ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಲಸಿಕೆಯ ಕುರಿತು ಪ್ರಧಾನಿ ಮೋದಿಯ ಬದ್ಧತೆ: ವಿಶ್ವ ಆರೋಗ್ಯ ಸಂಸ್ಥೆಯಿಂದ ಮೆಚ್ಚುಗೆ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 12: ಕೊವಿಡ್ 19 ಲಸಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿಗಿರುವ ಬದ್ಧತೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಕೊವಿಡ್‌ ಕುರಿತಂತೆ ಪ್ರಧಾನಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ ಬಳಿಕ, ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿ ಟ್ವೀಟ್‌ ಮಾಡಿರುವ ಟೆಡ್ರೋಸ್ ಅಧನೋಮ್ ಅವರು, 'ಕೊರೊನಾ ಸೋಂಕು ಜಗತ್ತಿಗೆ ಸವಾಲಾಗಿದೆ.

ದೆಹಲಿಯಲ್ಲಿ ಪ್ರತಿ ನಾಲ್ಕರಲ್ಲಿ ಒಬ್ಬರಿಗೆ ಕೊರೊನಾ ಸೋಂಕು:ಸೆರೋ ದೆಹಲಿಯಲ್ಲಿ ಪ್ರತಿ ನಾಲ್ಕರಲ್ಲಿ ಒಬ್ಬರಿಗೆ ಕೊರೊನಾ ಸೋಂಕು:ಸೆರೋ

ಪರಸ್ಪರ ಸಹಕಾರದೊಂದಿಗೆ ಮಾತ್ರ ಇದನ್ನು ಕೊನೆಗಾಣಿಸಲು ಸಾಧ್ಯ. ಕೋವಿಡ್‌ ವಿರುದ್ಧದ ಹೋರಾಟ, ಲಸಿಕೆ ತಯಾರಿಕೆ ಹಾಗೂ ಇತರ ದೇಶಗಳಿಗೆ ಪೂರೈಕೆ ಮಾಡಲು ಭಾರತ ತನ್ನ ಲಸಿಕೆ ಉತ್ಪಾದನಾ ಸಾಮರ್ಥ್ಯ ಬಳಕೆಯ ಬಗ್ಗೆ ತೋರುತ್ತಿರುವ ಬದ್ಧತೆಗೆ ಧನ್ಯವಾದಗಳು ಎಂದು ಟ್ವೀಟ್‌ ಮಾಡಿದ್ದಾರೆ.

WHO Chief Tedros Thanks PM Modi For Covid-19 Vaccine Initiative

ಜಾಗತಿಕ ಪಿಡುಗಾಗಿರುವ ಮಾರಕ ಕೊರೊನಾ ಸಾಂಕ್ರಾಮಿಕ ಸೋಂಕಿನ ವಿರುದ್ಧದ ಭಾರತದ ಹೋರಾಟಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಗೆಬ್ರೆಯೆಸಸ್ ಅವರು ಟ್ವೀಟ್ ಮಾಡಿದ್ದು, ಕೊರೊನಾ ಸೋಂಕಿನ ಹೋರಾಟ ಹಾಗೂ ಲಸಿಕೆ ತಯಾರಿಕೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Recommended Video

Donald Trump ನಾನೇ ಅಮೆರಿಕ ಅಧ್ಯಕ್ಷ!! | Oneindia Kannada

ವೈದ್ಯ ವಿಜ್ಞಾನ ಹಾಗೂ ಔಷಧಿ ಕ್ಷೇತ್ರದಲ್ಲಿ ಪರಸ್ಪರ ಸಹಭಾಗಿತ್ವದ ಮೂಲಕ ಜ್ಞಾನ, ಸಂಶೋಧನೆಯ ವಿನಿಮಯ ಮತ್ತು ಪರಿಣಾಮಕಾರಿ ತರಬೇತಿಯೊಂದಿಗೆ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟ ಮಾಡಬೇಕಿದೆ. ಈ ಬಗ್ಗೆ ಭಾರತ ಜಾಗತಿಕಮಟ್ಟದಲ್ಲಿ ನೆರವು ನೀಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.

English summary
World Health Organization chief Tedros Adhanon Ghebreyesus on Wednesday thanked Prime Minister Narendra Modi for his strong commitment to Covax a global vaccine pool led by WHO and Gavi and for making Covid-19 vaccines a global public good.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X