ವಿವಾಹ ರಜತ ಮಹೋತ್ಸವ-ಮಿಸ್ಸೌರಿಯ ಸೇಂಟ್‌ ಲೂಯಿ(ಸ್‌)ನ ನೆನಪುಗಳು : ಭಾಗ 3

* ಎಸ್‌.ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

  • ಮಾಲಾ ವಿನಿಮಯಮ್‌ ।।
  • (ವಧೂ- ವರರು ಪರಸ್ಪರ ಹಾರ ಹಾಕುತ್ತಾರೆ) : ವಧೂ ಜಲ್ಪಯತಿ।(ವಧೂ ಮೆಲ್ಲಗೆ ಹೇಳುತ್ತಾಳೆ) : ‘ಪುಷ್ಪಮಾಲೇನ ಇದಂ ಆರ್ಯ, ಕಂಠಂ ಅಲಂಕರೋಮಿ ತೇ । ಸೌಭಾಗ್ಯ ಸಂಪದ್‌ ಅಭಿವೃದ್ಧ್ಯರ್ಥಂ, ಮಮ ಪ್ರೀತಿ ಸುಸಂಜ್ಞಿತಮ್‌।। ’
    ವರಃ ಘೋಷಯತಿ । (ವರನು ಗಟ್ಟಿಯಾಗಿ ಹೇಳತ್ತಾನೆ: ) ‘ಪುಷ್ಪಮಾಲೇನ ಇದಂ ಆರ್ಯೇ, ಕಂಠಂ ಅಲಂಕರೋಮಿ ತೇ । ಸೌಭಾಗ್ಯ ಸಂಪದ್‌ ಅಭಿವೃದ್ಧ್ಯರ್ಥಂ, ಮಮ ಪ್ರೀತಿ ಸು- ಸುಸಂಜ್ಞಿತಮ್‌।। ’

    (‘ಆರ್ಯೇ / ಆರ್ಯ, ಈ ಮಾಲೆ ನನ್ನ ಪ್ರೀತಿಯ ಗುರುತು ; ಸೌಭಾಗ್ಯ ಸಂಪತ್ತಿನ ಆಶಯದಿಂದ, ನಿನ್ನ ಕಂಠವನ್ನು ಈ ಹೂವಿನ ಹಾರದಿಂದ ಅಲಂಕರಿಸುತ್ತಿದ್ದೇನೆ.’)

