ನಟ ರಾಮ್‌ಚರಣ್‌ ಅಭಿಮಾನಿಗಳಿಗೆ ನಿರಾಸೆ: ಈ ಭಾಗದಲ್ಲಿ 'ಪೆದ್ದಿ' ಸಿನಿಮಾ ರಿಲೀಸ್‌ ಆಗಲ್ಲ

ನಟ ರಾಮ್ ಚರಣ್ ಅಭಿನಯದ 'ಪೆದ್ದಿ' (Peddi) ಚಿತ್ರ ಬಿಡುಗಡೆಗೆ ಇನ್ನು ಕೆಲವೇ ದಿನ ಬಾಕಿ ಇರುವಾಗಲೇ ಇಂತಹ ಶಾಕಿಂಗ್ ಸುದ್ದಿ ಹೊರಬೀಳುತ್ತೆ ಅಂತ ಯಾರೂ ಊಹಿಸಿರಲಿಲ್ಲ. ವಿಶ್ವದಾದ್ಯಂತ ಅದ್ಧೂರಿ ಓಪನಿಂಗ್ ಪಡೆಯಲು ಸಜ್ಜಾಗುತ್ತಿದ್ದ ಚಿತ್ರತಂಡಕ್ಕೆ ಕೊನೆಯ ಕ್ಷಣದಲ್ಲಿ ಭಾರಿ ಹಿನ್ನಡೆಯೊಂದು ಎದುರಾಗಿದೆ. ಇಂಟರ್ನೆಟ್‌ನಲ್ಲಿ ಈ ಸುದ್ದಿ ಹೊರಬೀಳುತ್ತಿದ್ದಂತೆ ಇಡೀ ಸಿನಿರಂಗವೇ ದಿಢೀರ್ ಸ್ತಬ್ಧವಾಗಿದೆ. ಹಾಗಾದ್ರೆ ಚಿತ್ರತಂಡಕ್ಕೆ ಎದುರಾಗಿರುವ ಆ ಅನಿರೀಕ್ಷಿತ ಸಂಕಷ್ಟವಾದ್ರೂ ಏನು? ಇಲ್ಲಿದೆ ಸಂಪೂರ್ಣ ವಿವರ.

ಟಾಲಿವುಡ್‌ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ 'ಪೆದ್ದಿ' ಸಿನಿಮಾ ಜಾಗತಿಕವಾಗಿ ಬಿಡುಗಡೆಯಾಗಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಚಿತ್ರತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಜೂನ್ 4ರಂದು ಪ್ರಪಂಚದಾದ್ಯಂತ ಈ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗುತ್ತಿದ್ದರೆ, ಇತ್ತ ಈ ಒಂದು ಭಾಗದಲ್ಲಿ ಸಿನಿಮಾದ ಅಧಿಕೃತ ಬಿಡುಗಡೆಯನ್ನು ಕೊನೆಯ ಕ್ಷಣದಲ್ಲಿ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

Ram Charan

ಜಪಾನ್‌ನಲ್ಲಿ 'ಪೆದ್ದಿ' ಸಿನಿಮಾದ ವಿತರಣೆಯ ಜವಾಬ್ದಾರಿ ಹೊತ್ತಿದ್ದ 'ಇಂಡೋ ಈಗಾ' ಸಂಸ್ಥೆಯು ಈ ಆಘಾತಕಾರಿ ವಿಚಾರವನ್ನು ತಿಳಿಸಿದೆ. ಇಂಗ್ಲಿಷ್ ಸಬ್ಟೈಟಲ್ ಹೊಂದಿರುವ 'ಪೆದ್ದಿ' ಚಿತ್ರದ ಪ್ರದರ್ಶನವನ್ನು ಅನಿವಾರ್ಯ ಕಾರಣಗಳಿಂದಾಗಿ ರದ್ದುಗೊಳಿಸಲಾಗುತ್ತಿದ್ದು, ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದ ಜಪಾನ್‌ನ ಅಭಿಮಾನಿಗಳಲ್ಲಿ ಸಂಸ್ಥೆಯು ಅಧಿಕೃತವಾಗಿ ಕ್ಷಮೆಯಾಚಿಸಿದೆ. ಆದರೆ, ಈ ದಿಢೀರ್ ರದ್ದತಿಗೆ ನಿಖರವಾದ ಕಾರಣವೇನು ಎಂಬುದನ್ನು ಸಂಸ್ಥೆ ಬಹಿರಂಗಪಡಿಸಿಲ್ಲ, ಕೇವಲ ಅನಿರೀಕ್ಷಿತ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

2,500 ಅಡಿ ಆಳದ ಕಂದಕ, ಆ ದಿನ ಸ್ವಲ್ಪ ಯಾಮಾರಿದ್ರೂ ದಳಪತಿ ವಿಜಯ್‌ ಜೊತೆ ನನ್ನ ಪ್ರಾಣವೂ ಹೋಗ್ತಿತ್ತು: ನಟ ಅಭಿಮನ್ಯು ಸಿಂಗ್
2,500 ಅಡಿ ಆಳದ ಕಂದಕ, ಆ ದಿನ ಸ್ವಲ್ಪ ಯಾಮಾರಿದ್ರೂ ದಳಪತಿ ವಿಜಯ್‌ ಜೊತೆ ನನ್ನ ಪ್ರಾಣವೂ ಹೋಗ್ತಿತ್ತು: ನಟ ಅಭಿಮನ್ಯು ಸಿಂಗ್

