• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೆನೆಟರ್ ಆಗುವತ್ತ ಪಾಸ್ಟರ್ ವಾರ್ನಕ್, ಡೆಮಾಕ್ರಾಟ್ಸ್‌ನಿಂದ ಇತಿಹಾಸ ನಿರ್ಮಾಣ

|

ವಾಷಿಂಗ್ಟನ್, ಜನವರಿ 6: ಡೆಮಾಕ್ರಾಟಿಕ್ ಪಕ್ಷದ ರಫೆಲ್ ವಾರ್ನಾಕ್ ಅವರು ಬುಧವಾರದಂದು ಜಾರ್ಜಿಯಾದಲ್ಲಿ ಗೆಲುವು ಸಾಧಿಸುವ ಮೂಲಕ ಈ ರಾಜ್ಯದ ಇತಿಹಾಸದಲ್ಲೇ ಮೊದಲ ಕಪ್ಪು ಸೆನೆಟರ್ ಎನಿಸಿಕೊಂಡಿದ್ದಾರೆ. ಜೊತೆಗೆ ಡೆಮಾಕ್ರಾಟಿಕ್ಸ್ ಸೆನೆಟ್ ಬಹುಮತದತ್ತ ಸಾಗಿದೆ.

ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಬೋಧನೆ ಮಾಡುತ್ತಿದ್ದ ಅಟ್ಲಾಂಟಾ ಚರ್ಚ್ ನಲ್ಲಿ ಕಳೆದ 15 ವರ್ಷಗಳಿಂದ ಕಳೆದ ಪಾದ್ರಿ/ ಪಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ವಾರ್ನಾಕ್ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಮಾಜಿ ಉದ್ಯಮಿ ಕೆಲ್ಲಿ ಲೋಫ್ಲರ್(50 ವರ್ಷ) ಅವರನ್ನು ಸೋಲಿಸಿದ್ದಾರೆ ಎಂದು ಎಪಿ ವರದಿ ಮಾಡಿದೆ.

ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರ್ಜಿಯಾದಲ್ಲಿ ತಮ್ಮ ಅಂತಿಮ ಚುನಾವಣಾ ಪ್ರವಾಸ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ರಿಪಬ್ಲಿಕನ್ ಪೆರ್ಡ್ಯೂ(71) ಹಾಗೂ ಡೆಮಾಕ್ರಾಟಿಕ್ ಒಸಾಫ್(33) ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಓಸಾಫ್ ಗೆದ್ದರೆ, ಡೆಮೋಕ್ರಾಟ್‌ಗಳು ಕಾಂಗ್ರೆಸ್ಸಿನ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ, ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡನ್ ಅವರು ಜನವರಿ 20 ರಂದು ಅಧಿಕಾರ ವಹಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದು, ಇದರಿಂದ ಬಲ ಇನ್ನಷ್ಟು ಹೆಚ್ಚಲಿದೆ.

ಜಾರ್ಜಿಯಾದ ಕಾನೂನಿನ ಪ್ರಕಾರ, ಹಿನ್ನಡೆ ಅನುಭವಿಸಿದ ಅಭ್ಯರ್ಥಿಯು ಮತ ಎಣಿಕೆ ಬಗ್ಗೆ ಪ್ರಶ್ನಿಸಿ ಮರು ಎಣಿಕೆಗೆ ಮನವಿ ಸಲ್ಲಿಸಬಹುದಾಗಿದೆ. ಆದರೆ, ಇಬ್ಬರು ಅಭ್ಯರ್ಥಿಗಳ ನಡುವಿನ ಮತಗಳ ಅಂತರ 0.5 % ಅಥವಾ ಅದಕ್ಕಿಂತ ಕಡಿಮೆ ಇರಬೇಕು ಎಂಬ ನಿಯಮವಿದೆ.

51 ವರ್ಷ ವಯಸ್ಸಿನ ವಾರ್ನಕ್ ಅವರು ಮತದಾರರಿಗೆ ಧನ್ಯವಾದ ಅರ್ಪಿಸಿ, ತಮ್ಮ ಕಷ್ಟದ ದಿನಗಳನ್ನು ಸ್ಮರಿಸಿದ್ದಾರೆ. ಕಠಿಣ ಪರಿಶ್ರಮ, ಜನ ಬಲ ಇದ್ದರೆ ಎಲ್ಲವೂ ಸಾಧ್ಯ ಎಂದಿದ್ದಾರೆ. ಜಾರ್ಜಿಯಾದಲ್ಲಿ ಕಪ್ಪು ವರ್ಣೀಯರ ಬೆಂಬಲ ಪಡೆದಿದ್ದ ಬೈಡನ್ 16 ಎಲೆಕ್ಟ್ರೋರಲ್ ಮತಗಳನ್ನು ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Democrat Raphael Warnock won one of Georgia's two Senate runoffs Wednesday, becoming the first Black senator in his state's history and putting the Senate majority within the party's reach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X