• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸಂದರ್ಭದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಳ: ವಿಶ್ವಸಂಸ್ಥೆ

|
Google Oneindia Kannada News

ವಿಶ್ವಸಂಸ್ಥೆ, ನವೆಂಬರ್ 25: ಕೋವಿಡ್ ಸಂದರ್ಭದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗಿದೆ ಎನ್ನುವ ಮಾಹಿತಿಯನ್ನು ವಿಶ್ವಸಂಸ್ಥೆ ನೀಡಿದೆ.

ಕೊರೊನಾ ಸೋಂಕು ಆರಂಭವಾದಾಗಿನಿಂದ ಮನೆಗಳಲ್ಲಿ ಜಗಳ, ಗಲಾಟೆಗಳು ಹೆಚ್ಚಾಗಿದ್ದು, ಕೆಲವು ಮಹಿಳೆಯರಲ್ಲಿ ಅಸುರಕ್ಷಿತ ಭಾವನೆ ಮೂಡಲು ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದರಲ್ಲಿ ಮಾಹಿತಿ ಬಹಿರಂಗವಾಗಿದೆ.

ಭಾರತದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಳ:NFHS ಸಮೀಕ್ಷೆ ಭಾರತದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಳ:NFHS ಸಮೀಕ್ಷೆ

ವಿಶ್ವಸಂಸ್ಥೆಯಲ್ಲಿ ಮಹಿಳೆಯರಿಗಾಗಿ ಇರುವ ಯುಎನ್ ವಿಮೆನ್ (UN Women) ಸುಮಾರು 13 ದೇಶಗಳಲ್ಲಿ 'Measuring the shadow pandemic: Violence against women during Covid-19' ಎಂಬ ವಿಚಾರವಾಗಿ ಸಮೀಕ್ಷೆ ನಡೆಸಿದ್ದು, ಹಲವಾರು ವಿಚಾರಗಳನ್ನು ಬಹಿರಂಗಪಡಿಸಿದೆ.

ಮನೆಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಮೇಲೆ ಕೋವಿಡ್ ಸೋಂಕು ಬೀರಿರುವ ಪ್ರಭಾವದ ಕುರಿತು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೋವಿಡ್ ಪ್ರಾರಂಭವಾದಾಗಿನಿಂದ ಶೇಕಡಾ 50ರಷ್ಟು ಮಹಿಳೆಯರು ಒಂದಲ್ಲಾ ಒಂದು ರೀತಿಯಲ್ಲಿ ಹಿಂಸಾಚಾರ ಅನುಭವಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮನೆಯಿಂದ ಹೊರಗೆ ಅತಿ ಹೆಚ್ಚು ಕಿರುಕುಳಕ್ಕೆ ಒಳಗಾಗುತ್ತಿದ್ದೇವೆ ಎಂದು ಶೇಕಡಾ 40ರಷ್ಟು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಪ್ರಾರಂಭವಾದಾಗಿನಿಂದ ರಾತ್ರಿ ಒಬ್ಬಂಟಿಯಾಗಿ ನಡೆಯುವುದು ಅಷ್ಟೇನೂ ಸುರಕ್ಷಿತವಲ್ಲ ಎಂದು ಐವರು ಮಹಿಳೆಯರಲ್ಲಿ ಮೂವರ ಅಭಿಪ್ರಾಯವಾಗಿದೆ.

ಆರ್ಥಿಕ ಒತ್ತಡ, ನಿರುದ್ಯೋಗ, ಆಹಾರ ಅಭದ್ರತೆ ಮತ್ತು ಕೌಟುಂಬಿಕ ಸಮಸ್ಯೆಗಳಂತಹ ಸಾಮಾಜಿಕ - ಆರ್ಥಿಕ ಅಂಶಗಳು ಮಹಿಳೆಯರ ಸುರಕ್ಷತೆಯ ಮೇಲೆ ಮಾತ್ರವಲ್ಲದೇ ಅವರ ಆರೋಗ್ಯದ ಮೇಲೆಯೂ ಸಾಕಷ್ಟು ಪರಿಣಾಮ ಬೀರುತ್ತದೆ. ಮಹಿಳೆಯರ ಮೇಲಿನ ಹಿಂಸಾಚಾರವೂ ಜಾಗತಿಕ ಸಮಸ್ಯೆ ಎಂದು ಯುಎನ್ ಮಹಿಳಾ ಕಾರ್ಯನಿರ್ವಾಹಕ ನಿರ್ದೇಶಕಿ ಸಿಮಾ ಬಹೌಸ್ ತಿಳಿಸಿದ್ದಾರೆ.

ನವೆಂಬರ್ 25ರಂದು ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣೆಗಾಗಿ ಅಂತಾರಾಷ್ಟ್ರೀಯ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ವರದಿಯನ್ನು ಬಿಡುಗಡೆ ಮಾಡಿದೆ.