ಪದೇ ಪದೇ ಮುಂದೂಡಲ್ಪಟ್ಟಿದ್ದ ಸಿನಿಮಾ

'ಪೆದ್ದಿ' ಚಿತ್ರದ ಹಾದಿ ಆರಂಭದಿಂದಲೂ ಕೊಂಚ ಏರುಪೇರಿನಿಂದಲೇ ಕೂಡಿದೆ. ಮೊದಲು ರಾಮ್ ಚರಣ್ ಅವರ ಹುಟ್ಟುಹಬ್ಬದ ನೆನಪಿಗಾಗಿ ಮಾರ್ಚ್ 27ರಂದು ಸಿನಿಮಾ ರಿಲೀಸ್ ಮಾಡಲು ಯೋಜಿಸಲಾಗಿತ್ತು. ಆ ಬಳಿಕ ಏಪ್ರಿಲ್ 30ಕ್ಕೆ ಮುಂದೂಡಲ್ಪಟ್ಟು, ಕೊನೆಗೆ ಜೂನ್ 4ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲು ದಿನಾಂಕ ನಿಗದಿಪಡಿಸಲಾಗಿದೆ. ಈಗ ಭಾರತದಲ್ಲಿ ಬಿಡುಗಡೆಯಾಗಲು ದಿನಗಣನೆ ಆರಂಭವಾಗಿರುವಾಗಲೇ ಜಪಾನ್‌ನಲ್ಲಿ ಈ ರೀತಿಯಾಗಿರುವುದು ಅಭಿಮಾನಿಗಳಿಗೆ ಭಾರೀ ಬೇಸರ ಮೂಡಿಸಿದೆ.

'ಪೆದ್ದಿ' ಚಿತ್ರದ ಕಥೆ ಏನು?

ಇದು 1980ರ ದಶಕದ ಆಂಧ್ರಪ್ರದೇಶದ ಗ್ರಾಮೀಣ ಭಾಗದ ಹಿನ್ನೆಲೆಯನ್ನು ಹೊಂದಿರುವ ಒಂದು ಕ್ರೀಡಾ ಆಧಾರಿತ ಆಕ್ಷನ್ ಡ್ರಾಮಾ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಕುಸ್ತಿಪಟು (Wrestler) ಪಾತ್ರದಲ್ಲಿ ಕಾಣಿಸಿಕೊಳ್ಳಲು ನಟ ರಾಮ್ ಚರಣ್ ಅವರು ಭಾರಿ ದೈಹಿಕ ಬದಲಾವಣೆ ಮಾಡಿಕೊಂಡಿದ್ದು, ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಕಠಿಣ ತರಬೇತಿ ಪಡೆದಿದ್ದಾರೆ. 'ಉಪ್ಪೇನಾ' ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್ ಜೊತೆ ಜಾನ್ವಿ ಕಪೂರ್, ಸ್ಯಾಂಡಲ್‌ವುಡ್ ನಟ ಶಿವ ರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೇಂದು ಮತ್ತು ಬೋಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದು, ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ.

ದಕ್ಷಿಣ ಭಾರತದ ಸಿನಿಮಾಗಳಿಗೆ ಜಪಾನ್‌ನಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆ ಮತ್ತು ನಿಷ್ಠಾವಂತ ಅಭಿಮಾನಿ ಬಳಗ ಬೆಳೆಯುತ್ತಿದೆ. ಹೀಗಿರುವಾಗ ಜಾಗತಿಕ ಬಿಡುಗಡೆಯ ದಿನವೇ ಜಪಾನ್‌ನಲ್ಲೂ ರಿಲೀಸ್ ಆಗಿದ್ದರೆ ಸಿನಿಮಾದ ಕಲೆಕ್ಷನ್ ಹಾಗೂ ಪ್ರಚಾರಕ್ಕೆ ಭಾರಿ ಮೈಲೇಜ್ ಸಿಗುತ್ತಿತ್ತು. 'ಪೆದ್ದಿ' ಚಿತ್ರವನ್ನು ಕೇವಲ ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲೂ ಏಕಕಾಲಕ್ಕೆ ಪ್ಯಾನ್-ಇಂಡಿಯಾ ಸಿನಿಮಾ ಆಗಿ ಬಿಡುಗಡೆ ಮಾಡಲಾಗುತ್ತಿದೆ. ಜಪಾನ್‌ನಲ್ಲಿ ಸದ್ಯಕ್ಕೆ ಪ್ರದರ್ಶನ ರದ್ದಾಗಿದ್ದರೂ, ಜೂನ್ 4ರ ವಿಶ್ವದಾದ್ಯಂತದ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+