ಇಂದು ಮೋದಿ-ಪೊಂಪಿಯೋ ಭೇಟಿ: ಮಹತ್ವದ ಚರ್ಚೆ ನಿರೀಕ್ಷೆ
ನವದೆಹಲಿ, ಜೂನ್ 26: ಮೂರು ದಿನಗಳ ಭೇಟಿಗೆಂದು ಭಾರತಕ್ಕೆ ಆಗಮಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಇಂದು(ಬುಧವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.
ಮಂಗಳವಾರ ದೆಹಲಿಗೆ ಬಂದಿಳಿದ ಪೊಂಪಿಯೋ ಇಂದು ಪ್ರಧಾನಿ ಅವರನ್ನು ಭೇಟಿಮಾಡಿ ಉಭಯ ದೇಶಗಳ ನಡುವಿನ ವಾಣಿಜ್ಯ ವ್ಯವಹಾರ ಮತ್ತು ಭದ್ರತೆಯ ವಿಷಯದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಆದ್ಯತೆಯ ವಹಿವಾಟಿನ(Generalized System of Preferences) ಅಡಿಯಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ 5.6 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತೀಯ ವಸ್ತುಗಳ ಮೇಲಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ಅಮೆರಿಕ ವಾಪಸ್ ಪಡೆದ ನಂತರ ಮೊದಲ ಬಾರಿಗೆ ಪೊಂಪಿಯೋ ಭಾರತಕ್ಕೆ ಭೇಟಿ ನೀಡುತ್ತಿದ್ದು, ಈ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.












Click it and Unblock the Notifications