Get Updates
Get notified of breaking news, exclusive insights, and must-see stories!

ಇದಪ್ಪಾ ರಶ್ಮಿಕಾ ಕ್ರೇಜ್; ಒಂದೇ ಕೈಯಲ್ಲಿ ರಣ್ಬೀರ್- ಆಲಿಯಾ, ಸಿದ್ಧ್-ಕಿಯಾರಾ ದಾಖಲೆ ಮುರಿದ ಸಾನ್ವಿ

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸುನಾಮಿ ಎಬ್ಬಿಸಿದೆ. ಕೋಟಿ ಕೋಟಿ ಲೈಕ್ಸ್, ಲಕ್ಷ ಲಕ್ಷ ಶೇರ್, ಕಾಮೆಂಟ್ಸ್ ಗಿಟ್ಟಿಸಿಕೊಂಡು ರಶ್ಮಿಕಾ, ವಿಜಯ್ ಇನ್‌ಸ್ಟಾಗ್ರಾಮ್ ಪೋಸ್ಟ್ ಸದ್ದು ಮಾಡ್ತಿದೆ. ಕೆಲವೇ ಗಂಟೆಗಳಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ವಿಜಯ್‌ಗಿಂತ ರಶ್ಮಿಕಾ ಹವಾ ಜೋರಾಗಿರುವುದು ಗೊತ್ತಾಗುತ್ತಿದೆ.

ತಮ್ಮಿಷ್ಟದ ನಟ-ನಟಿ ಮದುವೆ ಅಂದರೆ ಅಭಿಮಾನಿಗಳ ಸಂಭ್ರಮ ಜೋರಾಗಿಯೇ ಇರುತ್ತದೆ. ಇಷ್ಟು ದಿನ ಬೆಸ್ಟ್ ಫ್ರೆಂಡ್ಸ್ ಎನ್ನುತ್ತಿದ್ದ ವಿಜಯ್, ರಶ್ಮಿಕಾ ಕೊನೆಗೂ ಮದುವೆಯಾಗಿ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಬಹಳ ದಿನಗಳಿಂದ ಇಬ್ಬರೂ ಡೇಟಿಂಗ್ ಮಾಡುತ್ತಿರುವುದು ಗುಟ್ಟಾಗಿ ಉಳಿದಿರಲಿಲ್ಲ. ಆದರೆ ಅದನ್ನು ಒಪ್ಪಿಕೊಳ್ಳಲು ಇಬ್ಬರೂ ಹಿಂದೇಟು ಹಾಕುತ್ತಿದ್ದರು. ಮದುವೆ ಸಿದ್ಧತೆಗಳು ನಡೆದರೂ ಮೌನ ವಹಿಸಿದ್ದರು. 3 ದಿನಗಳ ಹಿಂದೆಯಷ್ಟೆ ಜೋಡಿ ಅಧಿಕೃತವಾಗಿ ಮದುವೆ ವಿಷಯ ಹಂಚಿಕೊಂಡಿತ್ತು. ತಮ್ಮ ಮದುವೆಗೆ 'ವಿರೋಷ್' ಕಲ್ಯಾಣ ಎಂದು ಹೆಸರಿಟ್ಟಿತ್ತು.


Rashmika Mandanna Breaks Instagram Record as Wedding Post with Vijay Deverakonda Goes Viral

ರಾಜಸ್ಥಾನದ ಉದಯ್‌ಪುರದಲ್ಲಿರುವ ಐಷಾರಾಮಿ ರೆಸಾರ್ಟ್ ಹೋಟೆಲ್‌ನಲ್ಲಿ ನಿನ್ನೆ(ಫೆಬ್ರವರಿ 26) ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಕನಸಿನಂತೆ ನಡೆದಿದೆ. ಇಬ್ಬರೂ ರಾಜ ರಾಣಿಯಂತೆ ಮದುವೆ ಸಂಭ್ರಮಲ್ಲಿ ಕಂಗೊಳಿಸಿದ್ದಾರೆ. ಸಾಂಪ್ರದಾಯಿಕ ಉಡುಗೆಗಳಲ್ಲಿ ವಧು, ವರವಾಗಿ ಇಬ್ಬರೂ ಬಹಳ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಎಲ್ಲರೂ ಕಾಮೆಂಟ್ ಮಾಡುತ್ತಿದ್ದಾರೆ.

