ಸಿಂಹದ ಎದುರಲ್ಲೇ ಚೇಷ್ಟೆ ಮಾಡಿದ ಮಹಿಳೆ: ವಿಡಿಯೋ ವೈರಲ್
ವಾಷಿಂಗ್ಟನ್, ಅಕ್ಟೋಬರ್, 03: ಇದನ್ನು ಧೈರ್ಯ ಎನ್ನಬೇಕೋ, ಭಂಡಧೈರ್ಯದ ಅತಿರೇಕ ಎನ್ನಬೇಕೋ....!
ಮಹಿಳೆಯೊಬ್ಬರು ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಝೂವೊಂದರ ಬೇಲಿ ಹಾರಿ ಸಿಂಹವಿದ್ದ ಜಾಗಕ್ಕೆ ತೆರಳಿ, ಅದರ ಮುಂದೆಯೇ ನಿಂತು ಚೇಷ್ಟೆ ಮಾಡುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಲವರು ಈ ನಡೆಯನ್ನು 'ಧೈರ್ಯ' ಎಂದು ವ್ಯಾಖ್ಯಾನಿಸಿದ್ದರೆ, ಹೆಚ್ಚಿನ ಜನ ಭಂಡ ಧೈರ್ಯ, ಪುಂಡತನ ಎಂದು ಕರೆದಿದ್ದಾರೆ.
View this post on InstagramA post shared by Real Sobrino (@realsobrino) on
ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ದಿ ಬ್ರಾಕ್ಸ್ ಝೂ ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಸಿಂಹದ ಮುಂದೆ ಹೋಗಿ ನಿಂತು ತನ್ನ ಎರಡೂ ಕೈ ಬೀಸುತ್ತ, ಚೇಷ್ಠೆ ಮಾಡಿದ್ದಲ್ಲದೆ, "ಬೇಬಿ! ಐ ಲವ್ ಯು" ಎಂದಿದ್ದಾರೆ.

ಆದರೆ ಈ ವಿಡಿಯೋದಲ್ಲಿ ಸಿಂಹ ಮಹಿಳೆಯ ಮೇಲೆ ದಾಳಿ ನಡೆಸಿತಾ ಅಥವಾ ಮಹಿಳೆ ಅಪಾಯದಿಂದ ಪಾರಾಗಿ ವಾಪಸ್ ಬಂದರಾ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸಾಮಾಜಿಕ ಮಾಧ್ಯಮಗಳಲ್ಲಿ ಆಕೆಯ ಧೈರ್ಯವನ್ನು ಕೊಂಡಾಡಿದ್ದಕ್ಕಿಂತ ಆಕೆಯದು ಬೇಜವಾಬ್ದಾರಿ ವರ್ತನೆ, ಅದರಿಂದ ಸಿಂಹಕ್ಕೆ ಏನೂ ಹಾನಿಯಾಗದಿದ್ದರೆ ಸಾಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜೊತೆಗೆ ಮಹಿಳೆಯನ್ನು ಬೇಲಿದಾಟಿ ಹೋಗಲು ಬಿಟ್ಟ ಝೂ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಮಾತು ಕೇಳಿಬಂದಿದೆ.












Click it and Unblock the Notifications