ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಹೊತ್ತಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬಿಗ್ ಶಾಕ್..!

By ಅನಿಕೇತ್
|
Google Oneindia Kannada News

ವಾಷಿಂಗ್ಟನ್ , ಜುಲೈ 09: ಕೊರೊನಾ ಸಂಕಷ್ಟ ಎದುರಿಸಲಾಗದೆ ಒದ್ದಾಡುತ್ತಿರುವ ಅಮೆರಿಕದಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಜನಾಕ್ರೋಶ ಮೊಳಗುತ್ತಿದೆ. ಈ ಹೊತ್ತಲ್ಲೇ ಡೊನಾಲ್ಡ್ ಟ್ರಂಪ್‌ಗೆ ಅಮೆರಿಕದ ಸುಪ್ರೀಂಕೋರ್ಟ್ ಮತ್ತೊಂದು ಶಾಕ್ ನೀಡಿದೆ. ಅಮೆರಿಕ ಅಧ್ಯಕ್ಷರ ಟ್ರಂಪ್ ಆದಾಯ ಪರಿಶೀಲನೆ ಕುರಿತಾಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್, ಟ್ರಂಪ್ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಗೆ ಅಸ್ತು ಎಂದಿದೆ.

ಮಹಿಳೆಯರ ಜೊತೆಗೆ ಸಂಬಂಧ ಇರಿಸಿಕೊಂಡಿದ್ದ ಟ್ರಂಪ್ ಅವರು ಆ ಮಹಿಳೆಯರಿಗೆ ಭಾರಿ ಮೊತ್ತದ ಹಣ ಪಾವತಿಸಿದ್ದಾರೆ. ಟ್ರಂಪ್ ಹಣಕಾಸು ವಹಿವಾಟಿನ ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾ. ಜಾನ್ ಜಿ ರಾಬರ್ಟ್ಸ್ ಮಾನ್ಯ ಮಾಡಿದ್ದಾರೆ.

ಮೆಲಾನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳುಮೆಲಾನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಆದರೆ, ಅಧ್ಯಕ್ಷ ಸ್ಥಾನದಲ್ಲಿರುವ ತನಕ ತನ್ನ ವಿರುದ್ಧ ತನಿಖೆ ನಡೆಸುವಂತಿಲ್ಲ, ಎಲ್ಲಾ ರೀತಿಯ ಕ್ರಿಮಿನಲ್ ವಿಚಾರಣೆಯಿಂದ ಅಧ್ಯಕ್ಷ ಸ್ಥಾನದಲ್ಲಿರುವವರು ಹೊರತಾಗಿರುತ್ತಾರೆ ಎಂದು ಟ್ರಂಪ್ ಪರ ವಕೀಲರು ವಾದಿಸಿದ್ದರು. ಆದರೆ, ಟ್ರಂಪ್ ವಿರುದ್ಧ ತೀರ್ಪು ಬಂದಿದ್ದು, ಭಾರಿ ಮುಖಭಂಗ ಅನುಭವಿಸಿದ್ದಾರೆ..

