ಯಾದಗಿರಿ: ಕಲುಷಿತ ನೀರು ಸೇವನೆಯಿಂದ ಮಹಿಳೆ ಸಾವು ಹಲವರು ಅಸ್ವಸ್ಥ
ಚರಂಡಿ ನೀರು ಬೆರೆತ ನೀರನ್ನು ಕುಡಿದು ಆಸ್ಪತ್ರೆಗೆ ಸೇರಿದ್ದ ಸುಮಾರು 30ಕ್ಕೂ ಅಧಿಕ ಮಂದಿ ಪೈಕಿ ಓರ್ವ ಮಹಿಳೆಯೊಬ್ಬರು ಬುಧವಾರ ಬೆಳಗ್ಗೆ ಮೃತಪಟ್ಟ ಘಟನೆ ನಡೆದಿದೆ.
ಯಾದಗಿರಿ, ಫೆಬ್ರವರಿ 15: ಚರಂಡಿ ನೀರು ಬೆರೆತ ನೀರನ್ನು ಕುಡಿದು ಆಸ್ಪತ್ರೆಗೆ ಸೇರಿದ್ದ ಸುಮಾರು 30ಕ್ಕೂ ಅಧಿಕ ಮಂದಿ ಪೈಕಿ ಓರ್ವ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಕಲುಷಿತ ನೀರು ಸೇವಿಸಿ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ವ್ತಾಪ್ತಿಯ ಅನಪುರ ಗ್ರಾಮೀಣ ನಿವಾಸಿಯಾಗಿರುವ ಸಾವಿತ್ರಮ್ಮ (34) ಎಂಬುವವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಜೀವ ಧಾರುಣ ಘಟನೆ ಬುಧವಾರ ನಡೆದಿದೆ.
ಅನಪುರ ಗ್ರಾಮಕ್ಕೆ ಸರಬರಾಜು ಆಗುತ್ತಿದ್ದ ಕುಡಿಯುವ ನಿರೀನ ಪೈಪ್‌ಗೆ ಚರಂಡಿ ನೀರು ಕೂಡಿಕೊಂಡು ಶುದ್ಧ ನೀರು ಕಲುಷಿತಗೊಂಡಿದೆ. ಆ ನೀರು ಕುಡಿದ ಗ್ರಾಮದ 30ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಆಗಿದೆ. ಪ್ರಕರಣ ಗೊತ್ತಾಗುತ್ತಿದ್ದಂತೆ ಅವರೆಲ್ಲರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರು ಕಲುಷಿತಗೊಂಡಿದ್ದೆ ಜನರು ಅಸ್ವಸ್ಥರಾಗಲು ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಮಂಗಳವಾರ ಕಲುಷಿತ ನೀರು ಕುಡಿದಿದ್ದರಿಂದ ಒಟ್ಟು 24 ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ಇಂದು ಬುಧವಾರ ಮತ್ತೆ 06 ಮಂದಿಗೆ ಅದೇ ರೀತಿ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು ಅವರೆಲ್ಲ ತೆಲಂಗಾಣದ ನಾರಾಯಣಪೇಟೆ ಖಾಸಗಿ ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ ಸಾವಿತ್ರಮ್ಮ ಎಂಬ ಮಹಿಳೆ ಇಂದು ಬೆಳಗ್ಗೆ ಅಸುನೀಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಗುರುಮಠಕಲ್ ತಾಲೂಕಿನ ಆ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ಯಾದರು. ಅಲ್ಲದೇ ಜಿಲ್ಲಾಸ್ಪತ್ರೆಗೂ ಸಹ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಇನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 13 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ಅಭಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇಲ್ಲಿ ಸಮಸ್ಯೆ ಇದೇ ಮೊದಲಲ್ಲ
ಕಲುಷಿತನ ನೀರಿನ ಸಮಸ್ಯೆ ಇದೇನು ಮೊದಲ ಬಾರಿ ಸಂಭವಿಸಿದ್ದಲ್ಲ. ಇದೇ ಜಿಲ್ಲೆಯ ಶಹಾಪುರ ತಾಲೂಕಿನ ಹೋತಪೇಟ್ ಗ್ರಾಮದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಲುಷಿತ ನೀರು ಸೇವಿಸಿದ್ದರಿಂದ ವೃದ್ಧೆ ಈರಮ್ಮ (80) ಸಾವಿಗೀಡಾಗಿದ್ದರು. ಅದೇ ವೇಳೆ ನೀರು ಕುಡಿದಿದ್ದ 40ಕ್ಕೂ ಅಧಿಕ ಮಂದಿ ಆನಾರೋಗ್ಯ ತುತ್ತಾಗಿದ್ದರು. ಅವರೆಲ್ಲರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದರು.












Click it and Unblock the Notifications