BBK12: ಸ್ಪಂದನಾ ಕಲರ್ಸ್ ಕನ್ನಡ ದತ್ತು ಪುತ್ರಿನಾ? ಬಿಗ್‌ಬಾಸ್ ವಿರುದ್ಧವೇ ತಿರುಗಿಬಿದ್ದ ಮಾಳು ಪತ್ನಿ
ಬಿಗ್‌ಬಾಸ್ ಮನೆಯಲ್ಲಿ ಕಳೆದ ವೀಕೆಂಡ್ ಡಬಲ್ ಎಲಿಮಿನೇಷನ್ ನಡೆದಿದೆ. ಸೂರಜ್ ಸಿಂಗ್ ಜೊತೆಗೆ ಮಾಳು ನಿಪನಾಳ ಮನೆಯಿಂದ ಹೊರ ಬಂದಿದ್ದಾರೆ. ವೀಕ್ಷಕರಿಂದ ತಮಗೆ ಸಿಕ್ಕ ಪ್ರೀತಿಗೆ ಸೂರಜ್ ಖುಷಿಯಾಗಿದ್ದಾರೆ. ಇಷ್ಟು ದಿನ ನಾನು ಮನೆ ಒಳಗೆ ಇದ್ದಿದ್ದೇ ಗ್ರೇಟ್ ಎನ್ನುತ್ತಿದ್ದಾರೆ. ಆದರೆ ಮಾಳು ಮಾತ್ರ ಬಿಗ್‌ಬಾಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಾನೇ ಗೆಲ್ಲಬೇಕಿತ್ತು ಎಂದು ವಾದ ಮಾಡುತ್ತಿದ್ದಾರೆ.
ಮಾಳು ಮಾತ್ರವಲ್ಲ ಅವರ ಪತ್ನಿ ಮೇಘನಾ ಕೂಡ ಇದೀಗ ಕಲರ್ಸ್ ಕನ್ನಡ ಹಾಗೂ ಬಿಗ್‌ಬಾಸ್ ಶೋ ಬಗ್ಗೆ ವ್ಯಂಗ್ಯ ಮಾಡಿ ಪೋಸ್ಟ್ ಮಾಡಿದ್ದಾರೆ. ಪರೋಕ್ಷವಾಗಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ತಿರುಗೇಟು ನೀಡುತ್ತಿದ್ದಾರೆ. ಮಾಳು ನಿರೀಕ್ಷಿತ ಮಟ್ಟದಲ್ಲಿ ಆಟ ಆಡಲಿಲ್ಲ ಎನ್ನುವುದು ಬಹುತೇಕರ ಅಭಿಪ್ರಾಯ. ಇಷ್ಟು ದಿನ ಬಿಗ್‌ಬಾಸ್ ಮನೆ ಒಳಗೆ ಇದ್ದಿದ್ದೇ ಹೆಚ್ಚು, ಈಗ ಹೊರಬಂದು ಹೀಗೆ ಹೇಳುವುದು ಸರಿಯಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಪೇಜ್ ಮೀಮ್‌ವೊಂದು ವೈರಲ್ ಆಗ್ತಿದೆ. "ಸ್ಪಂದನಾ ಹಾಗೂ ಕಾವ್ಯಾಗಿಂತ ಸೂರಜ್, ಮಾಳು, ಸುಧಿ, ಜಾಹ್ನವಿ ಡಮ್ಮಿ ಆಗಿರೋದಕ್ಕೆ ಸಾಧ್ಯವಿಲ್ಲ. ಈ ವೀಕೆಂಡ್ ಇಡೀ ಕರ್ನಾಟಕ ಜನತೆಗೆ ಬಿಗ್‌ಬಾಸ್-12 ಅತಿಹೆಚ್ಚು ಪಕ್ಷಪಾತ ಮಾಡಿರುವ ಸೀಸನ್ ಅನ್ನೋದು ಕನ್ಫರ್ಮ್ ಆಯ್ತು. ಸ್ಪಂದನಾ ಕಲರ್ಸ್ ಕನ್ನಡದ ದತ್ತು ಪುತ್ರಿ" ಎನ್ನುವಂತೆ ವ್ಯಂಗ್ಯ ಮಾಡಿರುವ ಮೀಮ್ ಅದು. ಮಾಳು ಪತ್ನಿ ಮೇಘನಾ ಇದೀಗ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ. "ಎಲ್ಲಿದೆಯೋ ನ್ಯಾಯ ಅಣ್ಣಾ?" ಎಂಬ ಹಾಡನ್ನು ಹಾಕಿದ್ದಾರೆ. ಆ ಮೂಲಕ ಕಲರ್ಸ್ ಕನ್ನಡ ಹಾಗೂ ಬಿಗ್‌ಬಾಸ್ ಶೋವನ್ನು ಟ್ರೋಲ್ ಮಾಡಿದ್ದಾರೆ.
