"ಉದ್ಯೋಗ ಕಳೆದುಕೊಂಡೆ" ಇಂಗ್ಲೀಷ್ ಹಾಡಿಗೆ ಬಿಡೆನ್, ಒಬಾಮಾ ಡ್ಯಾನ್ಸ್!
ವಾಶಿಂಗ್ಟನ್, ನವೆಂಬರ್.08: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ 46ನೇ ಅಧ್ಯಕ್ಷರಾಗಿ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಆಯ್ಕೆಯಾಗುದ್ದೇ ತಡ ಡೊನಾಲ್ಡ್ ಟ್ರಂಪ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಮಾಡಲಾಗುತ್ತಿದೆ.
ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತಾದ ಮೆಮೋಸ್, ಜೋಕ್ಸ್ ಮತ್ತು ಸ್ಪೂಫ್ ವಿಡಿಯೋಗಳನ್ನು ಹರಿ ಬಿಡಲಾಗುತ್ತಿದೆ. ಜೋ ಬಿಡೆನ್ ಅವರು ವೇದಿಕೆ ಮೇಲೆ ನಿಂತು "ನಿಮಗೆಲ್ಲ ತಿಳಿಸುವುದಕ್ಕೆ ಒಂದು ವಿಷಯವಿದೆ" ಎಂದು ಹೇಳಿದರು. ಸ್ವಲ್ಪಹೊತ್ತು ಸುಮ್ಮನಾದ ಅವರು, ಮೊಬೈಲ್ ನಲ್ಲಿ "Lose Yo Job By iMarkkeyz' ಎಂಬ ಡಿಜೆ ಹಾಡನ್ನು ಪ್ಲೇ ಮಾಡಿ ನಗುವುದಕ್ಕೆ ಶುರು ಮಾಡುತ್ತಾರೆ.
ಈ ಹಾಡಿನ ಅರ್ಥ ಡೊನಾಲ್ಡ್ ಟ್ರಂಪ್ ಅವರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳುವುದೇ ಆಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಾಡಿಗೆ ಜೋ ಬಿಡೆನ್, ಕಮಲಾ ಹ್ಯಾರೀಸ್ ಹಾಗೂ ಬರಾಕ್ ಒಬಾಮಾ ಪ್ರತ್ಯೇಕವಾಗಿ ನೃತ್ಯ ಮಾಡುತ್ತಿರುವ ದೃಶ್ಯಗಳನ್ನು ಸೇರಿಸಲಾಗಿದೆ. ಸಾಮಾಜಿಕ ತಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಸ್ಟ್ ಆಗುತ್ತಿರುವ ಈ ವಿಡಿಯೋ ಒಂದು ತುಣುಕು ಇಲ್ಲಿದೆ ನೋಡಿ.

ಟ್ರೆಂಡ್ ಆಗುತ್ತಿರುವ ವಿಡಿಯೋ ಹಿನ್ನೆಲೆ:
ಕಳೆದ ಸಪ್ಟೆಂಬರ್ ನಲ್ಲಿ ಫ್ಲೋರಿಡಾದಲ್ಲಿ ನಡೆದ ಹಿಸ್ಪ್ಯಾನಿಕ್ ಹೆರಿಟೇಜ್ ಮಂತ್ ಕಾರ್ಯಕ್ರಮವನ್ನು ಉದ್ದೇಶಿಸಿ ಜೋ ಬೈಡನ್ ಮಾತನಾಡಿದ್ದರು. ಈ ವಿಡಿಯೋ ಟ್ರೆಂಡ್ ಆಗುತ್ತಿದ್ದಂತೆ ಮೊದಲು ಬೈಡನ್ ಬಾಷಣಕ್ಕೆ ಸಂಬಂಧಿಸಿದ ಅಸಲಿ ವಿಡಿಯೋವನ್ನು 5.6 ಮಿಲಿಯನ್ ಗಿಂತ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 1.79 ಲಕ್ಷ ಲೈಕ್ ಹಾಗೂ 5.43 ಲಕ್ಷ ಬಾರಿ ರೀ-ಟ್ವೀಟ್ ಮಾಡಲಾಗಿದೆ.
We just have one last thing to say to Trump... pic.twitter.com/3UJgeGlwwP
— teri in new york (@terinewyork) November 6, 2020
ಕಳೆದ ಶನಿವಾರವಷ್ಟೇ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಚುನಾವಣೆಯಲ್ಲಿ 290 ಮತಗಳನ್ನು ಪಡೆದ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ದೇಶದ 46ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಭಾರತೀಯ ಮೂಲದ ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅಮೆರಿಕಾದ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications