• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಿಲಿಯನ್ ಡಾಲರ್ ಪ್ರಶ್ನೆ: ಒಸಾಮಾ ಬಿನ್ ಲಾಡೆನ್ ಮಗ ಈಗ ಎಲ್ಲಿದ್ದಾನೆ?

|
   ಮಿಲಿಯನ್ ಡಾಲರ್ ಪ್ರಶ್ನೆ: ಒಸಾಮಾ ಬಿನ್ ಲಾಡೆನ್ ಮಗ ಈಗ ಎಲ್ಲಿದ್ದಾನೆ? | Oneindia Kannada

   ವಾಷಿಂಗ್ಟನ್, ಮಾರ್ಚ್ 1: ಅಮೆರಿಕದಿಂದ ಹತನಾದ ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಇದೀಗ ಆತನ ಮಗನ ಮೂಲಕ ಮತ್ತೆ ನೆನಪಾಗಿದ್ದಾನೆ. ಒಸಾಮಾನ ಮಗ- ಭಯೋತ್ಪಾದಕ ಹಮ್ಜಾ ಲಾಡೆನ್ ನ ಬಗ್ಗೆ ಸುಳುಹು ನೀಡುವವರಿಗೆ ಅಮೆರಿಕವು ಗುರುವಾರ ಒಂದು ಮಿಲಿಯನ್ ಅಮೆರಿಕನ್ ಡಾಲರ್ ಘೋಷಣೆ ಮಾಡಿದೆ.

   "ಅಲ್ -ಖೈದಾ ನಾಯಕ ಹಮ್ಜಾ ಬಿನ್ ಲಾಡೆನ್ ನನ್ನು ಪತ್ತೆ ಹಚ್ಚುವಲ್ಲಿ ನೆರವಾಗುವ ಯಾವುದೇ ಗುರುತು ಅಥವಾ ಸ್ಥಳ ಮತ್ತು ಅದ್ಯಾವುದೇ ದೇಶವಾಗಿರಲಿ, ಆ ಬಗ್ಗೆ ಮಾಹಿತಿ ನೀಡುವವರಿಗೆ ಅಮೆರಿಕ ಸರಕಾರ ಒಂದು ಮಿಲಿಯನ್ ಅಮೆರಿಕನ್ ಡಾಲರ್ (ಭಾರತೀಯ ರುಪಾಯಿಗಳಲ್ಲಿ ಏಳು ಕೋಟಿ ರುಪಾಯಿ) ಬಹುಮಾನ ನೀಡುತ್ತದೆ" ಎಂದು ಘೋಷಿಸಲಾಗಿದೆ.

   ಅಮೆರಿಕಕ್ಕೆ ಬೆದರಿಕೆ ಸಂದೇಶ ಕಳಿಸಿದ ಜ್ಯೂನಿಯರ್ ಒಸಾಮಾ

   ಅಮೆರಿಕ ರಾಜತಾಂತ್ರಿಕ ಭದ್ರತೆಯ ಸಹಾಯಕ ಕಾರ್ಯದರ್ಶಿ ಮೈಖೆಲ್ ಟಿ. ಇವಾನಾಫ್ ಈ ಬಗ್ಗೆ ಖಾತ್ರಿ ಪಡಿಸಿದ್ದಾರೆ. ಕೊನೆಯದಾಗಿ ಹಮ್ಜಾ ಬಗ್ಗೆ ದೊರೆತಿರುವ ಮಾಹಿತಿ ಬಗ್ಗೆ ತಿಳಿಸಿರುವ ಅವರು, ಆತ ಅಫ್ಘಾನಿಸ್ತಾನ- ಪಾಕಿಸ್ತಾನದ ಗಡಿಯಲ್ಲಿರಬಹುದು. ಮತ್ತು ಇರಾನ್ ಗೆ ತೆರಳುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.

