ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್‌ ಪಡೆಗೆ ದೊಡ್ಡ ಗೆಲುವು: ಜನಗಣತಿ ನಿಲ್ಲಿಸಲು ಸೂಚನೆ..!

|
Google Oneindia Kannada News

ಅವಧಿಗೂ ಮೊದಲೇ ಜನಗಣತಿ ನಿಲ್ಲಿಸಲು ಅಮೆರಿಕ ಸುಪ್ರೀಂಕೋರ್ಟ್ ಟ್ರಂಪ್ ಸರ್ಕಾರಕ್ಕೆ ಪರ್ಮಿಷನ್ ಕೊಟ್ಟಿದೆ. ಇದು ಟ್ರಂಪ್ ಬಣಕ್ಕೆ ದೊಡ್ಡ ಗೆಲುವು ತಂದುಕೊಟಿದ್ದು, ಬಹುದಿನಗಳ ತಿಕ್ಕಾಟ ಕೊನೆಗೊಂಡಿದೆ. ದೇಶಕ್ಕೆ ಎದುರಾಗುತ್ತಿದ್ದ ಸಂಕಷ್ಟಗಳನ್ನು ಹೊಂದಾಣಿಕೆ ಮೂಲಕವೇ ಬಗೆಹರಿಸಿಕೊಂಡು ಬರುತ್ತಿದ್ದ ದೊಡ್ಡಣ್ಣ ಅಮೆರಿಕದಲ್ಲೀಗ ಪ್ರತಿಯೊಂದಕ್ಕೂ ಹೋರಾಟ ಏರ್ಪಟ್ಟಿದೆ. ಒಂದ್ಕಡೆ ಅಂಚೆ ಮತದಾನದ ಬಡಿದಾಟವಾದ್ರೆ, ಮತ್ತೊಂದ್ಕಡೆ ಜನಗಣತಿ ವಿಚಾರವೂ ಸುಪ್ರೀಂಕೋರ್ಟ್ ಕದ ತಟ್ಟಿದೆ. ಭಾರತದಲ್ಲಿ ನಡೆದಂತೆ ಅಮೆರಿಕದಲ್ಲಿ ಕೂಡ 10 ವರ್ಷಗಳಿಗೆ ಒಮ್ಮೆ ಸೆನ್ಸಸ್ ಅಥವಾ ಜನಗಣತಿ ನಡೆಸಲಾಗುತ್ತದೆ.

ಇದರ ಆಧಾರದಲ್ಲೇ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನ ಕೈಗೊಳ್ಳುತ್ತದೆ. ಅಲ್ಲದೆ ಚುನಾವಣೆಯಲ್ಲಿ ರಾಜ್ಯವಾರು ಜನಪ್ರತಿನಿಧಿಗಳ ಹಂಚಿಕೆಗೆ ಇದೇ ಗಣತಿ ಸಹಕಾರಿ. ಆದರೆ ಈ ಬಾರಿ ಕೊರೊನಾ ಕಾರಣ ಕೊಟ್ಟು ಆದಷ್ಟು ಬೇಗ ಜನಗಣತಿ ಮುಗಿಸಲು ಟ್ರಂಪ್ ಪ್ರಯತ್ನಿಸಿದ್ದರು. ಜುಲೈನಲ್ಲೇ ಈ ರೀತಿಯ ಒಂದು ಪ್ರಯತ್ನ ನಡೆದರೂ ಟ್ರಂಪ್ ಯೋಜನೆ ಸಕ್ಸಸ್ ಆಗಿರಲಿಲ್ಲ. ಆದರೆ ಈಗ ಸುಪ್ರೀಂನಲ್ಲಿ ಟ್ರಂಪ್‌ಗೆ ದೊಡ್ಡ ಗೆಲುವು ಸಿಕ್ಕಿದ್ದು, ಜನಗಣತಿಯನ್ನು ಅವಧಿ ಪೂರ್ವ ಮುಗಿಸಲು ಅನುಮತಿ ಸಿಕ್ಕಿದೆ. ಇದು ಚುನಾವಣೆಗೂ ಮೊದಲೇ ಟ್ರಂಪ್‌ ಪಡೆಗೆ ಸಿಕ್ಕ ದೊಡ್ಡ ಗೆಲುವಾಗಿದೆ.

ಜನಗಣತಿ ಏಕೆ ಮುಖ್ಯ..?

ಜನಗಣತಿ ಏಕೆ ಮುಖ್ಯ..?

ಇಡೀ ಜಗತ್ತಿನ ಬಜೆಟ್ ಒಂದೆಡೆಯಾದರೆ, ಅಮೆರಿಕದ ಬಜೆಟ್ ಮತ್ತೊಂದೆಡೆ. ಏಕೆಂದರೆ ಇಡೀ ಜಗತ್ತಿನಲ್ಲಿ ಅಮೆರಿಕ ಮಂಡಿಸುವ ಬಜೆಟ್ ಅತ್ಯಂತ ದೊಡ್ಡ ಗಾತ್ರದ್ದು. ಅಮೆರಿಕ ಬಜೆಟ್ ಟ್ರಿಲಿಯನ್ ಡಾಲರ್ ಲೆಕ್ಕದಲ್ಲಿ ಇರುತ್ತದೆ. ಹೀಗೆ ದೊಡ್ಡ ಮೊತ್ತದ ಬಜೆಟ್ ಮಂಡಿಸುವಷ್ಟೇ ಮುಖ್ಯವಾಗಿ ರಾಜ್ಯವಾರು ಅದನ್ನು, ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲಾಗುತ್ತದೆ.

ಅಮೆರಿಕದ ಪೌರತ್ವ ನೀಡುವ ಆಶ್ವಾಸನೆ ನೀಡಿದ ಜೋಅಮೆರಿಕದ ಪೌರತ್ವ ನೀಡುವ ಆಶ್ವಾಸನೆ ನೀಡಿದ ಜೋ

ಅಮೆರಿಕದಲ್ಲಿ ರಾಜ್ಯಗಳಿಗೆ ಅನುದಾನ ಹಂಚುವಾಗ ಓಬಿರಾಯನ ಕಾಲದ ಗಣತಿ ಪರಿಗಣಿಸುವುದಿಲ್ಲ. ಇದೇ ಕಾರಣಕ್ಕೆ ಪ್ರತಿ 10 ವರ್ಷಗಳಿಗೆ ಒಮ್ಮೆ ಜನಗಣತಿ ನಡೆಸಿ, ಅದರ ಆಧಾರದಲ್ಲಿ ಅನುದಾನ ಹಂಚುತ್ತಾರೆ. ಅಲ್ಲದೆ ಚುನಾವಣೆಯಲ್ಲಿ ಯಾವ ರಾಜ್ಯಗಳಿಂದ ಎಷ್ಟೆಷ್ಟು ಪ್ರತಿನಿಧಿಗಳು ಆಯ್ಕೆ ಆಗಬೇಕು ಎಂಬುದನ್ನೂ ಇದೇ ಗಣತಿ ನಿರ್ಧರಿಸುತ್ತದೆ. ಅಮೆರಿಕ ಸಂವಿಧಾನ ಹೇಳುವಂತೆ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಸಲೇಬೇಕಿದೆ. ಪ್ರಜಾಪ್ರಭುತ್ವ ರಾಷ್ಟ್ರ ಅಮೆರಿಕದಲ್ಲಿ ಸಂವಿಧಾನವೇ ಸುಪ್ರೀಂ.

ಟ್ರಂಪ್‌ಗೆ ಏನು ಲಾಭ..?

ಟ್ರಂಪ್‌ಗೆ ಏನು ಲಾಭ..?

