"ನಿಮ್ಮ ಗಂಡನಿಗಿಂತ ವಿಜಯ್ ವಾಸಿ" ಎಂದಿದ್ದಕ್ಕೆ ಗೊಳ್ ಎಂದು ನಕ್ಕುಬಿಟ್ಟಿದ್ರು ನಟಿ ಜ್ಯೋತಿಕಾ
ತಮಿಳು ನಟ ಟಿವಿಕೆ ಪಕ್ಷದ ನಾಯಕ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ವಿಚಾರ ಭಾರೀ ಚರ್ಚೆ ಹುಟ್ಟು ಹಾಕಿದೆ. ಇದಕ್ಕೆಲ್ಲಾ ನಟಿ ತ್ರಿಶಾ ಕಾರಣ ಎನ್ನುವ ಆರೋಪ ಕೇಳಿ ಬರುತ್ತಿದೆ. ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿರುವ ಸಂಗೀತಾ, ತಮ್ಮ ಪತಿಗೆ ನಟಿಯೊಬ್ಬಳ ಜೊತೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ಇದು ಭಾರೀ ಸಂಚಲನ ಸೃಷ್ಟಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಭಾರೀ ಚರ್ಚೆ ಹುಟ್ಟಾಕ್ಕಿದೆ.
27 ವರ್ಷಗಳ ಹಿಂದೆ ದಳಪತಿ ವಿಜಯ್ ಹಾಗೂ ಸಂಗೀತಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಸಿನಿಮಾ ಬಿಟ್ಟು ತಮಿಳುನಾಡು ರಾಜಕೀಯರಂಗಕ್ಕೆ ವಿಜಯ್ ಧುಮುಕಿದ್ದಾರೆ. ಟಿವಿಕೆ ಪಕ್ಷ ಸ್ಥಾಪಿಸಿ ಮುಂದಿನ ತಮಿಳುನಾಡು ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಇಂತಹ ಸಮಯದಲ್ಲಿ ವೈಯಕ್ತಿಕ ಜೀವನದಲ್ಲಿ ಹಿನ್ನಡೆ ಎದುರಿಸುವಂತಾಗಿದೆ. ವಿಜಯ್- ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ತಮಿಳುನಾಡು ರಾಜಕೀಯರಂಗದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಇದೆಲ್ಲದ ನಡುವೆ ಅಂದು ನಟಿ ಜ್ಯೋತಿಕಾ ಮಾಡಿದ್ದ ಕಾಮೆಂಟ್ ಬಗ್ಗೆ ಚರ್ಚೆ ಆಗ್ತಿದೆ.

ಫೆಬ್ರವರಿ 27ರಂದು ಸಂಗೀತಾ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಹಾಗೂ ತ್ರಿಶಾ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಊಹಾಪೋಹ ಇಂದು ನಿನ್ನೆಯದ್ದಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಈ ಬಗ್ಗೆ ಚರ್ಚೆ ಆಗುತ್ತಿತ್ತು. ಇಬ್ಬರೂ ಡಿವೋರ್ಸ್ ಪಡೆಯುತ್ತಾರೆ ಎನ್ನುವ ವದಂತಿ ಹರಿದಾಡುತ್ತಿತ್ತು. ಆಗ ತ್ರಿಶಾ ಹೆಸರನ್ನು ತಳುಕು ಹಾಕಲಾಗುತ್ತಿತ್ತು. ಇದೀಗ ಸಂಗೀತಾ ಡಿವೋರ್ಸ್ ಕೋರುತ್ತಿದ್ದಂತೆ ವದಂತಿಗಳೆಲ್ಲಾ ನಿಜ ಎನ್ನುವ ಚರ್ಚೆ ಶುರುವಾಗಿದೆ.
ತಮಿಳು ಚಿತ್ರರಂಗದಲ್ಲಿ ಸ್ಟಾರ್ ಜೋರಾಗಿದೆ. ಸ್ಟಾರ್‌ಗಳ ಫ್ಯಾನ್ಸ್ ನಡುವೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಸೂರ್ಯ ನಟಿಸಿದ್ದ 'ಕಂಗುವ' ಸಿನಿಮಾ ಹೀನಾಯವಾಗಿ ಸೋತಿತ್ತು. ಕೆಲವರು ಬೇಕೆಂದೆ ಸಿನಿಮಾ ಬಗ್ಗೆ ನೆಗೆಟಿವ್ ಹಬ್ಬಿಸಿದರು ಎಂದು ಸೂರ್ಯ ಪತ್ನಿ ನಟಿ ಜ್ಯೋತಿಕಾ ಆರೋಪಿಸಿದ್ದರು. ಇದು ವಿಜಯ್ ಹಾಗೂ ಸೂರ್ಯ ಅಭಿಮಾನಿಗಳ ನಡುವೆ ಟ್ರೋಲ್ ವಾರ್‌ಗೆ ಕಾರಣವಾಗಿತ್ತು.
