ಯಾದಗಿರಿ: ಮಾನಸಿಕ ಅಸ್ವಸ್ಥನಿಂದ ಗುಂಡಿನ ದಾಳಿ
ಯಾದಗಿರಿ, ಜನವರಿ 13: ಗುರುಮಠಕಲ್ ಪಟ್ಟಣದಲ್ಲಿ ಹಾಡುಹಗಲೇ ವ್ಯಕ್ತಿಯೋರ್ವನ ಮೇಲೆ ಮೂರು ಸುತ್ತು ಗುಂಡ ಹಾರಿಸಲಾಗಿದೆ.
ಪಟ್ಟಣದ ಆಸಾಕ್ ಎಂಬಾತ ಡಬಲ್ ಬ್ಯಾರಲ್ ಗನ್‌ನಿಂದ ಮುಬಾರಕ್ ಎಂಬುವರ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ಮುಬಾರಕ್‌ನ ಎದೆ, ತೊಡೆ ಭಾಗಗಳಿಗೆ ಹೊಕ್ಕಿದ್ದು, ತೀರ್ವ ರಕ್ತಸ್ರಾವದಿಂದ ಕುಸಿದ ಮುಬಾರಕ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮುಬಾರಕ್ ಸ್ಥಿತಿ ಚಿಂತಾಜನಕವಾಗಿದೆ.

ಆಸಾಕ್ ತನ್ನ ಮನೆಯ ಮೇಲೆ ನಿಂತು ಫೈರಿಂಗ್ ಮಾಡಿದ್ದಾರೆ, ಆಸಾಕ್ ಮಾನಸಿಕ ಅಸ್ವಸ್ಥ ಎನ್ನಲಾಗಿದ್ದು, ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆಸಾಕ್ ಮತ್ತು ಅವರ ತಂದೆ ಅಬ್ದುಲ್‌ನನ್ನು ಬಂಧಿಸಿದ್ದಾರೆ.












Click it and Unblock the Notifications