  • ಪ್ರತಿಜ್ಞಾ ಜ್ಞಾಪನಮ್‌, ಸ್ಥಿರೀ-ಕರಣಮ್‌ ।।
  • (ಮಾತು ಕೊಟ್ಟಿದ್ದನ್ನು ಮತ್ತೆ ನೆನಪಿಸಿಕೊಳ್ಳುವುದು, ಬಲಪಡಿಸಿಕೊಳ್ಳುವುದು) :
    ವಧೂ ।। ‘ಧರ್ಮೇಚ, ಅರ್ಥೇಚ, ಕಾಮೇಚ, ನ ಅತಿಚರಿತವ್ಯಾ ತ್ವಯಾ ಅಹಮ್‌ ।। ’
    (‘ನಾವು ಬಾಳುವ ಸಮಾಜ ಒಪ್ಪಿಕೊಳ್ಳುವ ಕಟ್ಟುಪಾಡಿನೊಳಗೆ, ಧರ್ಮ, ಅರ್ಥ ಮತ್ತು ಕಾಮದ ವಿಚಾರಗಳಲ್ಲಿ ನೀನು ನನ್ನನ್ನು ಅತಿಕ್ರಮಿಸಬಾರದು !’)
    ವರ ಃ ।। ‘ನ ಅತಿಚರಾಮಿ, ನ ಅತಿಚರಾಮಿ, ನ ಅತಿಚರಾಮಿ।।’
    (‘ಅತಿಕ್ರಮಿಸುವುದಿಲ್ಲ , ಅತಿಕ್ರಮಿಸುವುದಿಲ್ಲ , ಖಂಡಿತಾ ನಾನು ನಿನ್ನನ್ನು ಅತಿಕ್ರಮಿಸುವುದಿಲ್ಲ !’)
    ಸಭಿಕಾ : ಹರ್ಷೋದ್ಗಾರೇಣ ಕರತಾಡನಂ ಕುರ್ವನ್ತು ।। (ಸಭಿಕರು ಆನಂದದಿಂದ ಕೂಗುತ್ತಾ ಚಪ್ಪಾಳೆ ತಟ್ಟಬೇಕು !)
  • ವಧೂ-ವರ ಪಾರಿತೋಷಿಕ ವಿನಿಮಯಮ್‌ ।। (
  • ವಧೂವರರ ಉಡುಗೊರೆಗಳ ವಿನಿಮಯ) :
    ವರ: / ವಧೂ: ‘ಸ್ವರ್ಣಹಾರಂ ಇದಂ ಆರ್ಯೇ/ ಆರ್ಯ, ಪಾರಿತೋಷಕ-ರೂಪಕಮ್‌। ದಾತುಂ ಇಚ್ಛಾಮಿ ಸುಭಗೇ, ಪ್ರಸನ್ನಾ ಭವ ಸರ್ವದಾ ।।’
    (‘ಚಿನ್ನದ ಸರವನ್ನು ನಿನಗೆ ಉಡುಗೊರೆಯಾಗಿ ಕೊಡಲು ಬಯಸುತ್ತೇನೆ; ಸುಭಗಳೇ, ಎಂದೆಂದೂ ನನ್ನೊಡನೆ ಸಂತೋಷದಿಂದಿರು!’)
    (ಅತ್ರ, ಏತಾನಿ ಪರ್ಯಾಯ-ಪದಾನಿ ವರ :, ವಧೂ ವಾ ಪೂರಯತಿ । (ಈ ಪರ್ಯಾಯ ಪದಗಳನ್ನು ಯಥೋಚಿತವಾಗಿ ಮೇಲಿನ ಶ್ಲೋಕದಲ್ಲಿ ಉಪಯೋಗಿಸಬಹುದು : ) ‘ಆಭರಣಮ್‌’, ‘ಆಭೂಷಣಮ್‌’, ‘ರತ್ನಮಾಲಾಂ’, ‘ವಜ್ರಹಾರಂ’, ‘ಕರ್ಣ- ಭೂಷಣಮ್‌’, ‘ಕರ್ಣ- ಕುಂಡಲಮ್‌’, ‘ಕೇಯೂರಮ್‌’, ‘ವಲಯಮ್‌’, ‘ಕಂಕಣಮ್‌’, ‘ಮೇಖಲಾಂ’, ‘ಅಂಗುಲೀಯಕಮ್‌’(ಉಂಗುರ), ‘ವಜ್ರಂ ಅಂಗುಲೀಯಕಮ್‌’, ‘ಚೀನಾಂಶುಕಮ್‌’, ‘ಚೀನಾಂಬರಮ್‌’ (ರೇಷ್ಮೆ ಸೀರೆ), ‘ದುಕೂಲಂ ಪಟ್ಟ ಕೌಶೇಯಮ್‌’(ರೇಷ್ಮೆ ಸೀರೆ), ‘ಧೌತ ಪಟ್ಟ ಕೌಶೇಯಮ್‌’ (ರೇಷ್ಮೆ ಪಂಚೆ), ‘ಕಾರ್ಪಾಸಕಮ್‌’(ಜುಬ್ಬಾ, ಅಂಗಿ, ಮೇಲ್ತುಡುಗೆ), ‘ಕಂಚುಕಮ್‌’ (ರವಿಕೆ), ಇತ್ಯಾದಿ।। )
  • ಜೀವನ-ದೀಪ ಪರಿಕ್ರಮಣಮ್‌।।
  • (ಜೀವನ-ದೀಪದ ಸುತ್ತ ) :
    ವರ:
    ಸ್ವ- ದಕ್ಷಿಣಪಾಣಿನಾ ವಧ್ವಾ : ದಕ್ಷಿಣಪಾಣಿಂ ಗೃಹೀತ್ವಾ ಜ್ವಲಿತಂ ‘ಜೀವನದೀಪಂ’ ಪ್ರದಕ್ಷಿಣಂ ಕರೋತಿ ।।
