ತೆರಿಗೆ ವಿನಾಯಿತಿ ರದ್ದು: ಟ್ರಂಪ್ ಆದೇಶದಿಂದ ಭಾರತದ ವ್ಯಾಪಾರಕ್ಕೆ ಸಂಕಷ್ಟ

ವಾಷಿಂಗ್ಟನ್, ನವೆಂಬರ್ 2: ಸುಮಾರು 90 ಸರಕುಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಅಮೆರಿಕ ತೆಗೆದು ಹಾಕಿದ್ದು, ಇದರಲ್ಲಿ ಕನಿಷ್ಠ 50 ಭಾರತದಿಂದ ರಫ್ತಾಗುವ ಸರಕುಗಳೂ ಸೇರಿವೆ.

ಮುಖ್ಯವಾಗಿ ಭಾರತದ ಕೃಷಿ ವಲಯ ಮತ್ತು ಕೈಮಗ್ಗ ಉದ್ಯಮದ ವ್ಯಾಪಾರಕ್ಕೆ ಇದರಿಂದ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ.

ನವದೆಹಲಿಯ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ನಿಲುವುಗಳನ್ನು ಅನುಸರಿಸುತ್ತಿದ್ದಾರೆ ಎಂಬುದನ್ನು ಈ ನಡೆ ಸಾಬೀತುಪಡಿಸಿದೆ ಎಂದು ವಿಶ್ಲೇಷಿಸಲಾಗಿದೆ.

ಸಾಮಾನ್ಯ ಆದ್ಯತಾ ವ್ಯವಸ್ಥೆ (ಜಿಎಸ್‌ಪಿ) ಅಡಿಯಲ್ಲಿ ಸುಂಕ ರಹಿತ ಸೌಲಭ್ಯ ಪಡೆದುಕೊಂಡಿರುವ 90 ಉತ್ಪನ್ನಗಳ ಪಟ್ಟಿ ಮಾಡುವಂತೆ ಸಂಯುಕ್ತ ಒಕ್ಕೂಟದ ಆಡಳಿತ ಸೂಚನೆ ಹೊರಡಿಸಿದೆ.

US removes duty free privileges on import of 90 items india will hit worst

ನವೆಂಬರ್ 1 ರಿಂದಲೇ ಜಾರಿಗೆ ಬರುವಂತೆ ಈ ಉತ್ಪನ್ನಗಳಿಗೆ ನೀಡಿರುವ ತೆರಿಗೆ ವಿನಾಯಿತಿ ಸವಲತ್ತನ್ನು ರದ್ದುಗೊಳಿಸುವಂತೆ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.

ನವೆಂಬರ್ 1ರಿಂದ ಈ ಉತ್ಪನ್ನಗಳು ಜಿಎಸ್‌ಪಿ ಯೋಜನೆಯಡಿ ತೆರಿಗೆ ರಹಿತ ಆದ್ಯತೆಗಳಾಗಿ ಅರ್ಹತೆ ಪಡೆದುಕೊಳ್ಳಲಾರವು. ಆದರೆ, ಅಮೆರಿಕದ ಅತಿ ನೆಚ್ಚಿನ ದೇಶಗಳ ಸುಂಕ ದರದಲ್ಲಿ ಮಹತ್ವದ ಉತ್ಪನ್ನಗಳಾಗಿಯೇ ಮುಂದುವರಿಯಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧ್ಯಕ್ಷೀಯ ಆದೇಶವು ಉತ್ಪನ್ನಗಳ ಕುರಿತಾಗಿದ್ದಾಗಿದ್ದು, ನಿರ್ದಿಷ್ಟ ದೇಶಗಳನ್ನು ಉದ್ದೇಶಿಸಿಲ್ಲ. ಆದರೆ, ಜಿಎಸ್‌ಪಿಯ ಅತಿ ಹೆಚ್ಚು ಪ್ರಯೋಜನ ಪಡೆದ ದೇಶವಾಗಿರುವ ಭಾರತಕ್ಕೆ ಈ ನಿರ್ಧಾರ ಸಂಕಷ್ಟ ಉಂಟುಮಾಡಲಿದೆ.

ಟ್ರಂಪ್ ಆಡಳಿತ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಕನಿಷ್ಠ 50 ಉತ್ಪನ್ನಗಳು ಭಾರತದಿಂದ ರಫ್ತಾಗುತ್ತಿವೆ. 2017ರಲ್ಲಿ ಜಿಎಸ್‌ಪಿ ಅಡಿಯಲ್ಲಿ ಭಾರತವು ಸುಂಕ ರಹಿತವಾಗಿ 5.6 ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಸರಕುಗಳನ್ನು ರಫ್ತು ಮಾಡಿತ್ತು.

ಅಡಿಕೆ, ಮಾವಿನ ಹಣ್ಣು, ಹತ್ತಿಯ ಕೈಮಗ್ಗದ ಬಟ್ಟೆಗಳು, ವಿವಿಧ ಕೃಷಿ ಉತ್ಪನ್ನಗಳು ಇದರಲ್ಲಿ ಸೇರಿವೆ. ಅರ್ಜೆಂಟೀನಾ, ಪಾಕಿಸ್ತಾನ, ಬ್ರೆಜಿಲ್, ಥಾಯ್ಲೆಂಡ್, ಟರ್ಕಿ, ಇಂಡೋನೇಷ್ಯಾ, ಈಕ್ವೆಡಾರ್ ಮುಂತಾದ ದೇಶಗಳ ಪ್ರಮುಖ ಉತ್ಪನ್ನಗಳು ಸಹ ಇದರಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+