ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾದಗಿರಿಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ದೇವಸ್ಥಾನ ಪ್ರವೇಶಿಸಿದ ಮಹಿಳೆಯರು

|
Google Oneindia Kannada News

ಯಾದಗಿರಿ, ಮೇ 29: ರಾಜ್ಯದಲ್ಲಿಇನ್ನೂ ಜಾತಿ ವ್ಯವಸ್ಥೆ ಜೀವಂತವಾಗಿದೆ ಎಂಬುವುದು ಮತ್ತೆ ಸಾಬೀತಾಗಿದೆ. ಯಾದಗಿರಿ ಜಿಲ್ಲೆಯ ಅಮಲಿಹಾಳ ಗ್ರಾಮದಲ್ಲಿ ದಲಿತರಿಗೆ ದೇವಾಲಯ ಪ್ರವೇಶಿಸಲು ನಿರಾಕರಿಸಿದ ಹಿನ್ನೆಲೆ ಐದು ಜನ ದಲಿತ ಮಹಿಳೆಯರು ಪೊಲೀಸ್ ಭದ್ರತೆಯೊಂದಿಗೆ ದೇವಾಲಯ ಪ್ರವೇಶಿಸುವ ಮೂಲಕ ಗಮನ ಸೆಳೆದಿದ್ದಾರೆ.

ಅಮಲಿಹಾಳ ಗ್ರಾಮದಲ್ಲಿ ದಲಿತ ಮಹಿಳೆಯರು ಪೊಲೀಸ್ ಸರ್ಪಗಾವಲಿನಲ್ಲಿ ದೇವಾಲಯದ ಒಳಗೆ ಪ್ರವೇಶ ಮಾಡಿದ್ದಾರೆ. ವಿರೋಧದ ನಡುವೆಯೂ ಹನುಮಾನ್ ದೇವಸ್ಥಾನ ಪ್ರವೇಶಿಸಿ, ಪೂಜೆ ಸಲ್ಲಿಸಿದ್ದಾರೆ. ಅಮಲಿಹಾಳ ಗ್ರಾಮದಲ್ಲಿ ಕೆಲ ದಲಿತ ಕುಟುಂಬಗಳು ಪಕ್ಕದ ಹೂವಿನಹಳ್ಳಿಗೆ ತೆರಳಿ ವಾಸವಾಗಿದ್ದರು. ಹಿಂದಿನಿಂದ ದಲಿತರು ಅಮಲಿಹಾಳ ಆಂಜನೇಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿಕೊಂಡು ಬರುವ ಸಂಪ್ರದಾಯ ರೂಢಿಯಲ್ಲಿತ್ತು.

ಗ್ರಾಮ ಪಂಚಾಯಿತಿ ಅಧಿಕಾರ ಮೊಟಕು; ಕಸಗುಡಿಸಿ ಪ್ರತಿಭಟನೆ ಗ್ರಾಮ ಪಂಚಾಯಿತಿ ಅಧಿಕಾರ ಮೊಟಕು; ಕಸಗುಡಿಸಿ ಪ್ರತಿಭಟನೆ

ಯಾದಗಿರಿಯಲ್ಲಿ ದೇಗುಲ ಪ್ರವೇಶಕ್ಕೆ ನಿರ್ಬಂಧ

ದಲಿತರು ದೇವಸ್ಥಾನದ ಒಳಗಡೆ ಬಂದರೆ ಹುಷಾರ್ ನಿಮ್ಮ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ಮಾತುಗಳನ್ನು ಮಹಿಳೆಯರು ಕೇಳಿಸಿಕೊಂಡಿದ್ದರು. ಪೊಲೀಸ್ ಭದ್ರತೆ ಜೊತೆ ಗುಡಿ ಪ್ರವೇಶಿಸುವುದಕ್ಕೆ ಮೇಲ್ಜಾತಿಯವರ ವಿರೋಧವಿತ್ತು ಎನ್ನಲಾಗಿದೆ. ಆದರೆ ಪೊಲೀಸ್ ಭದ್ರತೆ ಪಡೆದುಕೊಂಡು ಐದು ಜನ ದಲಿತ ಮಹಿಳೆಯರು, ಕೊನೆಗೂ ಹನುಮಾನ್ ದೇವಾಲಯ ಪ್ರವೇಶ ಮಾಡಿ ಅಚ್ಚರಿ ಮೂಡಿಸಿದ್ದಾರೆ.