    (ತನ್ನ ಬಲಗೈಯಿಂದ ಅವಳ ಬಲಗೈಯನ್ನು ಹಿಡಿದುಕೊಂಡು ವರನು ವಧುವಿನೊಂದಿಗೆ ಬೆಳಗುತ್ತಿರುವ ‘ಜೀವನದೀಪ’ಕ್ಕೆ ಪ್ರದಕ್ಷಿಣೆ ಬರುತ್ತಾನೆ; ಪರಸ್ಪರ ಹೇಳಿಕೊಳ್ಳುತ್ತಾರೆ:)
    ‘ಇದಂ ಅಗ್ರೇ, ಆತ್ಮಾ (ಅಹಂ, ವರ:) ಏವ, ಏಕ ಏವ, ಆಸೀತ್‌। ಸ: (ಅಹಂ) ಅಕಾಯಮತ। ‘ಜಾಯಾ ಮೇ ಸ್ಯಾತ್‌ (ಇತಿ)। ಅಥ ಪ್ರಜಾಯೇಯ: (ಇತಿ)। ಅಥ, ಮೇ ವಿತ್ತಂ ಸ್ಯಾತ್‌ (ಇತಿ) । ಅಥ, ಕರ್ಮ ಕುರ್ವೀಯ (ಇತಿ)’। ಕಾಮ : ಏತಾವಾನ್‌ ವೈ (ಆಸೀತ್‌)। ಅತ: ಚನ ಇಚ್ಛನ್‌ ಭೂಯ: ನ ವಿನ್ದೇತ್‌ ।
    ತಸ್ಮಾತ್‌ ಏತರ್ಹಿ ಏಕಾಕೀ ಕಾಮಯತೇ (ಅಹಂ ಕಾಮಯಾಮಿ ಸ್ಮ)- ‘ಮೇ ಜಾಯಾ ಸ್ಯಾತ್‌। ಅಥ ಪ್ರಜಾಯೇಥ। ಅಥ ಮೇ ವಿತ್ತಂ ಸ್ಯಾತ್‌ । ಅಥ ಕರ್ಮಂ ಕುರ್ವೀಯ’ ಇತಿ ।।
    ಸಃ ಯಾವತ್‌ ಏತೇಷಾಂ ಏಕೈಕಂ ಅಪಿ ನ ಪ್ರಾಪ್ನೋತಿ, ತಾವತ್‌(ಸಃ) ಅಕೃತ್ಸ್ನಃ ಏವ ಮನ್ಯತೇ। ತಸ್ಯ ಕೃತ್ಸ್ನತಾ ಉ (ಅಥ ಏವ ಸಂಭವಿಷ್ಯತಿ)- ಇತಿ ।।
    ಮನಃ ಏವ ಅಸ್ಯ ಆತ್ಮಾ । (ಅಹಂ ಮನಃ ಸದೃಶಂ ಅಸ್ಮಿ)। ಜಾಯಾ (ತ್ವಂ) ಪ್ರಾಣ: (ಅಸಿ) । (ಆವಯೋಃ) ಪ್ರಜಾ ಚಕ್ಷುಃ (ಸದೃಶಂ), ಮಾನುಷಂ (ಬನ್ಧು ಜನಾಃ) ವಿತ್ತಂ (ಸದೃಶಂ ಸನ್ತಿ)।। ಚಕ್ಷುಷಾ ಹಿ ತತ್‌ (ಸರ್ವಂ) ವಿನ್ದತೇ (ಆವಾಂ ವಿನ್ದಾವಹೇ) ।। (ಕಂಸದಲ್ಲಿ ಇರುವ ಪದಗಳು ಅರ್ಥವ್ಯಾಪ್ತಿಗಾಗಿ ಮೂಲಕ್ಕೆ ಸೇರಿಸಿದವು.)- ಬೃಹದಾರಣ್ಯಕ ಉಪನಿಷತ್‌ 1.4.17.
  • ಕೃತಜ್ಞತಾ ಸಮರ್ಪಣಮ್‌ ।।
  • (ವಧೂವರರ ಮಕ್ಕಳು ತಮ್ಮ ತಂದೆ ತಾಯಿಯವರಿಗೆ ಕೃತಜ್ಞತೆಗಳನ್ನು ಸಮರ್ಪಿಸುವುದು.)
    ಜನನಿ, ತ್ವಂ ಮಾಂ ಪ್ರೀತಿ- ವಾತ್ಸಲ್ಯಾನುಕಂಪ- ನವನೀತಯಾ ಅಸೃಜ್ಯತಃ ಲೀಲಯಾ । ಪಾಲಿತೋ’ಸ್ಮಿ, ಗೃಹೀತ್ವ ಕರಪಲ್ಲವೇಣ ಚಾಲಿತೋ, ಅಭಿವಾದಯೇ ಸರ್ವದಾ ।।1।।
    ಆಕಾಂಕ್ಷಾತ್ಮಕ ರೇಖಾಚಿತ್ರಂ ಅಮಲಂ, ಯತ್‌ ಮಂತ್ರಿತಂ ಮನೋಭಿತ್ತಿಷು। ತತ್‌ ಸರ್ವಂ ಪೂರಯಿತುಂ ತು ಸತತಂ ಶಕ್ನೋಮಿ, ಚಿನ್ತಾಂ ತ್ವಂ ಮಾ ಕುರು ।।2।।
    ಆಂಬ, ಅಹಂ ಅನುಗೃಹೀತೋ’ ಸ್ಮಿ ಕೃತ್ಸ್ನಂ ಪ್ರೀತ್ಯಾ ತವಾಶಿಷಾಧುನಾ । ಸಮರ್ಪಯಾಮಿ ಮಾನಸಪುಷ್ಪಂ ಅಮಲಂ, ಕೃತಜ್ಞತಯಾ ಸಂ- ಸ್ವೀಕುರು ।।3।।
