ಪ್ರಸನ್ನ ಚಾಲನೆಯಲ್ಲಿ ಅಸ್ಟಿನ್ ವಾರ್ತಾ ಪತ್ರ
ಅಭಿನಂದನೆಗಳು !
ಏಳು ವರ್ಷದ ಹುಡುಗಿ ಮೇಘನಾ ಸಂದೇಶ್ ಬ್ಲೂ ಬಾನೆಟ್ ಟ್ರಾಯಲ್ ಎಲಿಮೆಂಟರಿ ಶಾಲೆಯಲ್ಲಿ ‘ಸ್ಟೂಡೆಂಡ್ ಆಫ್‌ಸಿಕ್ಸ್ ವೀಕ್ಸ್’ ಎಂಬ ಹೆಗ್ಗಳಿಕೆ ಗಿಟ್ಟಿಸಿಕೊಂಡಿದ್ದಾಳೆ.
ಶಾಲೆಯಲ್ಲಿ ಈಕೆಯ ದಿನ ಆರಂಭವಾಗುವುದೇ ಪ್ರಾಂಶುಪಾಲರನ್ನು ಮೊದಲು ಗೌರವಿಸಿದ ಬಳಿಕ. ಆದ್ದರಿಂದ ಪ್ರಾಂಶುಪಾಲರ ಗೌರವ ಪಟ್ಟಿಯಲ್ಲಿಯೂ ಆಕೆಯ ಹೆಸರಿದೆ. ಇದಕ್ಕಾಗಿ ಮೇಘನಾ ಪಡೆದ ಇನ್ನೊಂದು ಬಹುಮಾನ ‘ಯು ಮೇಕ್ ಮೈ ಡೇ’.
ಪ್ರವಾಸ ಸಂಗಾತಿ
ಡೆಲ್ಟಾ ಏರ್‌ಲೈನ್ಸ್ ಮೂಲಕ ಜುಲೈ 3 ರಂದು ಬೆಂಗಳೂರು ಅಥವ ಮುಂಬೈಗೆ ತೆರಳುತ್ತೀರಾ ? ಇಲ್ಲಿನ ವಿಜಯಾ ರಾವ್ ಮತ್ತು ಆಕೆಯ ಮಕ್ಕಳು ಅವತ್ತು ಬೆಂಗಳೂರಿಗೆ ಪ್ರವಾಸ ಹೊರಟಿದ್ದಾರೆ. ಮಕ್ಕಳು, ಮತ್ತು ಲಗೇಜಿನೊಂದಿಗೆ ಒಬ್ಬರೇ ಪಯಣಿಸುವುದು ಕಷ್ಟವೆಂದು ಬೇರೆಯೇ ಹೇಳಬೇಕೇ ? ನೀವೂ ಅಂದೇ ಅಚಾನಕ್ ಆಗಿ ಭಾರತಕ್ಕೆ ಹೊರಟಿದ್ದರೆ ಪ್ರಸನ್ನರನ್ನು ಸಂಪರ್ಕಿಸುತ್ತೀರಾ ?
ಕನ್ನಡ ಸಂಘಕ್ಕೆ ಸ್ವಾಗತ
ಆಸ್ಟಿನ್ ಕನ್ನಡ ಸಂಘಕ್ಕೆ ಹೊಸ ಸದಸ್ಯರಾಗಿ ಮಹೇಶ್ ಮಂಜಯ್ಯ ಬಂದಿದ್ದಾರೆ. ಮೂಲತಃ ಮೈಸೂರಿನವರು. ಇಲ್ಲಿನ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಶ್ವಿನ್ ಅರುಣ್ ಕೂಡ ಸಂಘಕ್ಕೆ ಹೊಸಬರು. ಇಬ್ಬರಿಗೂ ಸ್ವಾಗತ.
ಮೇ ತಿಂಗಳಲ್ಲಿ ಕನ್ನಡ ಸಂಘ
ಬೆಂಗಳೂರು ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲಿನ ಅತ್ಯಾಚಾರವನ್ನು ಕನ್ನಡ ಸಂಘದ ಸದಸ್ಯರು ಖಂಡಿಸಿದ್ದಾರೆ. ಈ ಕುರಿತ ಹೇಳಿಕೆಗೆ 35 ಸದಸ್ಯರು ಸಹಿ ಹಾಕಿದ್ದಾರೆ. ಬೆಂಗಳೂರಿನ ಡಿಐಜಿ ಅವರಿಗೆ ಈ ಕುರಿತು ಪ್ರಸನ್ನ ಅವರು ಪತ್ರವನ್ನೂ ಬರೆದಿದ್ದಾರೆ. ಅಂದಹಾಗೆ, ಲಕ್ಷ್ಮೀ ಚಂದ್ರಶೇಖರ್ ಅವರ ‘ಇವಳೊಬ್ಬಳು ಹೆಂಗಸು’ ಏಕ ಪಾತ್ರಾಭಿನಯ ಕಾರ್ಯಕ್ರಮ ಸದಸ್ಯರನ್ನು ರಂಜಿಸಿತು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು