RRB Recruitment: ಎನ್‌ಟಿಪಿ ಹುದ್ದೆಗಳ ಸಿಬಿಟಿ-2 ಪರೀಕ್ಷೆ ಫಲಿತಾಂಶ ಪ್ರಕಟ, ಅಂಕಪಟ್ಟಿ ಡೌನ್‌ಲೋಡ್ ಹೇಗೆ?

RRB Recruitment: ರೈಲ್ವೆ ನೇಮಕಾತಿ ಮಂಡಳಿಗಳು (RRBs) ಪದವಿಪೂರ್ವ (ಯುಜಿ) ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) 2ರ ಪರೀಕ್ಷೆಯ ಫಲಿತಾಂಶಗಳನ್ನು ಇಂದು ಬುಧವಾರ ಬಿಡುಗಡೆ ಮಾಡಿದೆ. ಸಿಇಎನ್ 06/2024 ಅಡಿಯಲ್ಲಿ 2025ರ ಡಿಸೆಂಬರ್ 20 ರಂದು ನಡೆದಿದ್ದ ಎರಡನೇ ಹಂತದ ಪರೀಕ್ಷೆ ಇದಾಗಿದ್ದು, ಅಂದು ಪರೀಕ್ಷೆ ಎದುರಿಸಿದ್ದ ಅಭ್ಯರ್ಥಿಗಳಿಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.

ರೈಲ್ವೆ ಇಲಾಖೆಯ ವಿವಿಧ ವೃಂದದ ಹುದ್ದೆಗಳ ಪರೀಕ್ಷೆಗಳು ಕೇವಲ ಕನ್ನಡೇತರ ಭಾಷೆಯಲ್ಲಿ ಬರೆಯಲು ಅವಕಾಶ ಇತ್ತು. ಇದಕ್ಕೆ ಕನ್ನಡಪರ ಸಂಘಟನೆಗಳು, ಅಭ್ಯರ್ಥಿಗಳು, ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ಅದರಂತೆ ನಡೆದ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಿಸಲಾಗಿದೆ.

RRB NTPC UG CBT 2 Result

ಪೋರ್ಟಲ್ ಲಾಗಿನ್ ಆಗಿ ಪರಿಶೀಲಿಸಿ

ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಒಳಗೊಂಡಿರುವ ಫಲಿತಾಂಶವು ಪಿಡಿಎಫ್ ರೂಪದಲ್ಲಿ ಪ್ರಾದೇಶಿಕ ಆರ್‍‌ಆರ್‍‌ಬಿ ವೆಬ್‌ಸೈಟ್‌ಗಳಲ್ಲಿ ಲಭ್ಯವಿವೆ. ಜೊತೆಗೆ, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಪೋರ್ಟಲ್‌ಗೆ ಲಾಗಿನ್ ಆಗಿ ಪರೀಕ್ಷಾ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

Vande Metro: ಹುಬ್ಬಳ್ಳಿ-ಬೆಳಗಾವಿ-ದಾವಣಗೆರೆ ಮಾರ್ಗದಲ್ಲಿ RRTS ಕ್ಷಿಪ್ರ ರೈಲುಗಳಿಗೆ ಜೋರಾಯ್ತು ಬೇಡಿಕೆ
Vande Metro: ಹುಬ್ಬಳ್ಳಿ-ಬೆಳಗಾವಿ-ದಾವಣಗೆರೆ ಮಾರ್ಗದಲ್ಲಿ RRTS ಕ್ಷಿಪ್ರ ರೈಲುಗಳಿಗೆ ಜೋರಾಯ್ತು ಬೇಡಿಕೆ

ಸಿಬಿಟಿ-2 ಪರೀಕ್ಷೆಯಲ್ಲಿ 100 ಅಂಕಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್ ಮಾಡಿ ಆಯ್ಕೆಗೆ ಪರಿಗಣಿಸಲಾಗುವುದು ಎಂದು ರೈಲ್ವೆ ನೇಮಕಾತಿ ಮಂಡಳಿಯು ಸ್ಪಷ್ಟಪಡಿಸಿದೆ.

ರೈಲ್ವೆಯ ಈ ಹುದ್ದೆಗಳಿಗೆ ನೇಮಕಾತಿ

ಆರ್‌.ಆರ್‌.ಬಿ. ನೇಮಕಾತಿ ಪ್ರಕ್ರಿಯೆಯು ವಾಣಿಜ್ಯ ಮತ್ತು ಟಿಕೆಟ್ ಕ್ಲರ್ಕ್, ಟ್ರೈನ್ ಕ್ಲರ್ಕ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ ಮತ್ತು ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್‌ ಸೇರಿದಂತೆ ಹಲವು ಪದವಿಪೂರ್ವ ಮಟ್ಟದ ಎನ್‌ಟಿಪಿಸಿ ಹುದ್ದೆಗಳಿಗೆ ನಡೆಯುತ್ತಿದೆ. ಈ ಸಂಬಂಧ ಪರೀಕ್ಷೆ ನಡೆಸಲಾಗಿದ್ದು, ಇದೀಗ ಫಲಿತಾಂಶ ಹೊರ ಬಿದ್ದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