    (ಅಮ್ಮಾ , ಪ್ರೀತಿ, ವಾತ್ಸಲ್ಯ, ಸಹಾನುಭೂತಿಗಳೆಂಬ ಬೆಣ್ಣೆಯಿಂದ ನನ್ನನ್ನು ಸೃಜಿಸಿದೆ; ನಿನ್ನ ಲೀಲೆಯಲ್ಲಿ ನನ್ನನ್ನು ಬೆಳೆಸಿದೆ; ಕೈ ಹಿಡಿದು ನಡೆಸಿದೆ; ನಿನಗೆ ಸದಾ ನನ್ನ ನಮನಗಳು! ।।1।।; ನಿನ್ನ ಮನಃ ಪಟಲವೆಂಬ ಗೋಡೆಯ ಮೇಲೆ ಏನೇನು ರೇಖಾಚಿತ್ರಗಳನ್ನು ನನ್ನ ಬಗ್ಗೆ ನೀನು ಯೋಚಿಸಿಕೊಂಡಿದ್ದೀಯೋ ಅವೆಲ್ಲವನ್ನೂ ಸಾರ್ಥಕಗೊಳಿಸಲು, ಅಮ್ಮಾ /ಅಪ್ಪಾ , ನಾನು ಪ್ರಯತ್ನಿಸುವೆ; ಚಿಂತಿಸದಿರು! ।।2।। ; ನಿನ್ನ ತುಂಬು ಪ್ರೀತಿಯೆಂಬ ಆಶೀರ್ವಾದದಿಂದ ನಾನೀಗ ಅನುಗ್ರಹೀತನಾ/ಳಾಗಿದ್ದೇನೆ; ಈ ಅಕಳಂಕ ಮಾನಸ- ಪುಷ್ಪವನ್ನು ಕೃತಜ್ಞತೆಯಿಂದ, ಇದೋ, ಸಮರ್ಪಿಸುತ್ತಿದ್ದೇನೆ; ಅಮ್ಮಾ , ಸ್ವೀಕರಿಸು ! ।।3।।
  • ಆಶಿರ್ವಾದ ।।
  • (ಆಶೀರ್ವಚನಗಳು) :
    ಸರ್ವೇ ಸಭಿಕಾ : ಮಂತ್ರಾಕ್ಷತೈರ್‌ ಪುಷ್ಪದಳ- ವೃಷ್ಟೈರ್‌ ವಾ, ವಧೂವರಾಭ್ಯಾಂ ಅಶಿರ್ವಾದಂ ಕುರ್ವನ್ತು ।। ‘ದಂಪತೀ ಪುತ್ರ- ಪೌತ್ರಾಣಾಂ ಸಕುಟುಂಬ ಸಪರಿವಾರತಃ । ಸುಖ- ಶಾನ್ತಿ ಸಮೃದ್ಧೇನ, ಜಿಜೀವ ಶರದಃ ಶತಮ್‌ ।।
    (ಸಭಿಕರು ವಧೂವರರನ್ನು ಆಶೀರ್ವದಿಸಲಿ!)
  • ಮಂಗಳಮ್‌ ।।
  • (ಕಾರ್ಯಕ್ರಮ ಮುಕ್ತಾಯ):
    ಸರ್ವೇ’ಪಿ ಸುಖಿನಃ ಸನ್ತು, ಸರ್ವೇ ಸನ್ತು ನಿರಾಮಯಾಃ । ಸರ್ವೇ ಭದ್ರಾಣಿ ಪಶ್ಯನ್ತು , ಮಾ ಕಶ್ಚ್ಹಿದ್‌ ದುಃಖಭಾಕ್‌ ಭವೇತ್‌ ।।
    ಓಂ ಶಾನ್ತಿ :, ಶಾನ್ತಿ :, ಶಾನ್ತಿ : ।।
    (ಎಲ್ಲರಿಗೂ ಶುಭವಾಗಲಿ ! ಎಲ್ಲರೂ ಸುಖಿಗಳಾಗಿರಲಿ; ಯಾರೂ ದುಃಖವನ್ನು ಅನುಭವಿಸದಂತಾಗಲಿ ! ಎಲ್ಲೆಡೆ ಶಾಂತಿ ನೆಲಸಿರಲಿ !)**** **** **** **** *****

    ಯಾರೋ ನನ್ನನ್ನು ಎಚ್ಚರಿಸಿದಂತಾಯಿತು; ನಾನು ಕಣ್ಣುಬಿಟ್ಟು ನೋಡಿದೆ; ಜನರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಇದ್ದರು. ‘ಮದುವೆಯ ಬೆಳ್ಳಿಹಬ್ಬ’ದ ಕಾರ್ಯಕ್ರಮ ಮುಕ್ತಾಯವಾಗಿತ್ತು !

    What do you think about this article?

    Click here to go to top
    ಮುಖಪುಟ / ಸಾಹಿತ್ಯ ಸೊಗಡು
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+