ವಿವಾಹ ರಜತ ಮಹೋತ್ಸವ-ಮಿಸ್ಸೌರಿಯ ಸೇಂಟ್ ಲೂಯಿ(ಸ್)ನ ನೆನಪುಗಳು : ಭಾಗ 2
* ಎಸ್.ಕೆ. ಹರಿಹರೇಶ್ವರ, ಸ್ಟಾಕ್‌ಟನ್, ಕ್ಯಾಲಿಫೋರ್ನಿಯಾ
ವಿವಾಹ ರಜತ ಮಹೋತ್ಸವ ಸಂಸ್ಕಾರ :
(‘ಹನಾಸುನಮ್’ (?) ಗೃಹ್ಯಸೂತ್ರ ಉದ್ಧೃತ ಪ್ರಣಾಳಿಕಾ):
- ಅಥ, ವಿವಾಹ ರಜತಮಹೋತ್ಸವ ಸಂಸ್ಕಾರಃ ।।(ಈಗ ಮದುವೆಯ ಬೆಳ್ಳಿಹಬ್ಬದ ಆಚರಣೆಯ ವಿಧಿಯನ್ನು ವಿವರಿಸಲಾಗುವುದು.)
- ಕರ್ತೃ :।।(ಯಾರು ಮಾಡಬೇಕು ?) ವಿವಾಹಿತ ದಂಪತ್ಯಾಃ ಪುತ್ರಃ, ಪುತ್ರೀ, ಪುತ್ರೌ, ಕೋ ಅಪಿ ‘ಕರ್ಮಾಹಂ ಕರಿಷ್ಯೇ’ ಇತಿ ಸಂಕಲ್ಪಂ ಕುರ್ಯಾತ್।।(ಮದುವೆಯಾದ ದಂಪತಿಗಳ ಮಗ, ಮಗಳು, ಮಕ್ಕಳು ಯಾರೇ ಬೇಕಾದರೂ ‘ಈ ಕಾರ್ಯಕ್ರಮವನ್ನು ಮಾಡೋಣ’ ಎಂದು ನಿಶ್ಚಯಿಸಬಹುದು !)
- ದಿನ ನಿರ್ಣಯ :।।(ಮಾಡಬೇಕಾದ ದಿನ ಯಾವುದು ?) ವಿವಾಹದಿನಾತ್ ಗತೇ ಪಂಚ- ವಿಂಶತ್ಯೈವತ್ಸರೇ, ಶಾಸ್ತ್ರೋಕ್ತ ಶುಭದಿನೇ, ಬನ್ಧುಮಿತ್ರಾಣಾಂ ಅಹೂಯ, ತೇಷಾಂ ಸಮ್ಮುಖೇ, ಲೋಕಾಚಾರಂ ಅನುಸೃತ್ಯ , ಕರಣೀಯಂ ಇದಂ ವಿವಾಹ ರಜತಮಹೋತ್ಸವ ಸಂಸ್ಕಾರಃ ।। (ಮದುವೆಯ ದಿನದಿಂದ ಇಪ್ಪತ್ತೆೈದು ವರುಷಗಳು ಕಳೆದ ನಂತರ, ಶಾಸ್ತ್ರೋಕ್ತವಾದ ಒಂದು ಒಳ್ಳೆಯ ದಿನವನ್ನು ಆರಿಸಿಕೊಂಡು, ನೆಂಟರಿಷ್ಟರನ್ನು ಆಹ್ವಾನಿಸಿ, ಅವರೆದುರು, ತಮ್ಮ ಪದ್ಧತಿಗೆ ಅನುಗುಣವಾಗಿ, ಈ ಮದುವೆಯ ಬೆಳ್ಳಿಹಬ್ಬವನ್ನು ಆಚರಿಸಬೇಕು !)
- ಸಭಾ ಪ್ರವೇಶ :।।(ಸಭೆಯಾಳಗೆ ಬರುವುದು) : ಸ್ನಾತ್ವಾ , ಶುಕ್ಲಂ ವಾಸಸೀಂ ಪರಿಧಾಯ, ಧೃತ-ತಿಲಕಃ, ಮಂಗಲದ್ರವೈಃ, ದಂಪತ್ಯಾಃ ಪುತ್ರ- ಪುತ್ರೀ ಸಹಿತಃ, ಪುರೋಹಿತ:, ಕಾರ್ಯಕ್ರಮ ನಿರ್ವಾಹಕ: ವಾ, ಸಭಾಂ ಪ್ರವಿಶತಿ ।। (ಶುಭ್ರಸ್ನಾತರಾಗಿ, ಬಿಳೀ ಬಟ್ಟೆಯನ್ನು ಧರಿಸಿ, ತಿಲಕವಿಟ್ಟುಕೊಂಡು, ಮಂಗಳದ್ರವ್ಯಗಳೊಂದಿಗೆ ದಂಪತಿಗಳು ಮತ್ತು ಅವರ ಮಕ್ಕಳೊಂದಿಗೆ, ಪುರೋಹಿತರು ಅಥವಾ ಕಾರ್ಯಕ್ರಮ ನಿರ್ವಾಹಕರು ಸಭೆಯನ್ನು ಪ್ರವೇಶಿಸುತ್ತಾರೆ.)
