ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್‌ನಲ್ಲಿ ಸಮಾಧಾನ ತಂದ ಜೂನ್ 8ರ ಕೊವಿಡ್ ವರದಿ

|
Google Oneindia Kannada News

ವಾಷಿಂಗ್ಟನ್, ಜೂನ್ 9: ವಿಶ್ವದ ಕೊರೊನಾ ವೈರಸ್ ಹಾಟ್‌ಸ್ಪಾಟ್‌ ಅಮೆರಿಕದಲ್ಲಿ ಹೊಸ ಕೇಸ್‌ಗಳು ಹೆಚ್ಚುತ್ತಲೆ ಇದೆ. ಆದರೆ, ಸಾವಿನ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಯುಎಸ್ ಸಮಾಧಾನ ಪಡುವಂತಾಗಿದೆ.

ಕಳೆದ 24 ಗಂಟೆಯಲ್ಲಿ ಒಟ್ಟು 450 ಜನರು ಅಮೆರಿಕದಲ್ಲಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಇದು ಕಳೆದ ಎರಡು ತಿಂಗಳಲ್ಲಿ ವರದಿಯಾದ ಅತಿ ಕಡಿಮೆ ಸಾವು. ನಿನ್ನೆಯ ವರದಿ ನಿಜಕ್ಕೂ ಯುಎಸ್‌ಗೆ ಸ್ವಲ್ಪ ಮಟ್ಟಿಗೆ ಆತಂಕ ಕಮ್ಮಿ ಮಾಡಿದೆ.

10 ಸಾವಿರ ಸೈನಿಕರನ್ನು ವಾಷಿಂಗ್ಟನ್ ನಲ್ಲಿ ನಿಯೋಜಿಸಲು ಬಯಸಿದ್ದರಂತೆ ಟ್ರಂಪ್.!10 ಸಾವಿರ ಸೈನಿಕರನ್ನು ವಾಷಿಂಗ್ಟನ್ ನಲ್ಲಿ ನಿಯೋಜಿಸಲು ಬಯಸಿದ್ದರಂತೆ ಟ್ರಂಪ್.!

ಆದರೆ, ಹೊಸ ಕೇಸ್‌ಗಳ ವಿಚಾರದಲ್ಲಿ ಅಮೆರಿಕ ನಿಯಂತ್ರಣಕ್ಕೆ ಬಂದಿಲ್ಲ. ಜೂನ್ 8 ರಂದು ಅಮೆರಿಕದಲ್ಲಿ 19,044 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,026,493 ದಾಟಿದೆ.

US records 450 coronavirus deaths in past 24 hours

ಇದುವರೆಗೂ ಯುಎಸ್‌ನಲ್ಲಿ ಕೊರೊನಾದಿಂದ ಸಾವನ್ನಪ್ಪಿರುವವರ ಸಂಖ್ಯೆ 113,055. ಇನ್ನು 16,907 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಿನಕ್ಕೆ 2-3 ಸಾವಿವರೆಗೂ ಸಾವು ಕಾಣುತ್ತಿದ್ದ ಅಮೆರಿಕ ಈಗ 500ಕ್ಕೆ ಇಳಿದಿದೆ. ಕಳೆದ ನಾಲ್ಕು ದಿನಗಳಿಂದಲೂ ಸಾವಿನ ಸಂಖ್ಯೆ ಸಾವಿರಕ್ಕಿಂತ ಕಡಿಮೆ ಇದೆ. ಅಂದ್ರೆ, ಯುಎಸ್‌ನಲ್ಲಿ ಸಾವಿನ ಸಂಖ್ಯೆ ಕುಸಿಯುತ್ತಾ ಬಂದಿದೆ. ಆದರೆ, ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣದಿರುವುದು ನಿಜಕ್ಕೂ ಆತಂಕ ಹುಟ್ಟಿಸಿದೆ.

English summary
America record's 450 coronavirus deaths in past 24 hours. and its lowest death tally in two months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X