ರಶ್ಮಿಕಾ ಹಾಗೂ ವಿಜಯ್ ಮದುವೆ ಉಡುಗೆ ವಿನ್ಯಾಸದ ಹಿಂದೆ ಅನಾಮಿಕಾ ಖನ್ನಾ ಕೈಚಳವಿದೆ. ಈ ಬಗ್ಗೆ ಆಕೆ ಮಾಹಿತಿ ಹಂಚಿಕೊಂಡಿದ್ದಾರೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ವಿಜಯ್- ರಶ್ಮಿಕಾ ಜೋಡಿ ಅಭಿಮಾನಿಗಳಿಗೆ ಮೋಡಿ ಮಾಡಿದೆ. ಇಬ್ಬರ ಕ್ರೇಜ್ ಎಷ್ಟಿದೆ ಅಂದ್ರೆ ಕೆಲವೇ ಗಂಟೆಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ದಾಖಲೆ ಬರೆದಿದೆ. ಈ ಹಿಂದೆ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ, ಸಿದ್ಧಾರ್ಥ್ ಮಲ್ಹೋತ್ರಾ, ವಿಕ್ಕಿ ಕೌಶಲ್- ಕತ್ರೀನಾ ಕೈಫ್ ಜೋಡಿ ಮದುವೆ ಪೋಸ್ಟ್‌ಗಳು ಹೆಚ್ಚು ಲೈಕ್ಸ್ ಗಿಟ್ಟಿಸಿದ್ದ ದಾಖಲೆ ಮಾಡಿದ್ದವು. ಕೆಲವೇ ಗಂಟೆಗಳಲ್ಲಿ ಈ ದಾಖಲೆಯನ್ನು ರಶ್ಮಿಕಾ ಪೋಸ್ಟ್ ಮುರಿದಿದೆ.

3 ವರ್ಷಗಳ ಹಿಂದೆ ವಿಕ್ಕಿ ಕೌಶಲ್- ಕತ್ರೀನಾ ಕೈಫ್ ಮದುವೆ ನಡೆದಿತ್ತು. ಅಂದು ಮದುವೆ ಫೋಟೊಗಳನ್ನು ಹಂಚಿಕೊಂಡು ಕಿಯಾರಾ ಮಾಡಿದ್ದ ಪೋಸ್ಟ್ ಈವೆರೆಗೆ 15.8 ಮಿಲಿಯನ್(1.58 ಕೋಟಿ) ಲೈಕ್ಸ್ ಗಿಟ್ಟಿಸಿದೆ. ಆದರೆ ರಶ್ಮಿಕಾ ಮಂದಣ್ಣ ಮದುವೆ ಚಿತ್ರಗಳ ಪೋಸ್ಟ್ ಈವರೆಗೆ (ಕೇವಲ 13 ಗಂಟೆಗಳಲ್ಲಿ) 14.8 ಮಿಲಿಯನ್ ಲೈಕ್ಸ್ ಪಡೆದು ಸಂಚಲನ ಸೃಷ್ಟಿಸಿದೆ.

ವಿಜಯ್ ದೇವರಕೊಂಡ ಮದುವೆ ಪೋಸ್ಟ್ ಕೂಡ ಈವರೆಗೆ 12.5 ಮಿಲಿಯನ್ ಲೈಕ್ಸ್ ಮಾತ್ರ ಪಡೆದಿಕೊಂಡಿದೆ. ಆ ಮೂಲಕ ಪತಿ ವಿಜಯ್ ದೇವರಕೊಂಡ ಕ್ರೇಜ್ ಅನ್ನು ಕೂಡ ರಶ್ಮಿಕಾ ಹಿಂದಿಟ್ಟಿದ್ದಾರೆ. 9 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಮಾಡಿದ್ದ ಪೋಸ್ಟ್ 4.5 ಮಿಲಿಯನ್ ಲೈಕ್ಸ್, ಆಲಿಯಾ ಭಟ್ ಮದುವೆ ಪೋಸ್ಟ್ ಈವರೆಗೆ 12.5 ಮಿಲಿಯನ್, ಕತ್ರೀನಾ ಕೈಫ್ ಪೋಸ್ಟ್ 12.1 ಮಿಲಿಯನ್ ಲೈಕ್ಸ್ ಮಾತ್ರ ಗಳಿಸಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಇದುವರೆಗೆ ಮದುವೆಯ ಫೋಟೋಗಳಿಗೆ ಅತಿ ಹೆಚ್ಚು ಲೈಕ್ ಪಡೆದ ಸೆಲೆಬ್ರಿಟಿ ಅಂದರೆ ಹಾಲಿವುಡ್ ನಟಿ, ಗಾಯಕಿ ಸೆಲೆನಾ ಗೊಮೆಜ್. ಕಳೆದ ವರ್ಷ ಆಕೆ ಮಾಡಿದ್ದ ಪೋಸ್ಟ್ ಈವರೆಗೆ 24.6 ಮಿಲಿಯನ್ ಲೈಕ್ಸ್ ಗಿಟ್ಟಿಸಿದೆ. ವಿಜಯ್- ರಶ್ಮಿಕಾ ಒಟ್ಟಿಗೆ ಪೋಸ್ಟ್ ಮಾಡಿದ್ದರೆ ಈ ದಾಖಲೆ ಕೂಡ ಮುರಿಯಬಹುದಿತ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ವಿಜಯ್- ರಶ್ಮಿಕಾ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

Credit: Filmibeat

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+