ ವಸತಿಯಾಂದಿಗೆ ಶೈಕ್ಷಣಿಕ ಮತ್ತು ಧಾರ್ಮಿಕ ವಿದ್ಯಾದಾನ ನಡೆಯುತ್ತದೆ. ‘ಸುತ್ತೂರು ಜೆಎಸ್‌ಎಸ್ ಸ್ಕೂಲ್ ಫಂಡ್’ ವಿದ್ಯಾದಾನಕ್ಕಾಗಿ ದೇಣಿಗೆ ಸಂಗ್ರಹಿಸುತ್ತದೆ. ದೇಣಿಗೆ ನೀಡುವವರು ಒಬ್ಬ ವಿದ್ಯಾರ್ಥಿಯ ಪೂರ್ಣ ವಿದ್ಯಾಭ್ಯಾಸದ ಅಥವಾ ಒಂದು ವರ್ಷದ ಖರ್ಚು ವಹಿಸಿಕೊಳ್ಳಬಹುದು. ಅಥವಾ ಕೈಲಾದಷ್ಟು ದಾನ ಮಾಡಬಹುದು. ಈ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ದೇಣಿಗೆ ಹಣದ ರೂಪದಲ್ಲಿಯೇ ಇರಬೇಕೆಂದಿಲ್ಲ. ಕಂಪ್ಯೂಟರ್, ಅಡುಗೆ ಮನೆ ಸಲಕರಣೆ , ಬೆಡ್ ಶೀಟ್‌ಗಳು, ಚಾಪೆ, ಪ್ರಯೋಗಾಲಯದ ಉಪಕರಣಗಳು....ಹೀಗೆ ನಿಮಗೆ ಕೊಡಬೇಕೆನಿಸಿದ್ದು. ಸಂಪರ್ಕ ವಿಳಾಸ ಇಲ್ಲಿದೆ - 5545 Greenbriar Drive, West Bloomfield, MI 483221400, Phone: 2487880325
Email: [email protected]
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications