Get Updates
Get notified of breaking news, exclusive insights, and must-see stories!

ಬರ್ತ್‌ಡೇ ಸಂಭ್ರಮದಲ್ಲಿ ಕಂಠಪೂರ್ತಿ ಕುಡಿದು ತೂರಾಡಿದ ಸೂಪರ್‌ಸ್ಟಾರ್, ಸದ್ದಿಲ್ಲದೇ ನಡೆದೇ ಹೋಯ್ತಾ 3ನೇ ಮದುವೆ ?

ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ.. ಈ ಕಾರಣಕ್ಕೆ ಅನೇಕರು ಇಲ್ಲಿ ಅಭಿಮಾನಿಗಳ ಅಭಿಮಾನಕ್ಕೆ ಅಭಿಮಾನಿಯಾಗಿದ್ದಾರೆ. ಅಭಿಮಾನಿಗಳಿಂದ ಬಿರುದುಗಳನ್ನ ಪಡೆಯುವ ಕಲಾವಿದರು ಅಭಿಮಾನಿಗಳಿಗೆ ತಾವೇ ವಿಶೇಷ ಬಿರುದುಗಳನ್ನೂ ಕೂಡ ನೀಡಿದ್ದಾರೆ. ಆದರೆ ಇಂತಹ ಅಭಿಮಾನಿಗಳಿಗೆ ಚಿತ್ರರಂಗದ ಸ್ಟಾರ್‌ಗಳು ರೋಲ್ ಮಾಡೆಲ್ ಆಗಿರಬೇಕು. ಮಾದರಿ ವ್ಯಕ್ತಿಯಾಗಿರಬೇಕು. ಯಾಕೆಂದರೆ ತಮ್ಮ ನೆಚ್ಚಿನ ಸ್ಟಾರ್‌ಗಳ ನಡೆ ನುಡಿಯನ್ನು ಇಲ್ಲಿ ಹಲವರು ಅನುಸರಿಸುತ್ತಾರೆ. ದೇವರಂತೆ ಪೂಜೆಯನ್ನು ಕೂಡ ಮಾಡುತ್ತಾರೆ.

ಆದರೆ, ದುರ್ದೈವ ಕೆಲವರು ಜನಪ್ರಿಯತೆಯಲ್ಲಿ ಮೈ ಮರೆಯುತ್ತಾರೆ. ಅಭಿಮಾನಿಗಳಿಗೆ ತಮ್ಮ ಅಭಿಮಾನದ ಮೇಲೆಯೇ ಅನುಮಾನ ಬರುವಂತೆ ನಡೆದುಕೊಳ್ಳುತ್ತಾರೆ. ಅಭಿಮಾನಿಯಾದ ತಪ್ಪಿಗೆ ಅವಮಾನವಾಗುವಂತೆ ಮಾಡುತ್ತಾರೆ. ತಪ್ಪು ಸಂದೇಶಗಳನ್ನು ನೀಡುತ್ತಾರೆ. ವಿವಾದಕ್ಕೀಡಾಗುತ್ತಾರೆ. ಉದಾಹರಣೆಗೆ ಪವನ್ ಸಿಂಗ್.


Pawan Singh at 40 Drunk amp amp Unsteady Viral Actress Feeding Cake Sparks 3rd Marriage Rumours

ಹೌದು. ಪವನ್ ಸಿಂಗ್ ಭೋಜ್‌ಪುರಿಯ ಪವರ್ ಸ್ಟಾರ್. ''ಪ್ರತಿಗ್ಯಾ''.. ''ಸತ್ಯ''.. ''ಗದ್ದಾರ್''.. ''ವಾಟೆಂಡ್''.. ''ಭೋಜ್‌ಪುರಿಯಾ ರಾಜಾ''.. ಹೀಗೆ ಹಲವು ಚಿತ್ರಗಳ ಮೂಲಕ ಉತ್ತರ ಪ್ರದೇಶ ಮತ್ತು ಬಿಹಾರದ ಸುತ್ತ ಮುತ್ತ ಜನರ ಹೃದಯ ಗೆದ್ದ ಪವನ್ ಸಿಂಗ್ ರಾಜಕಾರಣಿ ಕೂಡ ಹೌದು. ಗಾಯಕ ಕೂಡ ಹೌದು.

ಇಂಥಾ ಪವನ್‌ ಸಿಂಗ್‌ಗೆ ಈಗ 40ರ ಹರೆಯ. ಮೊನ್ನೆ ಮೊನ್ನೆ ( ಜನವರಿ 5 ) ಅಭಿಮಾನಿಗಳ ಜೊತೆ ಪವನ್ ಸಿಂಗ್ ತಮ್ಮ 40ನೇ ಬರ್ತ್‌ಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಆದರೆ, ಇದೇ ಸಮಯದಲ್ಲಿ
ಈ ಬರ್ತ್‌ಡೇ ಸಂಭ್ರಮಾಚರಣೆಯ ವಿಡಿಯೋ ಒಂದು ವೈರಲ್ ಆಗಿದೆ. ಇವರ ಹಾವ ಭಾವ ಈಗ ಚರ್ಚೆಗೆ ಕಾರಣವಾಗಿದೆ. ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ.

ಯಾಕೆಂದರೆ .. ನಿಲ್ಲಲು ಆಗದಷ್ಟು ಪವನ್ ಸಿಂಗ್ ಇಲ್ಲಿ ಕುಡಿದಿದ್ದಾರೆ ಎನ್ನುವುದು ವಿಡಿಯೋ ನೋಡ್ತಿದ್ದರೆ ಸ್ಪಷ್ಟವಾಗುತ್ತೆ. ಕೇಕ್ ಕಟ್ ಮಾಡಲು ಕೂಡ ಇಲ್ಲಿ ಪರದಾಡುವ ಪವನ್ ಸಿಂಗ್ ಮದ್ಯದ ಅಮಲಿನಲ್ಲಿಯೇ ಹರ ಹರ ಮಹಾದೇವ್ ಎಂದು ಘೋಷವಾಕ್ಯ ಕೂಗಿದ್ದಾರೆ. ಆ ನಂತರ ಪಕ್ಕದಲ್ಲಿದ್ದ ಸುಂದರಿಯ ಸಹಾಯದಿಂದ ಕೇಕ್ ಕಟ್ ಮಾಡಿದ್ದಾರೆ.

ಯಾರು ಈ ಸುಂದರಿ ?

ಇನ್ನು ಪವನ್ ಸಿಂಗ್‌ಗೆ ಈಗಾಗಲೇ ಎರಡು ಮದುವೆಯಾಗಿವೆ. 2014ರಲ್ಲಿ ನೀಲಂ ಸಿಂಗ್ ಅವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಮೂರೇ ತಿಂಗಳಿಗೆ ನೀಲಂ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದರು. ನೀಲಂ ನಿಧನದ ನಂತರ 2018ರಲ್ಲಿ ಜ್ಯೋತಿ ಸಿಂಗ್ ಅವರನ್ನು ಪವನ್ ಸಿಂಗ್ ಮದುವೆಯಾಗಿದ್ದರು.


Pawan Singh at 40 Drunk amp amp Unsteady Viral Actress Feeding Cake Sparks 3rd Marriage Rumours

ಆದರೆ ಈ ಸಂಬಂಧ ಕೇವಲ ನಾಲ್ಕೇ ವರ್ಷಕ್ಕೆ ಹಳಸಿತ್ತು. 2022ರಿಂದ ಶುರುವಾದ ಇವರ ದಾಂಪತ್ಯದ ಕಲಹ ಇವತ್ತಿನವರೆಗೆ ಮುಂದುವರೆದಿದೆ. ಎರಡು ಬಾರಿ ಬಲವಂತದಿಂದ ಗರ್ಭಪಾತ ಮಾಡಿಸಿದ್ದಾರೆ ಎಂಬ ಆರೋಪದಿಂದ ಹಿಡಿದು ಪವನ್ ಸಿಂಗ್ ಅವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನ ಮಾಡಿರುವದಾಗಿನವರೆಗೆ ಹಲವು ಆರೋಪಗಳನ್ನು ಜ್ಯೋತಿ ಸಿಂಗ್ ತಮ್ಮ ಪತಿ ಪವನ್ ಸಿಂಗ್ ಅವರ ಮೇಲೆ ಮಾಡಿದ್ದಾರೆ. ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದೆ.

ಹೀಗಿರುವಾಗ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಪವನ್ ಸಿಂಗ್ ಪಕ್ಕ ಸುಂದರಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಹಣೆಯ ಮೇಲೆ ಕುಂಕುಮ ಇರುವುದನ್ನು ಕಂಡು ಹಲವರು ಪವನ್ ಸಿಂಗ್ ಸದ್ದಿಲ್ಲದೇ ಮೂರನೇ ಮದುವೆಯಾದರಾ ಎಂದು ಅಚ್ಚರಿಗೊಂಡಿದ್ದಾರೆ. ಆದರೆ, ವಾಸ್ತವದಲ್ಲಿ ಪವನ್ ಸಿಂಗ್ ಪಕ್ಕದಲ್ಲಿರುವ ಚೆಲುವೆಯ ಹೆಸರು ಮಹಿಮಾ ಸಿಂಗ್. ವೃತ್ತಿಯಲ್ಲಿ ನಟಿಯಾಗಿರುವ ಮಹಿಮಾ ಸಿಂಗ್ ಜೊತೆ ಪವನ್ ಸಿಂಗ್ ಇತ್ತೀಚೆಗೆ ''ಬಾನಿ ಲೈಕಾ'' ಎಂಬ ಹಾಡೊಂದನ್ನು ಮಾಡಿದ್ದಾರೆ.

ಅಂದ್ಹಾಗೇ ಕಂಠಪೂರ್ತಿ ಕುಡಿದು ನಶೆಯಲ್ಲಿ ಪವನ್ ಸಿಂಗ್ ತೂರಾಡುತ್ತಿರುವ ವಿಡಿಯೋವನ್ನು ಬೇರೆ ಯಾರು ಅಲ್ಲ ಬದಲಿಗೆ ಪವನ್ ಸಿಂಗ್ ಅವರ ಎರಡನೇ ಪತ್ನಿ ಜ್ಯೋತಿ ಸಿಂಗ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪತಿಯ ವಿರುದ್ದ ಕಾನೂನು ಸಮರ ಸಾರಿರುವ ಜ್ಯೋತಿ ಸಿಂಗ್ ಈ ವಿಡಿಯೋ ಹಂಚಿಕೊಂಡಿದ್ದು ಸದ್ಯ ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಒಬ್ಬರು ನೀವು ಅಷ್ಟೊಂದು ಕುಡಿದಿದ್ದೀರಿ ಎಂದರೆ ಮಾತನಾಡಲು ಸಹ ಆಗುತ್ತಿಲ್ಲ ಎಂದರೆ ಮತ್ತೊಬ್ಬರು ನೀವು ಪವನ್ ಸಿಂಗ್ ಅಲ್ಲ, ಕುಡುಕ ಸಿಂಗ್ ಎಂದಿದ್ದಾರೆ. ಕೆಲವರು ಜ್ಯೋತಿ ಸಿಂಗ್ ಅವರನ್ನು ಗುರಿಯಾಗಿಸಿ, ನೀವು ಅಣ್ಣನ ಈ ಪರಿಸ್ಥಿತಿಯ ಕುರಿತು ವಿಡಿಯೋವನ್ನು ಬೇಕಂತಲೇ ಹಾಕಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Credit: Filmibeat

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+