ಕೋವಿಡ್ ವೇಳೆ ದೈಹಿಕ ಕಿರುಕುಳಕ್ಕೆ ಒಳಗಾಗಿದ್ದೇವೆ ಎಂದು ಶೇಕಡಾ 21ರಷ್ಟು ಮಹಿಳೆಯರು ಹೇಳಿಕೊಂಡಿದ್ದಾರೆ. ಬೇರೆ ಕುಟುಂಬಗಳಿಂದ ಕಿರುಕುಳಕ್ಕೆ ಒಳಗಾಗಿರುವುದಾಗಿ ಶೇಕಡಾ 21ರಷ್ಟು ಮಂದಿ ಹಾಗೂ ಮನೆಯಲ್ಲಿರುವ ಮಹಿಳೆಯರಿಂದಲೇ ಕಿರುಕುಳಕ್ಕೆ ಒಳಗಾಗಿರುವುದಾಗಿ ಶೇಕಡಾ 19ರಷ್ಟು ಮಹಿಳೆಯರು ಹೇಳಿಕೊಂಡಿದ್ದಾರೆ.

ಡಿವೋರ್ಸ್ ಕೇಸುಗಳ ಸಂಖ್ಯೆಯೂ ಹೆಚ್ಚಳ: ಇಡೀ ವಿಶ್ವವೇ ಕೊರೊನಾ ವಿರುದ್ಧ ಹೋರಾಟ ನಡೆಸಿದ್ದು, ಇದರಿಂದ ಹೊರಬರಲು ಇನ್ನಿಲ್ಲದ ಸರ್ಕಸ್ ನಡೆಸಿದೆ. ಪ್ರಮುಖವಾಗಿ ಲಾಕ್​ಡೌನ್ ಹೇರಿಕೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಲೈಂಗಿಕ ಕಿರುಕುಳ ಹಾಗೂ ಡೈವೋರ್ಸ್ ಕೇಸ್​ಗಳು ಹೆಚ್ಚಾಗಿ ಕಂಡು ಬಂದಿವೆ.

ಇನ್ನು ಭಾರತ ಒಂದರ ವಿಚಾರಕ್ಕೆ ಬಂದರೆ ತೆಲಂಗಾಣದ ವಿವಿಧ ಪ್ರದೇಶಗಳಲ್ಲಿ ಅತಿ ಹೆಚ್ಚು ಕೌಟುಂಬಿಕ ಕಲಹದಂತಹ ಪ್ರಕರಣಗಳು ದಾಖಲಾಗಿದ್ದು, ಪ್ರಮುಖವಾಗಿ ಲೈಂಗಿಕ ಕಿರುಕುಳ ಹಾಗೂ ಡೈವೋರ್ಸ್​​ನಂತಹ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿವೆ. ಹೀಗಾಗಿ ಸಾಂಕ್ರಾಮಿಕವು ಮಹಿಳೆಯರು ಹಾಗೂ ಮಕ್ಕಳಿಗೆ ಹೊಸ ಸಂಕಷ್ಟ ತಂದಿಟ್ಟಿದೆ. ಇದರಿಂದ ಮಹಿಳೆಯರಿಗೆ ಆರೋಗ್ಯ ಕಾಳಜಿ ಮಧ್ಯೆ ಮತ್ತೊಂದು ಸಮಸ್ಯೆ ಎದುರಿಸುವಂತಾಗಿದೆ.

ತೆಲಂಗಾಣದಲ್ಲಿ ಲಾಕ್​ಡೌನ್​ ಘೋಷಣೆ ಮಾಡಿರುವ ಕಾರಣ ಗಂಡದಿರು, ಇತರ ಸದಸ್ಯರು ದಿನದ 24 ಗಂಟೆ ಮನೆಯಲ್ಲಿ ಉಳಿದುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದ್ದು, ಹೀಗಾಗಿ ಮಹಿಳೆಯರ ಮೇಲೆ ಅತಿಯಾದ ಕೆಲಸದ ಒತ್ತಡವಾಗುತ್ತಿದೆ. ಜತೆಗೆ ಗಂಡದಿರ ಕಿರುಕುಳ, ದೈಹಿಕ ಹಲ್ಲೆ, ಮಾನಸಿಕ ಕಿರುಕುಳದಂತಹ ಪ್ರಕರಣ ಹೆಚ್ಚಾಗಿ ದಾಖಲಾಗಿವೆ.

ಕಳೆದ ಒಂದೂವರೆ ವರ್ಷದಲ್ಲಿ ತೆಲಂಗಾಣದಲ್ಲಿ ಕೌಟುಂಬಿಕ ಹಿಂಸಾಚಾರ ಪ್ರಕರಣ ಹೆಚ್ಚಾಗಿ ಏರಿಕೆಯಾಗಿದ್ದು, ಕೋವಿಡ್​ ಯುಗದಲ್ಲಿ ಇಷ್ಟೊಂದು ಪ್ರಕರಣ ಕಾಣಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿತ್ಯ ಸರಾಸರಿ 28 ಮಹಿಳೆಯರು ಕಿರುಕುಳ ಪ್ರಕರಣ ದಾಖಲು ಮಾಡ್ತಿದ್ದು, ಕಳೆದ ಒಂದು ವರ್ಷದಲ್ಲಿ ಸುಮಾರು 10,338 ಪ್ರಕರಣ ವರದಿಯಾಗಿವೆ. ಪ್ರಮುಖವಾಗಿ ಲೈಂಗಿಕ ಕಿರುಕುಳದಂತಹ ಪ್ರಕರಣ ಹೆಚ್ಚಾಗಿವೆ.ಸುಮಾರು 491 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಸಹ ದಾಖಲಾಗಿವೆ.

English summary
A new report of UN Women has highlighted the impact of Coronavirus (Covid-19) on women's safety at home and in public spaces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X