 ಟ್ರಂಪ್ ಗೆ ಭಾರಿ ಮುಖಭಂಗವಾಗಿದೆ

ಟ್ರಂಪ್ ಗೆ ಭಾರಿ ಮುಖಭಂಗವಾಗಿದೆ

ಆದರೆ, ಕೋರ್ಟ್ ಆದೇಶದಲ್ಲಿ ಟ್ರಂಪ್ ಪರ 2 ಹಾಗೂ ವಿರುದ್ಧ 7 ಆಧಾರದಲ್ಲಿ ಮತ ಬಂದಿದ್ದು, ಟ್ರಂಪ್ ಗೆ ಭಾರಿ ಮುಖಭಂಗವಾಗಿದೆ. ಇದೇ ರೀತಿ 1974ರಲ್ಲಿ ರಿಚರ್ಡ್ ನಿಕ್ಸನ್ ವಿರುದ್ಧದ ವಾಟರ್ ಗೇಟ್ ಸ್ಕ್ಯಾಮ್ ಹಾಗೂ 1997ರಲ್ಲಿ ಬಿಲ್ ಕ್ಲಿಂಟನ್ ವಿರುದ್ಧ ಕೇಳಿಬಂದಿದ್ದ ಲೈಂಗಿಕ ಕಿರುಕುಳ ಆರೋಪದ ಬಗ್ಗೆಯೂ ಅಧ್ಯಕ್ಷರ ವಿರುದ್ಧವೇ ಕೋರ್ಟ್ ತೀರ್ಪು ಬಂದಿತ್ತು.ಇದೀಗ ಟ್ರಂಪ್ ವಿರುದ್ಧ ಅಮೆರಿಕ ಸುಪ್ರೀಂಕೋರ್ಟ್ ಸರ್ವಾನುಮತದ ತೀರ್ಪು ನೀಡಿರೋದು ಮತ್ತೊಂದು ಇತಿಹಾಸ ನಿರ್ಮಿಸಿದೆ.

 ಅಮೆರಿಕನ್ ಕಾಂಗ್ರೆಸ್‌ಗೂ ಆಘಾತ..!

ಅಮೆರಿಕನ್ ಕಾಂಗ್ರೆಸ್‌ಗೂ ಆಘಾತ..!

ಟ್ರಂಪ್ ಆದಾಯ ದಾಖಲಾತಿಗಳ ಪರಿಶೀಲನೆಗೆ ಕೋರ್ಟ್ ಒಪ್ಪಿದ್ದರೂ, ಅಮೆರಿಕನ್ ಕಾಂಗ್ರೆಸ್ ಸಲ್ಲಿಸಿದ್ದ ಮನವಿಯನ್ನ ತಿರಸ್ಕರಿಸಿದೆ. ಸದ್ಯಕ್ಕೆ ಮ್ಯಾನ್‌ಹಟನ್‌ನ ಅಟಾರ್ನಿ ಜನರಲ್ ಮಾತ್ರ ಟ್ರಂಪ್‌ರ ಆರ್ಥಿಕ ದಾಖಲಾತಿಗಳನ್ನ ಪರಿಶೀಲನೆ ಮಾಡಬಹುದಾಗಿದೆ. ಆದರೆ ಅಮೆರಿಕನ್ ಕಾಂಗ್ರೆಸ್‌ನ ಸದ್ಯಸರಿಗೆ ಸದ್ಯಕ್ಕೆ ದಾಖಲಾತಿ ಪರಿಶೀಲನೆಗೆ ಅವಕಾಶ ನಿರಾಕರಿಸಲಾಗಿದೆ.

ಬೆನ್ ಬಿಡದ ಕೊರೊನಾ ಭೂತ-1: ಖಿನ್ನತೆಯಲ್ಲಿ ಮುಳುಗಿತಾ ಅಮೆರಿಕಾ?ಬೆನ್ ಬಿಡದ ಕೊರೊನಾ ಭೂತ-1: ಖಿನ್ನತೆಯಲ್ಲಿ ಮುಳುಗಿತಾ ಅಮೆರಿಕಾ?

