ವಿದ್ಯುತ್ ಕಂಬದಲ್ಲಿ ಏಕಾಏಕಿ ಬೆಂಕಿ; ಹೊತ್ತಿ ಉರಿಯಿತು ಟ್ರ್ಯಾಕ್ಟರ್
ಯಾದಗಿರಿ, ಸೆಪ್ಟೆಂಬರ್ 23- ವಿದ್ಯುತ್ ಕಂಬದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಂಬದ ಕೆಳಗಡೆ ನಿಂತಿದ್ದ ಟ್ರ್ಯಾಕ್ಟರ್ ಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಯಾದಗಿರಿ ತಾಲೂಕಿನ ಗೌಡಗೇರಾ ಗ್ರಾಮದಲ್ಲಿ ನಡೆದಿದೆ.
ಭಾನುವಾರ ರಾತ್ರಿ ವೇಳೆ ಈ ಘಟನೆ ಸಂಭವಿಸಿದ್ದು ಗಾಳಿಗೆ ಕಂಬದ ತಂತಿಗಳು ಒಂದಕ್ಕೊಂದು ತಗುಲಿ ಬೆಂಕಿ ಹತ್ತಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬಳಿಕ ಬೆಂಕಿಯ ಮಟ್ಟ ಹೆಚ್ಚಾಗಿ ವಿದ್ಯುತ್ ತಂತಿ ತುಂಡಾಗಿದೆ. ಈ ವೇಳೆ ಕೆಳಗೆ ನಿಂತಿದ್ದ ಟ್ರ್ಯಾಕ್ಟರ್ ಮೇಲೆ ತಂತಿ ಬಿದ್ದು ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ.

ಗ್ರಾಮದ ಮಲ್ಲಣ್ಣ ಎನ್ನುವವರಿಗೆ ಸೇರಿದ ಟ್ರಾಕ್ಟರ್ ಬೆಂಕಿಗೆ ಆಹುತಿಯಾಗಿದೆ. ಸಮಯಕ್ಕೆ ಸರಿಯಾಗಿ ಅಗ್ನಿಶಾಮಕದಳ ಸಿಬ್ಬಂದಿ ಬಾರದ ಹಿನ್ನೆಲೆಯಲ್ಲಿ ಬೆಂಕಿ ನಂದಿಸಲು ಗ್ರಾಮಸ್ಥರ ಪರದಾಡಿದರು.












Click it and Unblock the Notifications