• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದಲ್ಲಿ ಕೊರೊನಾದಿಂದ ಒಂದೇ ದಿನ 2,448 ಮಂದಿ ಸಾವು

|

ವಾಷಿಂಗ್ಟನ್, ಮೇ 8: ಅಮೆರಿಕದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು ಒಂದೇ ದಿನ 2448 ಮಂದಿ ಮೃತಪಟ್ಟಿದ್ದಾರೆ. ಈ ನಡುವೆ ಅಮೆರಿಕಾದಲ್ಲಿ 1,254,750 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ವೈರಸ್ ಮಟ್ಟಹಾಕಲು ಅಲ್ಲಿನ ಅಧಿಕಾರಿಗಳು ಕಷ್ಟಪಡುತ್ತಿದ್ದಾರೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

1,254,750 ಮಂದಿ ಸೋಂಕಿತರ ಪೈಕಿ 217,250 ಮಂದಿ ವೈರಸ್ ನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆಂದು ವರದಿಗಳು ತಿಳಿಸಿವೆ. ಇದರೊಂದಿಗೆ ಸಾವಿನ ಸಂಖ್ಯೆ 75,543ಕ್ಕೆ ಏರಿಕೆಯಾಗಿದೆ.

ಅಮೇರಿಕಾದಲ್ಲಿ ಕೊರೊನಾ ರಣಕೇಕೆ: 76,000 ಕ್ಕೂ ಅಧಿಕ ಮಂದಿ ಸಾವು!

ಅಮೆರಿಕ ಮೇಲೆ ಕೋವಿಡ್-19 ದಾಳಿ 9/11 ಗಿಂತ ಭೀಕರವಾದದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ಅಮೆರಿಕಾದ ಮೇಲೆ ವಿಶ್ವಯುದ್ಧ-II, ಪರ್ಲ್ ಹಾರ್ಬರ್ ಮೇಲೆ ಜಪಾನ್ ಬಾಂಬ್ ದಾಳಿ, 2001 ರಲ್ಲಿ ನಡೆದ 9/11 ದಾಳಿಗಿಂತ ಕೊರೋನಾ ದಾಳಿ ಅತ್ಯಂತ ಭೀಕರವಾದದ್ದು ಎಂದು ಚೀನಾ ವಿರುದ್ಧ ಬೊಟ್ಟು ಮಾಡಿ ಟ್ರಂಪ್ ಆರ್ಫ್ಪ ಮಾಡಿದ್ದಾರೆ. ಅಮೆರಿಕಾದಲ್ಲಿ ಈ ವರೆಗೂ ಕೊರೋನಾಗೆ 1.2 ಮಿಲಿಯನ್ ಜನರು ಸೋಂಕಿತರಾಗಿದ್ದರೆ, 73,000 ಜನರು ಸಾವನ್ನಪ್ಪಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಅತ್ಯಂತ ಕೆಟ್ಟ ದಾಳಿಯನ್ನು ನಾವು ಎದುರಿಸುತ್ತಿದ್ದೇವೆ, ಇದು ಹಿಂದಿನ ಎಲ್ಲಾ ಕೆಟ್ಟ ದಾಳಿಗಳನ್ನೂ ಮೀರಿಸಿದ್ದು, ಈ ರೀತಿಯ ದಾಳಿ ಅಮೆರಿಕಾ ಮೇಲೆ ಈ ವರೆಗೂ ನಡೆದಿರಲಿಲ್ಲ ಎಂದು ಹೇಳಿದ್ದಾರೆ.

English summary
The United States recorded 2,448 Covid-19 coronavirus deaths in the past 24 hours, bringing the total to 75,543. This was reported by Johns Hopkins University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X