ಕೋವಿಡ್ 19: ಅಮೆರಿಕನ್ನರ ಜೀವಿತಾವಧಿ ದಾಖಲೆ ಪ್ರಮಾಣದಲ್ಲಿ ಇಳಿಕೆ
ವಾಷಿಂಗ್ಟನ್, ಜುಲೈ 21: ಕೊರೊನಾ ಸೋಂಕಿನಿಂದಾಗಿ ಅಮೆರಿಕನ್ನರ ಜೀವಿತಾವಧಿ ದಾಖಲೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಮೆರಿಕನ್ನರ ಜೀವಿತಾವಧಿ ಒಂದೂವರೆ ವರ್ಷ ಕಡಿಮೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷ 33 ಲಕ್ಷಕ್ಕೂ ಅಧಿಕ ಅಮೆರಿಕನ್ನರು ಮೃತಪಟ್ಟಿದ್ದರು.
ಇದರಲ್ಲಿ ಶೇ.11ರಷ್ಟು ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ, ಅಮೆರಿಕದ ಇತಿಹಾಸದಲ್ಲಿ ಯಾವ ವರ್ಷದಲ್ಲೂ ಇಷ್ಟು ಸಾವುಗಳು ಸಂಭವಿಸಿರಲಿಲ್ಲ ಎಂಬುದು ತಿಳಿದುಬಂದಿದೆ.
1930ರ ಬಳಿಕ ಬಹುದೊಡ್ಡ ಆರ್ಥಿಕ ಕುಸಿತಗಳು ಸಂಭವಿಸಿದ್ದರೂ, ಹೀಗೆ ಒಂದೇ ವರ್ಷದಲ್ಲಿ ಇಷ್ಟು ಜೀವಿತಾವಧಿ ಕಡಿಮೆಯಾದ ದಾಖಲೆ ಈ ಮೊದಲುಇರಲಿಲ್ಲ ಎನ್ನಲಾಗಿದೆ.

ಅಮೆರಿಕದಲ್ಲಿ ಅತಿ ಹೆಚ್ಚು ಮಂದಿ ಕೊರೊನಾ ಸೊಂಕಿಗೆ ತುತ್ತಾಗಿದ್ದರು, ಹಾಗೂ ಅತಿ ಹೆಚ್ಚು ಮಂದಿ ಮೃತಪಟ್ಟಿದ್ದರು. ಈ ಅವಧಿಯಲ್ಲಿ ಕಪ್ಪು ವರ್ಣೀಯ ಅಮೆರಿಕನ್ನರ ಜೀವಿತಾವಧಿಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಮಾಹಿತಿ ಪ್ರಕಾರ, ಒಂದು ವರ್ಷದವರೆಗಿನ ಜೀವಿತಾವಧಿ ಕಡಿಮೆಯಾಗುವುದಕ್ಕೆ ಮುಖ್ಯವಾಗಿ ಕೋವಿಡ್ ಸಾಂಕ್ರಾಮಿಕವೇ ಕಾರಣವಾಗಿದೆ. ಆರೋಗ್ಯ ಅಧಿಕಾರಿಗಳ ಪ್ರಕಾರ ಒಟ್ಟು ಜೀವಿತಾವಧಿಯ ಶೇ.74ರಷ್ಟು ಕಡಿಮೆಯಾಗಿದೆ.












Click it and Unblock the Notifications