Now you know why Jo anni laughed at this comment. pic.twitter.com/PUa1D6EHAv
— Don Ak (@Indiamyheart123) February 28, 2026
ನಟಿ ಜ್ಯೋತಿಕಾ ಪ್ರತಿಕ್ರಿಯಿಸಿ "ಕಂಗುವ' ಸಿನಿಮಾ ಆರಂಭದ ಅರ್ಧ ಗಂಟೆ ವರ್ಕೌಟ್ ಆಗಿಲ್ಲ. ಕೆಲ ಲೋಪದೋಷಗಳಿರುವುದು ನಿಜ. ಹಾಗಂತ ಇಡೀ ಸಿನಿಮಾ ಚೆನ್ನಾಗಿಲ್ಲ ಎನ್ನುವುದು ಸರಿಯಲ್ಲ" ಎಂದು ಪೋಸ್ಟ್ ಮಾಡಿದ್ದರು. ಹಾಗಾಗಿ ಕೆಲವರು ಆಕೆಯನ್ನು ಟ್ರೋಲ್ ಮಾಡಿದ್ದರು. ಬಿಳಿ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಧರಿಸಿದ್ದ ಫೋಟೊಗಳನ್ನು ಹಂಚಿಕೊಂಡು ಜ್ಯೋತಿಕಾ ಪೋಸ್ಟ್ ಮಾಡಿದ್ದರು. ಅದಕ್ಕೆ ಕಾಮೆಂಟ್ ಬಾಕ್ಸ್‌ನಲ್ಲಿ ಟ್ರೋಲ್ ಮಾಡಿ ಕೆಲವರು ವಿಕೃತಿ ಮೆರೆದಿದ್ದರು. 'ಕಂಗುವ' ಸಿನಿಮಾ ವಿಚಾರ ಎಳೆದು ತಂದು ಸೂರ್ಯ ಕಾಲೆಳೆದ್ದಿದ್ದರು.
"ನಿಮ್ಮ ಗಂಡನಿಗಿಂತ ನಟ ಪ್ರದೀಪ್ ರಂಗನಾಥನ್ ವಾಸಿ" ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದ. ಅದಕ್ಕೆ ಪ್ರತಿಯಾಗಿ "ನಿಮ್ಮ ಗಂಡನಿಗಿಂತ ವಿಜಯ್ ವಾಸಿ" ಎಂದು ಮತ್ತೊಬ್ಬ ಕಾಮೆಂಟ್ ಮಾಡಿದ್ದು ವೈರಲ್ ಆಗಿತ್ತು. ಇದಕ್ಕೆ ಜ್ಯೋತಿಕಾ ಪ್ರತಿಕ್ರಿಯಿಸಿ ಗೊಳ್ ಎಂದು ನಗುವ ಎಮೋಜಿ ಪೋಸ್ಟ್ ಮಾಡಿದ್ದರು. ಬಳಿಕ ಡಿಲೀಟ್ ಕೂಡ ಮಾಡಿಬಿಟ್ಟಿದ್ದರು. ಆದರೆ ಸ್ಕ್ರೀನ್ ಶಾಟ್ ವೈರಲ್ ಆಗಿತ್ತು.
ಸದ್ಯ ವಿಜಯ್ ಹಾಗೂ ಸಂಗೀತಾ ಡಿವೋರ್ಸ್ ಸುದ್ದಿ ವಿಚಾರ ನಡುವೆ ಸೂರ್ಯ ಅಭಿಮಾನಿಗಳು ಅಂದು ಜ್ಯೋತಿಕಾ ಮಾಡಿದ್ದ ಕಾಮೆಂಟ್ ನೆನಪಿಸುತ್ತಿದ್ದಾರೆ. ಈಗ ಗೊತ್ತಾಯ್ತಾ ಜ್ಯೋತಿಕಾ ಅತ್ತಿಗೆ ಯಾಕೆ ಆ ಕಾಮೆಂಟ್ ನೋಡಿ ನಕ್ಕಿದ್ದರು ಎಂದು ಅಣಕವಾಡುತ್ತಿದ್ದಾರೆ.
ವಿಜಯ್ ಹಾಗೂ ತ್ರಿಶಾ ಮಾತ್ರವಲ್ಲ ವಿಜಯ್ ಹಾಗೂ ಜ್ಯೋತಿಕಾ ಜೋಡಿ ಕೂಡ ಕಾಲಿವುಡ್‌ನಲ್ಲಿ ಸೂಪರ್ ಹಿಟ್ ಆಗಿತ್ತು. 'ಖುಷಿ' ಹಾಗೂ 'ತಿರುಮಲೈ' ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. 2003ರಲ್ಲಿ ಬಂದಿದ್ದ 'ಖುಷಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಒಟ್ಟಾರೆ ವಿಜಯ್, ಸಂಗೀತಾ ಡಿವೋರ್ಸ್ ವಿಚಾರ ನಾನಾ ರೀತಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲು ಆಹಾರವಾಗುವಂತಾಗಿದೆ.
Credit: Filmibeat
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications