Gold Rate: ಚಿನ್ನ ಕೊಳ್ಳುವವರಿಗಿಂದು ʼಗುರುದೆಸೆʼ..ಬೆಂಗಳೂರಲ್ಲಿ ಬರೋಬ್ಬರಿ 2,700 ಉಳಿತಾಯ! ಹಾಗಾದ್ರೆ ಬೆಲೆ ಎಷ್ಟು?
ಮಹಿಳೆಯರಿಗೆ ಇಂದು ಬಂಗಾರದಂತಹ ಸುದ್ದಿ ಸಿಕ್ಕಿದೆ. ಅದೇನೆಂದರೆ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಮುಖವಾಗಿದ್ದು, ಚಿನ್ನ ಕೊಳ್ಳುವವರ ಪಾಲಿಗೆ ಗುರುದೆಸೆ ಬಂದಂತಾಗಿದೆ. ಹಾಗೆಯೇ ಇದು ಮಹಿಳೆಯರ ಪಾಲಿಗೆ ದೊಡ್ಡ ಗುಡ್‌ನ್ಯೂಸ್ ಎಂದರೂ ತಪ್ಪಾಗಲ್ಲ. ಚಿನ್ನದ ಬೆಲೆಯಲ್ಲಿ ಇಂದು ಪ್ರಮುಖ ಇಳಿಕೆ ಕಂಡುಬಂದಿದ್ದು, ತಯಾರಿಕದರ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಬದಲಾವಣೆಯಿಂದ ಇದು ಸಂಭವಿಸಿದೆ. ಹಿನ್ನೋಟವಾಗಿ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಏರಿಳಿತ ಕಂಡುಬರುತ್ತಿದ್ದರೂ, ಇಂದಿನ ಇಳಿಕೆ ಗ್ರಾಹಕರಿಗೆ ಹಾಗೂ ಬಂಗಾರದ ಹೂಡಿಕೆದಾರರಿಗೆ ಉತ್ತಮ ಅವಕಾಶ ಒದಗಿಸಿದೆ.

ಚಿನ್ನದ ಬೆಲೆ ಹಲವು ಕಾರಣಗಳಿಂದಾಗಿ ಇಳಿಯಬಹುದು. ಚಿನ್ನದ ಬೆಲೆ ಹೆಚ್ಚಾಗಿ ಅಮೆರಿಕಾ ಡಾಲರ್‌ನ ಹಾರಾಟ ಮತ್ತು ಜಾಗತಿಕ ಆರ್ಥಿಕ ಸ್ಥಿತಿಗತಿಗಳು ಮೇಲೆ ಅವಲಂಬಿತವಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಿಸಿದರೆ, ಚಿನ್ನದ ಬೇಡಿಕೆ ಕಡಿಮೆಯಾಗಬಹುದು. ಡಾಲರ್ ಗಟ್ಟಿಯಾಗಿದರೆ, ಚಿನ್ನದ ದರ ದುಬಾರಿಯಾಗುತ್ತೆ, ಡಾಲರ್ ದುರ್ಬಲವಾದರೆ ಚಿನ್ನದ ದರ ಕಡಿಮೆಯಾಗಬಹುದು. ರೂಪಾಯಿ ಹಿಗ್ಗಿದರೆ, ಚಿನ್ನದ ಬೆಲೆ ಇಳಿಯಬಹುದು. ಹೀಗೆ ಚಿನ್ನದ ಬೆಲೆ ನಾನಾ ಕಾರಣಗಳಿಂದ ಇಳಿಕೆಯಾಗುತ್ತದೆ. ಚಿನ್ನದ ಬೆಲೆ ಎಷ್ಟೇ ಏರಿಕೆಯಾದರೂ ಮಹಿಳೆಯರಿಗೆ ಅದರ ಮೇಲಿನ ಆಸೆ ಸ್ವಲ್ಪವೂ ಕಡಿಮೆಯಾಗುವುದಿಲ್ಲ. ಇನ್ನು ಚಿನ್ನದ ಬೆಲೆ ಕಡಿಮೆಯಾಗಿದ್ದರೆ ಕೇಳೋದೇ ಬೇಡ. ಆದರೆ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯೂ ಆಗಿಲ್ಲ ಏರಿಕೆಯೂ ಆಗಿಲ್ಲ. ಚಿನ್ನದ ಬೆಲೆ ಶನಿವಾರದಷ್ಟೇ ಕಾಯ್ದುಕೊಂಡಿದೆ. ಹಾಗಾದರೆ ಇಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ:
ಇಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. 1 ಗ್ರಾಂ 24K ಚಿನ್ನದ ಬೆಲೆ ಇಂದು ರೂ.13,800 ಆಗಿದ್ದು, ನಿನ್ನೆ ರೂ.13,827 ಇತ್ತು. ಅಂದರೆ ರೂ.27 ಇಳಿಕೆಯಾಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ರೂ.1,38,000 ಇದ್ದು, ನಿನ್ನೆ ರೂ.1,38,270 ಆಗಿತ್ತು. ಇದರಿಂದ ರೂ.270 ಇಳಿಕೆ ಕಂಡುಬರುತ್ತದೆ. ಅದೇ ರೀತಿ 100 ಗ್ರಾಂ 24K ಚಿನ್ನದ ಬೆಲೆ ಇಂದು ರೂ.13,80,000 ಆಗಿದ್ದು, ನಿನ್ನೆ ರೂ.13,82,700 ಇತ್ತು. ಒಟ್ಟಾರೆ ರೂ.2,700 ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ:
22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಸ್ವಲ್ಪ ಕಡಿತವಾಗಿದೆ. 1 ಗ್ರಾಂ 22K ಚಿನ್ನದ ಬೆಲೆ ಇಂದು ರೂ.12,650 ಆಗಿದ್ದು, ನಿನ್ನೆ ರೂ.12,675 ಇತ್ತು. ಇದರಿಂದ ರೂ.25 ಇಳಿಕೆಯಾಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇಂದು ರೂ.1,26,500 ಇದ್ದು, ನಿನ್ನೆ ರೂ.1,26,750 ಆಗಿತ್ತು. ಇದರಲ್ಲಿ ರೂ.250 ಇಳಿಕೆ ಕಂಡುಬಂದಿದೆ. 100 ಗ್ರಾಂ 22K ಚಿನ್ನದ ಬೆಲೆ ಇಂದು ರೂ.12,65,000 ಆಗಿದ್ದು, ನಿನ್ನೆ ರೂ.12,67,500 ಇತ್ತು. ಹೀಗಾಗಿ ರೂ.2,500 ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ:
ಇಂದು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ದಾಖಲಾಗಿದೆ. 1 ಗ್ರಾಂ 18K ಚಿನ್ನದ ಬೆಲೆ ಇಂದು ರೂ.10,350 ಆಗಿದ್ದು, ನಿನ್ನೆ ರೂ.10,371 ಇತ್ತು. ಇದರಿಂದ ರೂ.21 ಕಡಿಮೆಯಾಗಿದೆ. 10 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ ಇಂದು ರೂ.1,03,500 ಇದ್ದು, ನಿನ್ನೆ ರೂ.1,03,710 ಆಗಿತ್ತು. ಅಂದರೆ ರೂ.210 ಇಳಿಕೆಯಾಗಿದೆ. 100 ಗ್ರಾಂ 18K ಚಿನ್ನದ ಬೆಲೆ ಇಂದು ರೂ.10,35,000 ಆಗಿದ್ದು, ನಿನ್ನೆ ರೂ.10,37,100 ಇತ್ತು. ಇದರಿಂದ ಒಟ್ಟು ರೂ.2,100 ಇಳಿಕೆಯಾಗಿದೆ.