   ಅಮೆರಿಕ ಮತ್ತದರ ಮಿತ್ರ ದೇಶಗಳ ಮೇಲಿನ ದಾಳಿಗೆ ಕರೆ

   ಅಮೆರಿಕ ಮತ್ತದರ ಮಿತ್ರ ದೇಶಗಳ ಮೇಲಿನ ದಾಳಿಗೆ ಕರೆ

   ಈ ಹಿಂದೆ ಅಲ್ ಖೈದಾ ಉಗ್ರ ಸಂಘಟನೆ ನಾಯಕನಾಗಿದ್ದ ಒಸಾಮಾ ಬಿನ್ ಲಾಡೆನ್ ನ ಮಗನೇ ಈ ಹಮ್ಜಾ ಬಿನ್ ಲಾಡೆನ್. ಎಲ್ಲೆಲ್ಲಿ ಅಲಿ ಖೈದಾ ಸಂಘಟನೆ ಬಲವಾಗಿದೆಯೋ ಅಲ್ಲಿ ಹಮ್ಜಾನನ್ನು ನಾಯಕನೆಂದು ಬಿಂಬಿಸಲಾಗಿದೆ. ಅಮೆರಿಕ ಹಾಗೂ ಅದರ ಪಾಶ್ಚಾತ್ಯ ಮಿತ್ರ ದೇಶಗಳ ವಿರುದ್ಧ ದಾಳಿ ಸಂಘಟನೆ ಮಾಡುವಂತೆ ಮನವಿ ಮಾಡುವ ಸಂದೇಶದ ಆಡಿಯೋ ಹಾಗೂ ವಿಡಿಯೋವನ್ನು ಹಮ್ಜಾ ಇಂಟರ್ ನೆಟ್ ಮೂಲಕ ಹರಿಬಿಟ್ಟಿದ್ದಾನೆ. ಹಮ್ಜಾನನ್ನು ಜಾಗತಿಕ ಭಯೋತ್ಪಾದಕ ಎಂದು ಅಮೆರಿಕ ಘೋಷಿಸಿದೆ.

   ಎಲ್ಲ ಕ್ರಮಕ್ಕೂ ಅಮೆರಿಕ ಸಿದ್ಧ

   ಎಲ್ಲ ಕ್ರಮಕ್ಕೂ ಅಮೆರಿಕ ಸಿದ್ಧ

   ಭಯೋತ್ಪಾದನೆಯನ್ನು ಸಂಪೂರ್ಣ ಇಲ್ಲವಾಗಿಸಲು ಅಮೆರಿಕವು ಎಲ್ಲ ಸಾಧನಗಳನ್ನು ಬಳಸಲು ಸಿದ್ಧವಾಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಈ ಕ್ರಮಕ್ಕೆ ಮುಂದಾಗಲು ಅಲ್ ಖೈದಾ ಉಗ್ರ ಸಂಘಟನೆ ಮತ್ತು ಅದರ ನಾಯಕರು ಕಾರಣ ಎಂಬುದು ಇದರಿಂದಲೇ ಗೊತ್ತಾಗುತ್ತದೆ.

   ಜಾಗತಿಕ ಭಯೋತ್ಪಾದಕ ಎಂಬ ಘೋಷಣೆ

   ಜಾಗತಿಕ ಭಯೋತ್ಪಾದಕ ಎಂಬ ಘೋಷಣೆ

   ಎರಡು ವರ್ಷಗಳ ಹಿಂದೆ ಹಮ್ಜಾನನ್ನು ಜಾಗತಿಕ ಭಯೋತ್ಪಾದಕ ಎಂದು ಅಮೆರಿಕ ಘೋಷಿಸಿತ್ತು. ಆ ನಂತರ ಹಮ್ಜಾ ಲಾಡೆನ್ ಗೆ ಸೇರಿದ ಅಮೆರಿಕ ವ್ಯಾಪ್ತಿಯಲ್ಲಿನ ಆಸ್ತಿಗಳ ವ್ಯವಹಾರವನ್ನು ಸ್ಥಗಿತಗೊಳಿಸಿತ್ತು. ಅಮೆರಿಕದ ನಾಗರಿಕರು ಹಮ್ಜಾ ಜತೆಗೆ ಯಾವುದೇ ವ್ಯವಹಾರಗಳನ್ನು ಮಾಡಬಾರದು ಎಂದು ನಿಷೇಧ ಹೇರಿದೆ.

   ಸೇನಾ ಕಾರ್ಯಾಚರಣೆ ಮುಂದುವರಿಯಲಿದೆ

   ಸೇನಾ ಕಾರ್ಯಾಚರಣೆ ಮುಂದುವರಿಯಲಿದೆ

   ಅಲ್ ಖೈದಾ ಈ ಅವಧಿಯಲ್ಲಿ ಸಕ್ರಿಯವಾಗಿಲ್ಲ. ಆದರೆ ಇದು ವ್ಯೂಹಾತ್ಮಕವಾದ ಸಣ್ಣ ಬಿಡುವು ಹೊರತು ಶರಣಾಗತಿ ಅಲ್ಲ. ಅಲ್ ಖೈದಾ ಉಗ್ರ ಸಂಘಟನೆಯು ನಮ್ಮ ಮೇಲೆ ಮತ್ತೆ ದಾಳಿ ನಡೆಸುವ ಉದ್ದೇಶ ಹಾಗೂ ಸಾಮರ್ಥ್ಯ ಎರಡನ್ನೂ ಹೊಂದಿದೆ. ಸೋಮಾಲಿಯಾ, ಸಿರಿಯಾದಂಥ ಕಡೆ ಎಲ್ಲೆಲ್ಲಿ ಅಮೆರಿಕ ಹಾಗೂ ಅದರ ಮಿತ್ರ ದೇಶಗಳಿಗೆ ಅಪಾಯ ಇದೆಯೋ ಅಲ್ಲೆಲ್ಲ ಅಲ್ ಖೈದಾ ವಿರುದ್ಧ ಅಮೆರಿಕವು ತನ್ನ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸಲಿದೆ ಎಂದು ತಿಳಿಸಲಾಗಿದೆ.

   English summary
   United States offers $ 1 million reward to find Osama bin Laden's son Hamza bin Laden.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X