ಪಾಕ್‌ನಿಂದ ಎಫ್-16 ಯುದ್ಧ ವಿಮಾನ ದುರ್ಬಳಕೆ: ಅಮೆರಿಕ ಸೂಕ್ಷ್ಮ ಅವಲೋಕನ
ವಾಷಿಂಗ್ಟನ್, ಮಾರ್ಚ್ 6: ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನವು ಅಮೆರಿಕದ ಅನುಮತಿ ಇಲ್ಲದೆ ಎಫ್-16 ವಿಮಾನವನ್ನು ಬಳಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ ಅವಲೋಕನ ಮಾಡುವುದಾಗಿ ಅಮೆರಿಕ ತಿಳಿಸಿದೆ.
ಪಾಕಿಸ್ತಾನ ಸೇನೆಯು ಅಮೆರಿಕದೊಂದಿಗಿನ ನಿಯಮಗಳನ್ನು ಮೀರಿ ಭಾರತೀಯ ಸೇನೆಯ ವಿರುದ್ಧ ಎಫ್-16 ಯುದ್ಧ ವಿಮಾನಗಳನ್ನು ಬಳಕೆ ಮಾಡಿದೆ ಎಂದು ಭಾರತವು ಸಾಕ್ಷಿ ಸಹಿತ ಆರೋಪ ಮಾಡಿತ್ತು. ಈ ವಿಷಯವನ್ನು ಮಾಧ್ಯಮ ಪ್ರತಿನಿಧಿಗಳು ಮಂಗಳವಾರ ಸುದ್ದಿಗೋಷ್ಠಿಯೊಂದರಲ್ಲಿ ಅಮೆರಿಕ ಸರ್ಕಾರದ ಉಪ ವಕ್ತಾರ ರಾಬರ್ಟ್ ಪಲ್ಲಾಡಿನೋ ತಿಳಿಸಿದ್ದಾರೆ.
ಪಾಕಿಸ್ತಾನ ಸೇನೆಯು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಅಮೆರಿಕದಿಂದ ಪಡೆದ ಎಫ್-16 ವಿಮಾನವನ್ನು ಬಳಕೆ ಮಾಡಿದೆ ಎನ್ನಲಾದ ಪ್ರಕರಣವನ್ನು ಅಮೆರಿಕ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ ಗಮನಿಸುತ್ತಿದೆ ಎಂದು ಹೇಳಿದ್ದಾರೆ.

ಯಾವುದನ್ನೂ ಖಚಿತಪಡಿಸುವುದಿಲ್ಲ. ಆದರೆ, ಎರಡು ದೇಶಗಳ ನಡುವೆ ನಡೆದಿರುವ ದ್ವಿಪಕ್ಷೀಯ ಒಪ್ಪಂದದ ಅಂಶಗಳನ್ನು ಸಾರ್ವಜನಿಕವಾಗಿ ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ, ಒಡಂಬಡಿಕೆಯಲ್ಲಿ ಅಮೆರಿಕದ ರಕ್ಷಣಾ ತಂತ್ರಜ್ಞಾನ ಅಡಕವಾಗಿರುತ್ತದೆ.
ಇತರ ದೇಶಗಳೊಂದಿಗೂ ಇದೇ ಒಪ್ಪಂದವನ್ನು ನಾವು ಹೊಂದಿದ್ದೇವೆ ಎಂದಿದ್ದಾರೆ. ಪುಲ್ವಾಮಾದಲ್ಲಿ ಉಗ್ರರಿಂದ ನಡೆದ ಆತ್ಮಾಹುತಿ ದಾಳಿಯಲ್ಲಿ ಭಾರತದ 40ಕ್ಕೂ ಯೋಧರು ಹುತಾತ್ಮತಾಗಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಬಾಲಕೋಟ್‌ನಲ್ಲಿ ಫೆ.24ರಂದು ಜೈಷ್ ಸಂಘಟನೆಯ ಅಡಗುತಾಣಗಳ ಮೇಲೆ ಪ್ರತಿ ದಾಳಿ ನಡೆಸಿತ್ತು. ಈ ವೇಳೆ ಭಾರತದ ಮೇಲೆ ದಾಳಿ ನಡೆಸಲು ಪಾಕಿಸ್ತಾನವು ಎಫ್-16 ಯುದ್ಧ ವಿಮಾನ ಬಳಕೆ ಮಾಡಿತ್ತು. ಭಾರತವು ಆ ವಿಮಾನವನ್ನು ಹೊಡೆದುರುಳಿಸಿತ್ತು.












Click it and Unblock the Notifications