ಇಂದಿನ ಬೆಳ್ಳಿಯ ದರ (ಕೆಜಿಗೆ):
ಇಂದು ಭಾರತದಲ್ಲಿ ಬೆಳ್ಳಿಯ ಬೆಲೆಯಲ್ಲಿ ಸ್ಪಷ್ಟವಾದ ಇಳಿಕೆ ಕಂಡುಬಂದಿದೆ. 1 ಗ್ರಾಂ ಬೆಳ್ಳಿಯ ದರ ಇಂದು ರೂ.252 ಆಗಿದ್ದು, ನಿನ್ನೆ ರೂ.257 ಇತ್ತು. ಅಂದರೆ ರೂ.5 ಕಡಿಮೆಯಾಗಿದೆ. 10 ಗ್ರಾಂ ಬೆಳ್ಳಿಯ ಬೆಲೆ ಇಂದು ರೂ.2,520 ಆಗಿದ್ದು, ನಿನ್ನೆ ರೂ.2,570 ಆಗಿತ್ತು. ಇದರಿಂದ ರೂ.50 ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿಯ ದರ ಇಂದು ರೂ.25,200 ಇದ್ದು, ನಿನ್ನೆ ರೂ.25,700 ಇತ್ತು. ಹೀಗಾಗಿ ರೂ.500 ಇಳಿಕೆ ಕಂಡುಬಂದಿದೆ. ಅದೇ ರೀತಿ 1 ಕಿಲೋಗ್ರಾಂ (1000 ಗ್ರಾಂ) ಬೆಳ್ಳಿಯ ಬೆಲೆ ಇಂದು ರೂ.2,52,000 ಆಗಿದ್ದು, ನಿನ್ನೆ ರೂ.2,57,000 ಇತ್ತು. ಒಟ್ಟಾರೆ ರೂ.5,000 ಇಳಿಕೆಯಾಗಿದೆ.
ಸ್ಪಾಟ್ ಚಿನ್ನದ ಬೆಲೆ:
ಜನವರಿ 8ರಂದು ನಡೆದ ಜಾಗತಿಕ ಮಾರುಕಟ್ಟೆಗಳ ಕುರಿತು ರಾಯಿಟರ್ಸ್ ನೀಡಿದ ವರದಿಯ ಪ್ರಕಾರ, ಆ ದಿನ ಸ್ಪಾಟ್ ಗೋಲ್ಡ್ ಬೆಲೆ ಸ್ವಲ್ಪ ಇಳಿಕೆಯನ್ನು ಕಂಡಿತು. ವ್ಯಾಪಾರದ ವೇಳೆ ಚಿನ್ನದ ತಕ್ಷಣದ ದರ ಪ್ರತಿ ಔನ್ಸ್‌ಗೆ ಸುಮಾರು $4,448.20 ಮಟ್ಟದಲ್ಲಿ ವಹಿವಾಟು ನಡೆಸಿತು. ಇದು ಹಿಂದಿನ ದಿನದ ಹೋಲಿಕೆಯಲ್ಲಿ ಸುಮಾರು 0.11 ಶೇಕಡಾ ಅಲ್ಪ ಇಳಿಕೆಯನ್ನು ಸೂಚಿಸುತ್ತದೆ.
ಮಹಿಳೆಯರಿಗೆ ಚಿನ್ನದ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗುವುದೂ ಇಲ್ಲ. ಏಕೆಂದರೆ ಚಿನ್ನ ಒಂದು ಅಮೂಲ್ಯವಾದ ಸಂಪತ್ತಿಗೆ ಸಮಾನ. ಮಹಿಳೆಯರಿಗೆ ಅತೀ ಇಷ್ಟವಾದ ಚಿನ್ನದ ಬೆಲೆ ಕಡಿಮೆಯಾದರೆ, ಅವರಿಗಾಗೋ ಸಂತಸ ಅಷ್ಟಿಷ್ಟಲ್ಲ. ನಾರಿಮಣಿಯರ ಅಲಂಕಾರಕ್ಕೆ ಇನ್ನಷ್ಟು ರೂಪ ಕೊಡುವ ಈ ಚಿನ್ನ ಎಲ್ಲಕ್ಕಿಂತ ಮಿಗಿಲು. ಹೀಗಾಗಿಯೇ ಮಹಿಳೆಯರು ಚಿನ್ನವನ್ನು ಅತಿಹೆಚ್ಚು ಇಷ್ಟ ಪಡುತ್ತಾರೆ. ಈ ಚಿನ್ನ ತನ್ನ ಬೆಲೆ ಎಷ್ಟೇ ಹೆಚ್ಚಿಸಿಕೊಂಡರೂ ಮಹಿಳೆಯರಿಗೆ ಇದರ ಮೇಲಿನ ಆಸಕ್ತಿ ಕೊಂಚವೂ ಕಡಿಮೆಯಾಗುವುದಿಲ್ಲ. ಬೆಳ್ಳಿಯ ದರದಲ್ಲೂ ಸಮಾನ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ದರ ಹೇಗಿರಲಿದೆ ಎಂಬ ಕುತೂಹಲ ಶುರುವಾಗಿದೆ.
Credit: Goodreturns
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications