ಕೊರೊನಾವೈರಸ್ ಭೀತಿ ಹಿನ್ನೆಲೆ ಗಣರಾಜ್ಯ ರಾಷ್ಟ್ರೀಯ ಸಮಾವೇಶ ರದ್ದು
ವಾಶಿಂಗ್ಟನ್, ಜುಲೈ.24: ನೊವೆಲ್ ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಗಣರಾಜ್ಯ ರಾಷ್ಟ್ರೀಯ ಸಮಾವೇಶವನ್ನು ಪೂರ್ವ ನಿಗದಿಯಂತೆ ನಡೆಸಲಾಗುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
Recommended Video
ಆಗಸ್ಟ್.24ರಂದು ಫ್ಲೋರಿಡಾದ ಜಾಕ್ಸನ್ ವಿಲ್ಲೆಯಲ್ಲಿ ಗಣರಾಜ್ಯ ರಾಷ್ಟ್ರೀಯ ಸಮಾವೇಶವನ್ನು ನಡೆಸುವುದಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಕೊವಿಡ್-19 ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಈ ಸಮಾವೇಶವನ್ನು ರದ್ದುಗೊಳಿಸಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಫ್ಲೋರಿಡಾದಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸ ಮುಂದುವರಿದಿದೆ. ಇಂಥ ಸಂದರ್ಭದಲ್ಲಿ ಸಮಾವೇಶ ನಡೆಸುವುದು ಸೂಕ್ತವಲ್ಲದ ಕಾರಣ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಗಣರಾಜ್ಯ ರಾಷ್ಟ್ರೀಯ ಸಮಾವೇಶ ರದ್ದುಗೊಳಿಸುವ ಬಗ್ಗೆ ತಮ್ಮ ತಂಡಕ್ಕೂ ತಿಳಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ.

ಫ್ಲೋರಿಡಾ ಸರ್ಕಾರಕ್ಕೆ ಮಾಹಿತಿ ರವಾನೆ:
ಪೂರ್ವ ನಿಗದಿತ ಗಣರಾಜ್ಯ ರಾಷ್ಟ್ರೀಯ ಸಮಾವೇಶ ರದ್ದುಗೊಳಿಸುವ ತಮ್ಮ ನಿರ್ಧಾರದ ಬಗ್ಗೆ ಫ್ಲೋರಿಡಾದ ರಾಜ್ಯಪಾಲ ರೊನ್ ದೆಸ್ಯಾಂಟಿಸ್ ಅವರಿಗೆ ಹಾಗೂ ಸ್ಥಳೀಯ ಆಡಳಿತ ವರ್ಗದ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ.












Click it and Unblock the Notifications