• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಚ್-1ಬಿ ವೀಸಾ ನಿಷೇಧಕ್ಕೆ ತಾತ್ಕಾಲಿಕ ತಡೆ: ಐಟಿ ಷೇರುಗಳ ಏರಿಕೆ

|

ವಾಷಿಂಗ್ಟನ್, ಅಕ್ಟೋಬರ್ 05: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದ ಹೆಚ್-1ಬಿ ವೀಸಾ ಸೇರಿದಂತೆ ಅನೇಕ ವರ್ಕ್ ಪರ್ಮಿಟ್ ಗಳ ನಿರ್ಬಂಧಕ್ಕೆ ಅಮೆರಿಕ ಫೆಡರಲ್ ನ್ಯಾಯಾಧೀಶರು ತಡೆ ನೀಡಿದ್ದಾರೆ. ಈ ಬೆನ್ನಲ್ಲೇ ಐಟಿ ಷೇರುಗಳು ಗಗನಕ್ಕೇರಿವೆ.

2020ರ ಅಂತ್ಯದವರೆಗೆ ಎಚ್ -1 ಬಿ, ಹೆಚ್ -2 ಬಿ, ಎಲ್ ಮತ್ತು ಜೆ ವಿಭಾಗಗಳಲ್ಲಿ ಕೆಲಸದ ವೀಸಾಗಳನ್ನು ಅಮಾನತುಗೊಳಿಸುವುದಾಗಿ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಈ ಕುರಿತಂತೆ ಏಳು ಅಪ್ರಾಪ್ತ ವಯಸ್ಕರು ಸೇರಿದಂತೆ 174 ಭಾರತೀಯ ಪ್ರಜೆಗಳ ಗುಂಪು ಹೆಚ್ -1 ಬಿ ವೀಸಾ ನಿಷೇಧ ಕುರಿತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಮೊಕದ್ದಮೆ ಹೂಡಿದ್ದರು.

ಟಿಕ್ ಟಾಕ್ ನಿರ್ಬಂಧ: ಟ್ರಂಪ್‌ ಆದೇಶಕ್ಕೆ ಕೋರ್ಟಿಂದ ತಡೆ

ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಯುತ್ತಿದ್ದು, ಡೊನಾಲ್ಡ್‌ ಟ್ರಂಪ್ ತಮ್ಮ ಸಾಂವಿಧಾನಿಕ ಅಧಿಕಾರವನ್ನು ಮೀರಿದ್ದಾರೆ ಹಾಗೂ ಈ ರೀತಿಯ ಬದಲಾವಣೆಗಳು ಸಾರ್ವಜನಿಕ ಹಿತಾಸಕ್ತಿಯಲ್ಲಿರುವುದಿಲ್ಲ ಎಂದು ಕಳೆದ ವಾರ ಫೆಡರಲ್ ನ್ಯಾಯಾಧೀಶರು ಹೇಳಿದ್ದರು. ಪರಿಣಾಮ ಅ.05 ರಂದು ಭಾರತೀಯ ಷೇರು ವಿನಿಮಯದಲ್ಲಿ ಐಟಿ ಷೇರುಗಳು ಗಗನಕ್ಕೇರಿವೆ. ಎಸ್&ಪಿ, ಬಿಎಸ್ಇ ಐಟಿ ಇಂಡೆಕ್ಸ್ ಶೇ.3.30 ರಷ್ಟು ಏರಿಕೆಯಾಗಿತ್ತು.

ಸೋಮವಾರ ಮಾರುಕಟ್ಟೆ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 276 ಪಾಯಿಂಟ್ಸ್ ಏರಿಕೆಗೊಂಡು 38,973 ಸೂಚ್ಯಂಕ ತಲುಪಿದೆ. ನಿಫ್ಟಿ 86.4 ಪಾಯಿಂಟ್ಸ್ ಜಿಗಿದು 11,503 ಪಾಯಿಂಟ್ಸ್‌ ಏರಿಕೆಯಾಗಿದೆ.

English summary
It stocks rise up to 5 per cent in Monday's trade after a federal judge temporarily blocked US President Donald Trump's ban on issuing work visas
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X