 ಕ್ರಿಮಿನಲ್ ಕೇಸ್‌ಗೆ ಒತ್ತಾಯಿಸಲಾಗಿತ್ತು

ಕ್ರಿಮಿನಲ್ ಕೇಸ್‌ಗೆ ಒತ್ತಾಯಿಸಲಾಗಿತ್ತು

ಇನ್ನು ನ್ಯೂಯಾರ್ಕ್ ಮೂಲದ ಪ್ರಾಸಿಕ್ಯೂಟರ್ ಟ್ರಂಪ್ ವಿರುದ್ಧದ ಈ ಪ್ರಕರಣವನ್ನು ಕ್ರಿಮಿನಲ್ ಮೊಕದ್ದಮೆಯಾಗಿಸುವಂತೆ ಮನವಿ ಸಲ್ಲಿಸಿದ್ದರು. ಟ್ರಂಪ್ ಜೊತೆ ಸಂಬಂಧ ಹೊಂದಿದ್ದ ಮಹಿಳೆಗೆ ಹಣ ನೀಡಿರುವ ಆರೋಪದ ಹಿನ್ನೆಲೆ ಅರ್ಜಿಯಲ್ಲಿ ಈ ವಿಚಾರ ಉಲ್ಲೇಖಿಸಲಾಗಿತ್ತು. ಈ ಪ್ರಕರಣ ಅಮೆರಿಕದಲ್ಲಿ ಭಾರಿ ಸದ್ದು ಮಾಡಿತ್ತಲ್ಲದೆ, ಪದೇ ಪದೆ ವಿವಾದಕ್ಕೆ ಈಡಾಗುವ ಟ್ರಂಪ್‌ಗೆ ತೀವ್ರ ಮುಜುಗರ ಉಂಟು ಮಾಡಿತ್ತು.

 ಚುನಾವಣಾ ಪ್ರಕ್ರಿಯೆ ನಡುವೆ ಆಘಾತವೋ ಆಘಾತ

ಚುನಾವಣಾ ಪ್ರಕ್ರಿಯೆ ನಡುವೆ ಆಘಾತವೋ ಆಘಾತ

ಅಂದಹಾಗೆ ಅಮೆರಿಕದಲ್ಲಿ ಇನ್ನೇನು ಕೆಲವೇ ತಿಂಗಳಲ್ಲಿ ಅಧ್ಯಕ್ಷರ ಆಯ್ಕೆಗೆ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಲಿವೆ. ಆದರೆ 2ನೇ ಅವಧಿಗೆ ಅಧ್ಯಕ್ಷರಾಗುವ ಕನಸು ಕಂಡಿದ್ದ ಡೊನಾಲ್ಡ್ ಟ್ರಂಪ್‌ಗೆ ಹಿನ್ನಡೆಯಾಗುತ್ತಿದೆ. ಈಗಾಗಲೇ ಕೊರೊನಾ ಸಂಕಷ್ಟ, ಜಾರ್ಜ್ ಫ್ಲಾಯ್ಡ್ ಹತ್ಯೆ ಸೇರಿದಂತೆ ನಾನಾ ಕಾರಣಗಳಿಗೆ ಟ್ರಂಪ್ ಟಾರ್ಗೆಟ್ ಆಗುತ್ತಿದ್ದಾರೆ. ಈ ಹೊತ್ತಲ್ಲೇ ಟ್ರಂಪ್‌ಗೆ ಶಾಕ್ ಮೇಲೆ ಶಾಕ್ ಸಿಗ್ತಿರೋದು ಆಡಳಿತ ಪಕ್ಷದ ಸದಸ್ಯರನ್ನು ತಬ್ಬಿಬ್ಬುಗೊಳಿಸಿದೆ.

ಕೋರ್ಟ್ ಆದೇಶದ ಬಗ್ಗೆ ಟ್ರಂಪ್ ಟ್ವೀಟ್

ಟ್ರಂಪ್ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಗೆ ಕೋರ್ಟ್ ಅನುಮತಿ ನೀಡಿದೆ. ಈ ಮೂಲಕ ಮ್ಯಾನ್‌ಹಟನ್‌ನ ಅಟಾರ್ನಿ ಸೈರಸ್ ವ್ಯಾನ್ಸ್, ಟ್ರಂಪ್‌ಗೆ ಸಂಬಂಧಪಟ್ಟ ಆದಾಯ ದಾಖಲಾತಿಗಳನ್ನು ಪರಿಶೀಲನೆ ಮಾಡಬಹುದಾಗಿದೆ. ಇದೊಂದು ರಾಜಕೀಯ ಪ್ರೇರಿತ ತೀರ್ಪು ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.

English summary
The United States Supreme Court on Thursday ruled the Manhattan district attorney can obtain President Donald Trump's tax records and Congress may not have access to his financial records for now reports Aljazeera.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X