ಅಮೆರಿಕದ ಪೌರತ್ವ ನೀಡುವ ಆಶ್ವಾಸನೆ ನೀಡಿದ ಜೋ
ವಾಷಿಂಗ್ಟನ್, ಅ.15: ಭಾರತ ಮೂಲದ ಅಮೆರಿಕನ್ನರು ಈ ದೇಶದ ಅಭಿವೃದ್ಧಿಗೆ ಮರೆಯಲಾಗದ ಕೊಡುಗೆ ನೀಡಿದ್ದಾರೆ ಎಂದು ಪ್ರತಿ ಭಾಷಣದಲ್ಲೂ ಹೇಳುತ್ತಾ ಬಂದಿರುವ ಅಮೆರಿಕ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಜೋ ಬೈಡನ್ ಅವರು ಮತ್ತೆ ಭಾರಿ ಆಶ್ವಾಸನೆ ನೀಡಿದ್ದಾರೆ. ಅಧಿಕಾರಕ್ಕೆ ಬಂದರೆ 11 ಮಿಲಿಯನ್ ಮಂದಿಯ ಅಕ್ರಮ ವಲಸೆ, ಪೌರತ್ವ ಸಮಸ್ಯೆ ದೂರಾಗಿಸಿ ಎಲ್ಲರಿಗೂ ಅಮೆರಿಕ ಪೌರತ್ವ ನೀಡುವ ಭರವಸೆಯನ್ನು ಜೋ ಬೈಡನ್ ನೀಡಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಜೊ ಬೈಡನ್ ತಮ್ಮ ಇತ್ತೀಚಿನ ಭಾಷಣದಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಹಾಗೂ ವಲಸಿಗರಿಗೆ ಪೌರತ್ವ ನೀಡುವುದರ ಬಗ್ಗೆ ಮಾತನಾಡಿದರು. ವಿಶ್ವದ ವಿವಿಧ ಭಾಗಗಳಲ್ಲಿ ಅಮೆರಿಕದ ನಾಯಕತ್ವವನ್ನು ಮರುಸ್ಥಾಪಿಸುವ ಬಗ್ಗೆಯೂ ಡೆಮೊಕ್ರಾಟಿಕ್ ಪಕ್ಷ ಯೋಜನೆ ಹಾಕಿಕೊಂಡಿದೆ ಎಂದರು.
ವರ್ಚುವಲ್ ದೇಣಿಗೆ ಸಂಗ್ರಹವನ್ನು ಸಮರ್ಥಿಸಿಕೊಂಡು, ಗಡಿಭಾಗದ ವಲಸೆ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಾನು ಆಯ್ಕೆಯಾದರೆ 1.1 ಕೋಟಿ ವಲಸಿಗರಿಗೆ ಪೌರತ್ವ ನೀಡುವಂಥ ವಲಸೆ ಮಸೂದೆಯನ್ನು ಜನಪ್ರತಿನಿಧಿಗಳ ಸಭೆ ಮತ್ತು ಸೆನೆಟ್ ಎರಡೂ ಕಡೆ ಮಂಡಿಸುವ ಭರವಸೆ ನೀಡುತ್ತೇನೆ ಎಂದರು.

ಟ್ರಂಪ್ ಮಾಡಿರುವ ಹಾನಿಯನ್ನು ಸರಿ ಪಡಿಸಿ, ಅಮೆರಿಕದ ಹಳೆ ಘನತೆ ಮತ್ತೆ ಮರಳಿ ತರಲು ಕನಿಷ್ಠ 4 ವರ್ಷಗಳು ಬೇಕಾಗುತ್ತದೆ ಎಂದರು. ಕೊರೊನಾವೈರಸ್ ಸಾಂಕ್ರಾಮಿಕದಿಂದ ಉಂಟಾಗಿರುವ ಆರ್ಥಿಕ ಸಮಸ್ಯೆ, ಶೈಕ್ಷಣಿಕ ಸಮಸ್ಯೆ, ಉದ್ಯೋಗ ಸಮಸ್ಯೆ, ಮುಂದಿನ ಪೀಳಿಗೆಗೆ ಬೇಕಾದ ಸುಂದರ ವೇದಿಕೆ ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.












Click it and Unblock the Notifications