ಈಗಿನ ಜನಗಣತಿಯನ್ನೇ ಪರಿಗಣನೆಗೆ ತೆಗೆದುಕೊಂಡು ಚುನಾವಣೆಯಲ್ಲಿ ಜನಪ್ರತಿನಿಧಿಗಳನ್ನು ನಿರ್ಧರಿಸಲು ಸಾಧ್ಯವಾದರೆ, ರಿಪಬ್ಲಿಕನ್ಸ್ ಅಂದರೆ ಟ್ರಂಪ್ ಪಕ್ಷಕ್ಕೆ ಸಹಾಯಕವಾಗಲಿದೆ. ಭಾರತದಂತೆ ಅಮೆರಿಕದಲ್ಲೂ ಕೆಲವು ರಾಜ್ಯಗಳು ಸಾಂಪ್ರದಾಯಿಕ ವೋಟ್‌ಗಳಿಗೆ ಹೆಸರುವಾಸಿ. ಕೆಲವು ರಾಜ್ಯಗಳಲ್ಲಿ ಡೆಮಾಕ್ರಟಿಕ್ ಪಕ್ಷ ಹಿಡಿತ ಸಾಧಿಸಿದ್ದರೆ, ಕೆಲವು ರಾಜ್ಯಗಳಲ್ಲಿ ರಿಪಬ್ಲಿಕನ್ಸ್ ಹವಾ ಇದೆ.

ಕೊರೊನಾ ಭೀತಿ: ಅಂಚೆ ಮತದಾನಕ್ಕೆ ಮುಗಿಬಿದ್ದ ಅಮೆರಿಕನ್ನರುಕೊರೊನಾ ಭೀತಿ: ಅಂಚೆ ಮತದಾನಕ್ಕೆ ಮುಗಿಬಿದ್ದ ಅಮೆರಿಕನ್ನರು

ಹೀಗಿರುವಾಗ ಗಣತಿಯಲ್ಲಿ ಏನಾದರೂ ವ್ಯತ್ಯಾಸವಾದರೆ, ಸಾಂಪ್ರಾದಾಯಿಕ ಮತಗಳು ಬೇರೆ ಪಕ್ಷಗಳಿಗೆ ವರದಾನ. ಹೀಗೆ ಟ್ರಂಪ್ ತಮ್ಮ ಮುಂದಿನ ನಡೆಯಾಗಿ ರಿಪಬ್ಲಿಕನ್ಸ್ ಪಕ್ಷಕ್ಕೆ ಬಲ ಹೆಚ್ಚಿರುವ ರಾಜ್ಯಗಳಿಗೆ ಹೆಚ್ಚಿನ ಅಭ್ಯರ್ಥಿಗಳ ಬಲ ನೀಡಬಹುದು. ಆ ಮೂಲಕ ತಮ್ಮ ಗೆಲವಿಗೆ ಅಖಾಡ ಸಿದ್ಧಗೊಳಿಸಬಹುದು ಎಂಬ ಅನುಮಾನ ಡೆಮಾಕ್ರಟಿಕ್ ನಾಯಕರನ್ನು ಕಾಡುತ್ತಿದೆ. ಅದರಲ್ಲೂ ಸಮೀಕ್ಷೆಗಳ ಪ್ರಕಾರ ಗೆಲುವಿಗೆ ಸನಿಹದಲ್ಲಿರುವ ಜೋ ಬಿಡೆನ್‌ಗೂ ಸುಪ್ರೀಂ ಆದೇಶ ಶಾಕ್ ಕೊಟ್ಟಿದ್ದು, ಅಧ್ಯಕ್ಷೀಯ ಚುನಾವಣೆ ಏನಾಗುತ್ತೋ ಎಂಬ ಆತಂಕ ಬಿಡೆನ್‌ಗೆ ಕಾಡುವಂತಾಗಿದೆ.

ಅಂಚೆ ಮತದಾನಕ್ಕೂ ದೊಡ್ಡ ಹೋರಾಟ..!

ಅಂಚೆ ಮತದಾನಕ್ಕೂ ದೊಡ್ಡ ಹೋರಾಟ..!

ಈ ಬಾರಿ ಅಂಚೆ ಮತದಾನ ನಡೆಸುತ್ತಿರುವುದು ಟ್ರಂಪ್ ಕಣ್ಣು ಕೆಂಪಗಾಗಿಸಿದೆ. ಟ್ರಂಪ್‌ಗೆ ಅಂಚೆ ಮತದಾನದ ಬಗ್ಗೆ ನೂರಾರು ಅನುಮಾನಗಳಿವೆ. ಇದೇ ಕಾರಣಕ್ಕೆ ಕೆಲ ದಿನಗಳ ಹಿಂದೆ ಟ್ರಂಪ್ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ನವೆಂಬರ್ ಚುನಾವಣೆಯಲ್ಲಿ ಸೋತರೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವ ಗ್ಯಾರಂಟಿ ಕೊಡಲ್ಲ ಎಂದಿದ್ದ ಟ್ರಂಪ್ ವಿರುದ್ಧ ನಾಯಕರು ಪಕ್ಷಾತೀತವಾಗಿ ತಿರುಗಿಬಿದ್ದಿದ್ದರು. ನೇರವಾಗಿಯೇ ಅಂಚೆ ಮತದಾನವನ್ನು ಟಾರ್ಗೆಟ್ ಮಾಡಿದ್ದ ಟ್ರಂಪ್ ಹೀಗೆ ಹೇಳಿಕೆ ನೀಡಿದ್ದರು. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆಯಬಹುದು ಎಂದಿದ್ದ ಅವರು, ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ವಿದೇಶಿ ಹಸ್ತಕ್ಷೇಪಕ್ಕಿಂತಲೂ ಅಂಚೆ ಮತದಾನವೇ ಬಹುದೊಡ್ಡ ಬೆದರಿಕೆಯಾಗಿದೆ ಎಂದು ಊಹಿಸಿದ್ದರು.

ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?

 ‘ಯಾರದ್ದೋ ವೋಟ್ ಇನ್ಯಾರೋ ಹಾಕ್ತಾರೆ’

‘ಯಾರದ್ದೋ ವೋಟ್ ಇನ್ಯಾರೋ ಹಾಕ್ತಾರೆ’

ಟ್ರಂಪ್ ಹೇಳುವ ಪ್ರಕಾರ ಅಂಚೆ ಮತದಾನದಿಂದ ನಕಲಿ ಮತದಾನಕ್ಕೆ ಅವಕಾಶ ನೀಡಿದಂತಾಗುತ್ತೆ. ಇಲ್ಲಿ ಯಾರದ್ದೋ ಮತವನ್ನು ಮತ್ತೊಬ್ಬರು ಚಲಾಯಿಸುತ್ತಾರೆ. ಸಾವಿರಾರು ಮತಪತ್ರಗಳು ನಾಪತ್ತೆಯಾಗಬಹುದು ಅನ್ನೋದು ಟ್ರಂಪ್‌ಗೆ ಕಾಡುತ್ತಿರುವ ಅನುಮಾನ. ಇಷ್ಟೆಲ್ಲದರ ನಡುವೆಯೂ ಡೆಮಾಕ್ರಟಿಕ್ ಲೀಡರ್ಸ್ ಅಂಚೆ ಮತದಾನದ ಪರವಾಗಿ ಗಟ್ಟಿ ನಿಲುವು ತಾಳಿದ್ದಾರೆ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ಮೊದಲಿನಿಂದ ಅಂಚೆ ಮತದಾನ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಕೊರೊನಾ ಭೀತಿಯಿರುವ ಸಂದರ್ಭ ಅಂಚೆ ಮತದಾನ ಪ್ರಕ್ರಿಯೆ ಆದ್ಯತೆಯಾಗಿದೆ ಎನ್ನುತ್ತಿದ್ದಾರೆ. ಆದರೆ ಟ್ರಂಪ್‌ಗೆ ಅಂಚೆ ಮತದಾನ ಇಷ್ಟವಿಲ್ಲ, ಹೀಗಾಗಿ ನಾನು ಸೋತರೆ ನೇರವಾಗಿ ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇನೆ ಎಂಬ ಸಂದೇಶವನ್ನು ಚುನಾವಣೆಗೂ ಮೊದಲೇ ರವಾನಿಸಿದ್ದರು. ಈ ಮಧ್ಯೆ ಜನಗಣತಿಯ ವಿಚಾರದಲ್ಲಿ ಟ್ರಂಪ್‌ಗೆ ಅಮೆರಿಕ ಸುಪ್ರೀಂಕೋರ್ಟ್‌ನಲ್ಲಿ ಗೆಲುವು ಸಿಕ್ಕಿರುವುದು ಕುತೂಹಲ ಕೆರಳಿಸಿದೆ.

English summary
US Supreme Court given the Trump government a permit to stop the census early. This is a victory for Trump administration and also ended the long-running quarrel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X