3,445 ಹುದ್ದೆಗಳ ಭರ್ತಿಗೆ ಪ್ಲ್ಯಾನ್

ಅಧಿಸೂಚನೆಯ ಪ್ರಕಾರ, ಒಟ್ಟು 3,445 ಹುದ್ದೆಗಳನ್ನು ಭರ್ತಿ ಮಾಡುವ ಗುರಿ ಹೊಂದಲಾಗಿದೆ. ಅವುಗಳಲ್ಲಿ ವಾಣಿಜ್ಯ ಮತ್ತು ಟಿಕೆಟ್ ಕ್ಲರ್ಕ್ ಹುದ್ದೆಗೆ 2022, ಟ್ರೈನ್ ಕ್ಲರ್ಕ್‌ಗೆ 72, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್‌ಗೆ 361, ಮತ್ತು ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್‌ಗೆ 990 ಹುದ್ದೆಗಳು ಲಭ್ಯ ಇವೆ ಎಂದು ತಿಳಿಸಲಾಗಿದೆ.

ಸಿಬಿಟಿ -2 ಪರೀಕ್ಷೆಯಲ್ಲಿ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳು ಈಗ ಮುಂದಿನ ಹಂತಗಳಲ್ಲಿ ದಾಖಲೆ ಪರಿಶೀಲನೆ ನಡೆಯಲಿದೆ. ವೈದ್ಯಕೀಯ ಪರೀಕ್ಷೆಗೆ ತಾತ್ಕಾಲಿಕವಾಗಿ ಆಯ್ಕೆಯಾಗಿದ್ದಾರೆ. ಫಲಿತಾಂಶ ಪರಿಶೀಲಿಸಲು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ಗೆ (https://testbook.com/news/rrb-ntpc-ug-final-result-2026-out/) ಭೇಟಿ ನೀಡಬಹುದು. ಅಲ್ಲಿ 'NTPC UG CBT 2 ಫಲಿತಾಂಶ 2026' ಲಿಂಕ್ ಅನ್ನು ಕ್ಲಿಕ್ ಮಾಡಿ, ಪ್ರಕಟಿತ ಪಿಡಿಎಫ್‌ ನಲ್ಲಿ ತಮ್ಮ ನೋಂದಣಿ ಸಂಖ್ಯೆ ಅಗತ್ಯವಿವರ ಹಾಕಿ ಹುಡುಕಬೇಕು. ನಂತರ ಅದನ್ನು ಮುಂದಿನ ಉಲ್ಲೇಖಕ್ಕಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಅಭ್ಯರ್ಥಿಗಳ ಮುಂದಿನ ಆಯ್ಕೆ ಹೇಗೆ?

ಆರ್‌.ಆರ್‌.ಬಿ. ಅಭ್ಯರ್ಥಿಗಳಿಗೆ ತಿಳಿಸಿರುವಂತೆ, ದಾಖಲೆ ಪರಿಶೀಲನೆ (DV) ಕರೆ ಪತ್ರಗಳನ್ನು ಎಸ್‌ಎಂಎಸ್ ಇಮೇಲ್ ಹಾಗೂ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಪ್ರತ್ಯೇಕವಾಗಿ ಕಳುಹಿಸಲಾಗುತ್ತದೆ. ಶಾರ್ಟ್‌ಲಿಸ್ಟ್ ಆದವರು ಪರಿಶೀಲನೆಗಾಗಿ ಮೂಲ ದಾಖಲೆಗಳು ಮತ್ತು ಎರಡು ಸೆಟ್‌ಗಳ ಸ್ವಯಂ ದೃಢೀಕರಿಸಿದ ಜೆರಾಕ್ಸ್‌ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು. ದಾಖಲೆ ಪರಿಶೀಲನೆಯ ನಂತರ, ಅಭ್ಯರ್ಥಿಗಳು ನಿಗದಿಪಡಿಸಿದ ರೈಲ್ವೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು.

ಅಂತಿಮ ಆಯ್ಕೆ ಮತ್ತು ಹುದ್ದೆಗಳ ಹಂಚಿಕೆಯು ಅರ್ಹತೆ, ಹುದ್ದೆಯ ಆದ್ಯತೆ, ಅನ್ವಯವಾಗುವಲ್ಲಿ ಟೈಪಿಂಗ್ ಕೌಶಲ್ಯ ಪರೀಕ್ಷೆಯಲ್ಲಿ ಅರ್ಹತೆ, ದಾಖಲೆ ಪರಿಶೀಲನೆ, ವೈದ್ಯಕೀಯ ಯೋಗ್ಯತೆ ಮತ್ತು ಹುದ್ದೆಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಆರ್‌.ಆರ್‌.ಬಿ ಅಧಿಸೂಚನೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+