• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

5 ದಿನದಲ್ಲಿ ಒಂದೇ ರೆಸಾರ್ಟ್‌ನಲ್ಲಿ 3 ಮಂದಿ ಅಮೆರಿಕನ್ನರ ನಿಗೂಢ ಸಾವು

|

ವಾಷಿಂಗ್ಟನ್, ಜೂನ್ 6: ಐದು ದಿನಗಳಲ್ಲಿ ಒಂದೇ ರೆಸಾರ್ಟ್‌ನಲ್ಲಿ 3 ಮಂದಿ ಅಮೆರಿಕನ್ನರು ನಿಗೂಢವಾಗಿ ಮೃತಪಟ್ಟಿರುವ ಘಟನೆ ಎಲ್ಲರಲ್ಲಿ ಆತಂಕ ಮೂಡಿಸಿದೆ.

ವಾಷಿಂಗ್ಟನ್ ಡೊಮೆನಿಕನ್ ರಿಪಬ್ಲಿಕ್ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ. ಮಿರಾಂಡಾ ಚಾಪ್-ವರ್ನರ್ ಡೊಮೆನಿಕನ್ ರಿಪಬ್ಲಿಕ್ ಟೌನ್‌ನಲ್ಲಿರುವ ಬೇಹಿಯಾ ಗ್ರ್ಯಾಂಡ್ ಪ್ರಿನ್ಸಿಪಲ್ ಹೋಟೆಲ್‌ಗೆ ಆಗತಾನೆ ಚೆಕ್‌ಇನ್ ಆಗಿದ್ದರು.

ಪತ್ನಿಕೊಂದು, ಸಾಕುನಾಯಿ ಜೊತೆ ಮಹಡಿಯಿಂದ ಹಾರಿ ಪತಿ ಆತ್ಮಹತ್ಯೆ

ಆಕೆ ರೂಮಿನ ಬಾಲ್ಕನಿಯಿಂದ ಫೋಟೊ ತೆಗೆದುಕೊಳ್ಳುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ. ಎರಡು ಗಂಟೆಗಳಲ್ಲೇ ಆಕೆ ಮೃತಪಟ್ಟಿದ್ದಾಳೆ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ.

ಪೆನ್ಸಿಲ್‌ವೇನಿಯಾದ 41 ವರ್ಷದ ಮಹಿಳೆ ಏಕಾಏಕಿ ಹೋಟೆಲ್‌ನಲ್ಲಿ ಮೃತಪಟ್ಟಿದ್ದಾರೆ ಎನ್ನುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.ಹಾಗೆಯೇ ಸಿಂಥಿಯಾ ಆಂಡೆ ಹಾಗೂ ನ್ಯಾಥನಿಯಲ್ ಎಡ್ವರ್ಡ್ ಹಾಲ್ಮ್ಸ್‌ ಎನ್ನುವವರು ಕೆಲವು ದಿನಗಳ ಹಿಂದಷ್ಟೇ ರೆಸಾರ್ಟ್‌ನ ಕೊಠಡಿಯೊಳಗೆ ಮೃತಪಟ್ಟಿದ್ದರು.

ಡಾಮಿನಿಕನ್ ರಿಪಬ್ಲಿಕ್ ನ್ಯಾಷನಲ್ ಪೊಲೀಸರು ಈ ಮೂರೂ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆದರೆ ಪ್ರಥಮವಾಗಿ ಬಂದಿರುವ ಮಾಹಿತಿ ಪ್ರಕಾರ ಅವರೆಲ್ಲರೂ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಡೇನಿಯಲ್ ಫ್ರ್ಯಾಂಕ್ ವರ್ನರ್ ಅವರು ತಮ್ಮ ಪತ್ನಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು ಎಂದು ದೃಢಪಡಿಸಿದ್ದಾರೆ.

ಪ್ರತಿ ವರ್ಷ ಎರಡು ಮಿಲಿಯನ್‌ಗೂ ಹೆಚ್ಚು ಮಂದಿ ಡೊಮೆನಿಕ್ ರಿಪಬ್ಲಿಕ್‌ಗೆ ಭೇಟಿ ನೀಡುತ್ತಾರೆ. ಆದರೆ ಮೂವರ ಸಾವಿನ ಬಳಿಕ ಭದ್ರತೆಯನ್ನು ಹೆಚ್ಚು ಮಾಡಿದ್ದು, ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗುತ್ತಿದೆ.

ಆದರೆ ನಿಜವಾಗಿಯೂ ಉಸಿರಾಟದ ಸಂಬಂಧಿ ಕಾಯಿಲೆಯಿಂದ ಇವರುಗಳು ಮೃತಪಟ್ಟಿದ್ದಾರೆಯೇ ಅಥವಾ ಇನ್ನೇನಾದರೂ ಕಾರಣವಿದೆಯೇ ಎನ್ನುವುದನ್ನು ತಿಳಿಯಲು ವೈದ್ಯರು ವರದಿ ನೀಡುವವರೆಗೂ ಕಾಯಬೇಕಿದೆ.

English summary
With in 5 days 3 American dies in Dominican Republic Resort in Washington,One woman died when she taking pictures in her Balcony another two died in their room only police are investigating
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X