Know why Women enters temple with police protection in Amalihala village

ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವೇದಮೂರ್ತಿ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದ್ದರು. ಅದರು, ಎರಡು ಸಮುದಾಯದ ಜನ ಪಟ್ಟು ಬಿಡದ ಹಿನ್ನೆಲೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಯಿದ್ದ ಕಾರಣ ಜಿಲ್ಲಾಡಳಿತ ಅಮಲಿಹಾಳ ಹಾಗೂ ಹೂವಿನಹಳ್ಳಿ ಎರಡೂ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ ಎರಡೂ ಗ್ರಾಮಗಳಲ್ಲಿ ಪರಿಸ್ಥಿತಿ ಇನ್ನೂ ಬೂದಿಮುಚ್ಚಿದ ಕೆಂಡದಂತಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಹನುಮಾನ್ ದೇವಾಲಯ ಪ್ರವೇಶ ಮಾಡಿ ಮಹಿಳೆಯರ ದಿಟ್ಟತನ

ಈ ಹಿಂದೆ ಅಮಲಿಹಾಳ ಗ್ರಾಮದಲ್ಲಿದ್ದ ಕೆಲ ದಲಿತ ಕುಟುಂಬಗಳು ಪಕ್ಕದ ಹೂವಿನಹಳ್ಳಿಗೆ ತೆರಳಿ ವಾಸವಾಗಿದ್ದರು. ಹಿಂದಿನಿಂದ ದಲಿತರು ಅಮಲಿಹಾಳ ಆಂಜನೇಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿಕೊಂಡು ಬರುವ ಸಂಪ್ರದಾಯ ರೂಢಿಯಲ್ಲಿತ್ತು. ಆದರೆ, ಕೇವಲ ದೇವಸ್ಥಾನದ ಹೊರಗಡೆಯೇ ಪೂಜೆ ಸಲ್ಲಿಸಿ ವಾಪಸ್ಸಾಗಬೇಕಿತ್ತು. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ದೇವಾಲಯ ಪ್ರವೇಶಿಸುವುದಕ್ಕೆ ಹಿಂದಿನಿಂದಲೂ ಮೇಲ್ಜಾತಿಯವರ ವಿರೋಧವಿತ್ತು. ಹೀಗಾಗಿ ನಾವು ದೇವಾಲಯವನ್ನು ಪ್ರವೇಶಿಸಲು ಬಿಡುವುದಿಲ್ಲ ಎಂದು ಮೇಲ್ಜಾತಿಯವರು ಪಟ್ಟು ಹಿಡಿದರೆ, ನಾವು ದೇವಾಲಯವನ್ನು ಪ್ರವೇಶಿಸಿಯೇ ತೀರುತ್ತೆವೆ ಎಂದು ದಲಿತರು ಸವಾಲು ಹಾಕಿದರು. ಅದರಂತೆ ಪೊಲೀಸ್ ಭದ್ರತೆ ಪಡೆದುಕೊಂಡ ಐದು ಜನ ದಲಿತ ಮಹಿಳೆಯರು ಕೊನೆಗೂ ಹನುಮಾನ್ ದೇವಾಲಯ ಪ್ರವೇಶ ಮಾಡಿ ದಿಟ್ಟತನ ಮೆರೆದಿದ್ದಾರೆ.

Know why Women enters temple with police protection in Amalihala village

Recommended Video

RCB ಡ್ರೆಸ್ಸಿಂಗ್ ರೂಮ್ ನಲ್ಲಿ ಕೊನೇ ಕ್ಷಣ ಕಳೆದ ದಿನೇಶ್ ಕಾರ್ತಿಕ್‌ ಭಾವುಕರಾಗಿ ಹೇಳಿದ್ದೇನು? | OneIndia Kannada

ಎಲ್ಲರೂ ಒಂದೇ ಎಲ್ಲರೂ ಸಮಾನರು ಯಾವ ಜಾತಿ ವ್ಯವಸ್ಥೆಯು ಇಲ್ಲ ಅಂತಾ ಜನಪ್ರತಿನಿಧಿಗಳು ಡೈಲಾಗ್ ಹೊಡಿತಾರೆ. ಆದರೆ ಕೆಲವು ಕಡೆ ಮಾತ್ರ ವಿಷ ಬೀಜದಂತೆ ಜಾತಿವ್ಯವಸ್ಥೆ ಬೇರೂರಿದೆ ಯಾಕಂದ್ರೆ ಆ ಗ್ರಾಮದಲ್ಲಿ ದಲಿತರು ದೇಗುಲಕ್ಕೆ ತೆರಳಬೇಕಾದರೆ ದೊಡ್ಡ ಸಾಹಸವೇ ಮಾಡಬೇಕಾಯಿತು ಎಂದು ಸ್ಥಳೀಯರು ಪರಿಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರೆ.

English summary
Untouchability still alive in the state, Dalits in Amalihala village entered the shrine with Police protection, Know why.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X