ಸಂಕಲ್ಪ :।।(ಕೆಲಸ ಮಾಡಲು ಮನಸ್ಸು ಮಾಡುವುದು) : ಶುಭಾಸನೇ ಉಪವಿಶ್ಯ, ದೇಶಕಾಲೌ ಸಂಕೀರ್ತ್ಯ, ‘ಅಸ್ಯ ಯಜಮಾನಸ್ಯ, ಸಕುಟುಂಬ ಸಪರಿವಾರಸ್ಯ, ಕ್ಷೇಮ, ಅಭ್ಯುದಯ, ಆರೋಗ್ಯ, ಶಾನ್ತಿ ಪ್ರಾಪ್ತ್ಯರ್ಥಂ, ‘ವಿವಾಹ ರಜತ ಮಹೋತ್ಸವ’ ಸಂಸ್ಕಾರಾರ್ಥೇ, ಯಥಾ ಮಿಲಿತ ದ್ರವ್ಯೇನ, ಯಥಾಶಕ್ತಿ , ಯಥೋಚಿತ ಕರ್ಮ ಕರಿಷ್ಯೇ- ಇತಿ ಸಂಕಲ್ಪಯೇತ್।। (ಶುಭಾಸನದಲ್ಲಿ ಕುಳಿತುಕೊಂಡು, ಎಲ್ಲಿ ಯಾವದಿನ ಈ ಶುಭಕಾರ್ಯವನ್ನು ಮಾಡತೊಡಗಿದ್ದೇವೆ ಎಂಬುದನ್ನು ಹೇಳಿಕೊಳ್ಳುತ್ತಾ, ‘ಈ ಕಾರ್ಯಕ್ರಮದ ಯಜಮಾನರ ಕುಟುಂಬ ಪರಿವಾರದವರಿಗೆ ಕ್ಷೇಮ, ಅಭ್ಯುದಯ, ಆರೋಗ್ಯ, ಶಾನ್ತಿ ಉಂಟಾಗಲಿ ಎಂಬ ಉದ್ದೇಶದಿಂದ, ಕೈಗೆ ದೊರೆತ ಸಾಮಗ್ರಿಗಳೊಡನೆ, ಯಥೋಚಿತವಾಗಿ ಈ ‘ಮದುವೆಯ ಬೆಳ್ಳಿಯ ಹಬ್ಬ’ದ ಸಂಸ್ಕಾರವನ್ನು ನಡೆಸುತ್ತಿದ್ದೇನೆ (ವೆ)’- ಎಂದು ಸಂಕಲ್ಪ ಮಾಡಬೇಕು.)- ಪ್ರಾರ್ಥನಾ:(ದೇವರಲ್ಲಿ ನಿವೇದನೆ) : ಆದೌ, ನಿರ್ವಿಘ್ನ ಸಿದ್ಧ್ಯರ್ಥೇ, ಶ್ರೀ ಗಣಪತಿ ಪೂಜನಂ, ತದುಪರಿ, ಸರಸ್ವತೀ, ಲಕ್ಷ್ಮೀ, ಗೌರೀ, ಕುಲದೇವತಾ ಪೂಜನಂ ಚ ಕಾರಯೇತ್ ।। (ಮುಂದೆ ತೊಂದರೆಯೇನೂ ಎದುರಾಗದಿರಲೆಂದು, ಆರಂಭದಲ್ಲಿ , ಬೆನಕನ ಪೂಜೆಯನ್ನೂ , ನಂತರ ಶಾರದೆ, ಲಕ್ಷ್ಮೀ, ಪಾರ್ವತೀ ಮತ್ತು ಮನೆಯ ದೇವರ ಪೂಜೆಗಳನ್ನೂ ಮಾಡಬೇಕು.)
- ಅಥ ‘ವರ’ ಸುಸ್ವಾಗತಮ್ ।।(ಈಗ ವರನನ್ನು ಎದುರುಗೊಂಡು ಕರೆತರುವುದು ) : ಮಂಗಳ- ದ್ರವ್ಯೈ:, ಪುತ್ರೇಣ ಸಹ, ‘ವರಃ’ ವಿವಾಹ- ಮಂಟಪಂ ಪ್ರತಿ ಅಗಚ್ಛತಿ, ಪ್ರವಿಶತಿ । ಮಾರ್ಗ- ಪಾರ್ಶ್ವ ಸ್ಥಿತಾಃ ಸಭಿಕಾಃ ಆಶೀರ್ವಾದ ಪೂರ್ವಕಂ, ವರೋಪರಿ ಪುಷ್ಪ- ವರ್ಷಾಂ ಕುರ್ವನ್ತು ।। (ಮಂಗಳ ದ್ರವ್ಯಗಳನ್ನು ಬೆಳ್ಳಿ ತಟ್ಟೆಯಾಂದರಲ್ಲಿ ಇರಿಸಿಕೊಂಡು, ಕಲಶ ಕನ್ನಡಿ ಪೂರ್ಣಕುಂಭಗಳೊಂದಿಗೆ, ಮಕ್ಕಳನೊಡಗೂಡಿ, ‘ವರ’ನು ವಿವಾಹಮಂಟಪದತ್ತ ಬರುತ್ತಿರಲು, ಇಕ್ಕೆಲಗಳಲ್ಲಿ ನಿಂತ ಸಭಿಕರು ವರನ ತಲೆಯ ಮೇಲೆ ಪುಷ್ಪವೃಷ್ಟಿಯನ್ನು ಕರೆದು ಆಶಿರ್ವದಿಸುತ್ತಾರೆ.)ತತ್ರ ಮಂತ್ರಾಃ ।। ‘ಶನ್ ನೋ ಮಿತ್ರಃ, ಶಂ ವರುಣಃ. .. ..‘, ‘ರಾಜಾಧಿರಾಜಾಯ ಪ್ರಸಹ್ಯಸಾಯಿನೇ.... ।’ ಇತಿ ।। (ಮೇಲೆ ಹೇಳಿದ ಮಂತ್ರಗಳನ್ನು ಹೇಳಬಹುದು.) ಸಭಾ-ಮಂಟಪಂ ಪ್ರವಿಶ್ಯ, ವರಃ ಪ್ರಾಂಗ್ಮುಖಂ ತಿಷ್ಠತಿ।। ( ಸಭಾ- ಮಂಟಪವನ್ನು ಒಳಹೊಕ್ಕು, ವೇದಿಕೆಯನ್ನು ಹತ್ತಿ, ವರನು ಪೂರ್ವಕ್ಕೆ ಮುಖಮಾಡಿ ನಿಲ್ಲುತ್ತಾನೆ.)
- ‘ವಧೂ’ ಆಗಮನಮ್ ।।(ಈಗ, ‘ವಧು’ವನ್ನು ಎದುರುಗೊಂಡು ಕರೆತರುವುದು ) : ಮಂಗಳ-ದ್ರವ್ಯೈ:, ಪುತ್ರೇಣ ಸಹ, ‘ವಧೂ’ ವಿವಾಹ- ಮಂಟಪಂ ಪ್ರತಿ ಆಗಚ್ಛತಿ, ಪ್ರವಿಶತಿ। ಮಾರ್ಗ- ಪಾರ್ಶ್ವ ಸ್ಥಿತಾಃ ಸಭಿಕಾಃ ಆಶೀರ್ವಾದ ಪೂರ್ವಕಂ, ವಧ್ವೋಪರಿ ಪುಷ್ಪ ವರ್ಷಾಂ ಕುರ್ವನ್ತು ।। (ಮಂಗಳ ದ್ರವ್ಯಗಳನ್ನು ಬೆಳ್ಳಿತಟ್ಟೆಯಾಂದರಲ್ಲಿ ಇರಿಸಿಕೊಂಡು, ಕಲಶ ಕನ್ನಡಿ ಪೂರ್ಣಕುಂಭಗಳೊಂದಿಗೆ, ಮಕ್ಕಳೊಡಗೂಡಿ, ‘ವಧು’ವು ವಿವಾಹಮಂಟಪದತ್ತ ಬರುತ್ತಿರಲು, ಇಕ್ಕೆಲಗಳಲ್ಲಿ ನಿಂತ ಸಭಿಕರು ವಧುವಿನ ತಲೆಯಮೇಲೆ ಪುಷ್ಪವೃಷ್ಟಿಯನ್ನು ಕರೆದು ಆಶಿರ್ವದಿಸುತ್ತಾರೆ.)












Click it and Unblock the Notifications