ಫ್ಯಾನ್ ಪೇಜ್ ಟ್ರೋಲ್ ಮೀಮ್ ಅನ್ನು ಹಂಚಿಕೊಂಡು ಮಾಳು ಹಾಗೂ ಆತನ ಪತ್ನಿ ನಗೆಪಾಟಲಿಗೆ ಈಡಾಗುತ್ತಿದ್ದಾರೆ ಎಂದು ನೆಟ್ಟಿಗರು ತಿರುಗೇಟು ಕೊಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ಸಖತ್ ವೈರಲ್ ಆಗ್ತಿದೆ. ಉತ್ತರ ಕರ್ನಾಟಕದ ಪ್ರತಿಭೆ ಮಾಳು ತಮ್ಮ ಗಾಯನದಿಂದ ಮೋಡಿ ಮಾಡಿದ್ದರು. ಬಿಗ್‌ಬಾಸ್ ಮನೆಯಲ್ಲಿ ಕೂಡ ವೀಕ್ಷಕರನ್ನು ರಂಜಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಿದ್ದು ಗೊತ್ತೇಯಿದೆ.

ಎಲಿಮಿನೇಟ್ ಆಗಿ ಹೊರ ಬಂದಿರುವ ಮಾಳು ಶೋ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಅನ್ಯಾಯವಾಗಿದೆ ಎಂದು ಮಾಧ್ಯಮಗಳ ಸಂದರ್ಶನಗಳಲ್ಲಿ ಹೇಳುತ್ತಿದ್ದಾರೆ. "ಕಾಮಿಡಿ ಬಿಟ್ಟರೆ ಗಿಲ್ಲಿ ಯಾವುದೇ ಟಾಸ್ಕ್ ಮಾಡಲಿಲ್ಲ. ನಾನು ನೋಡಿದಂತೆ ಆತ ಯಾವುದೇ ಫಿಸಿಕಲ್ ಟಾಸ್ಕ್ ಚೆನ್ನಾಗಿ ಆಡಲಿಲ್ಲ. ಗಿಲ್ಲಿ ಅಲ್ಲ, ಯಾರು ಶೋ ಗೆದ್ದರೂ ಅದು ನನಗೆ ಸರಿ ಅನ್ನಿಸಲ್ಲ. ಗೆದ್ದರೂ ನಾನು ಒಪ್ಪಿಕೊಳ್ಳಲ್ಲ. ನನಗೆ ಬೇಸರವಾಗುತ್ತದೆ. ನನ್ನ ಪ್ರಕಾರ ನಾನು ಇನ್ನು ಸ್ವಲ್ಪ ದಿನ ಬಿಗ್‌ಬಾಸ್ ಮನೆಯಲ್ಲಿ ಉಳಿಯಬೇಕಿತ್ತು" ಎಂದು ಟಿವಿ9 ಸಂದರ್ಶನದಲ್ಲಿ ಮಾಳು ಹೇಳಿದ್ದಾರೆ.
"ನಾನು ತಪ್ಪು ಮಾಡಿದ್ದೀನೋ ಸರಿ ಮಾಡಿದ್ದೀನೋ ಬೇರೆ ಮಾತು. ಜನರ ಪ್ರೀತಿ, ವೋಟಿಂಗ್, ಜನ ನನಗಾಗಿ ಗೋಳಾಡುವುದು ನೋಡಿದ್ರೆ, ಅಲ್ಲಿರುವ ಯಾರೊಬ್ಬರು ವಿನ್ ಆಗುತ್ತಾರೆ ಎನ್ನುವುದನ್ನು ಇಷ್ಟಪಡಲ್ಲ. ಯಾರು ಗೆದ್ರೂ ಒಪ್ಪಲ್ಲ" ಎಂದು ಮಾಳು ಪುನರುಚ್ಚರಿಸಿದ್ದಾರೆ.
ಅಂದಹಾಗೆ ಮಾಳು ಪತ್ನಿ ಮೇಘನಾ ಕೂಡ ಗಾಯಕಿ ಆಗಿದ್ದು ದಂಪತಿಗೆ ಅವಳಿ ಗಂಡು ಮಕ್ಕಳಿದ್ದಾರೆ. ಇತ್ತೀಚೆಗೆ ಬಿಗ್‌ಬಾಸ್ ಮನೆ ಫ್ಯಾಮಿಲಿ ರೌಂಡ್ ವೇಳೆ ಇಬ್ಬರು ಮಕ್ಕಳ ಜೊತೆ ಮೇಘನಾ ದೊಡ್ಮನೆ ಒಳಗೆ ಹೋಗಿದ್ದರು. ಪತ್ನಿ ಜೊತೆ ಮಾಳು "ಹಿತ್ತಲಕ ಕರೀಬ್ಯಾಡ ಮಾವ" ಹಾಡು ಹಾಡಿದ್ದರು.
Credit: Filmibeat
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications