• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾವು ಸಾಯಬಾರದು, ಕೋಲು ಮುರಿಯಬಾರದು..! ಇದು ಅಮೆರಿಕದ ಪರಿಸ್ಥಿತಿ..!

|
Google Oneindia Kannada News

ನೆಮ್ಮದಿಯಾಗಿದ್ದ ಅಫ್ಘಾನಿಸ್ತಾನ ಕೆಲ ದಿನಗಳಿಂದ ನಲುಗಿ ಹೋಗಿದೆ. ಅಮೆರಿಕ ಹಾಗೂ ತಾಲಿಬಾನ್ ಪಡೆಯ ಕಿತ್ತಾಟದಲ್ಲಿ ಸಾಮಾನ್ಯರ ಬದುಕು ಬೀದಿಗೆ ಬಿದ್ದಂತಾಗಿದೆ. ಆದರೂ ಅಮೆರಿಕ ಮಾತ್ರ ಆಗಸ್ಟ್ 31ರೊಳಗೆ ತನ್ನ ಸೇನೆಯನ್ನ ಸಂಪೂರ್ಣವಾಗಿ ವಾಪಸ್ ಕರೆಸಿಕೊಳ್ಳಲು ಗಟ್ಟಿ ನಿರ್ಧಾರ ಕೈಗೊಂಡಿದೆ. ಇಂತಹ ಸಂದರ್ಭದಲ್ಲೇ ಅಮೆರಿಕದ ಮೇಲೆ ಮಿತ್ರ ರಾಷ್ಟ್ರಗಳ ಒತ್ತಡ ಹೆಚ್ಚಾಗಿದ್ದು, ಸೇನಾ ಪಡೆಗಳನ್ನ ಹಿಂದಕ್ಕೆ ಕರೆಸಿಕೊಳ್ಳದಂತೆ ಭಾರಿ ಒತ್ತಡ ಹೇರುತ್ತಿವೆ. ಈಗಾಗ್ಲೇ ಈ ಕುರಿತು ಬ್ರಿಟನ್ ಪ್ರಧಾನಿ ಕೂಡ ಬಹಿರಂಗ ಹೇಳಿಕೆ ನೀಡಿದ್ದಾರೆ.

ಜರ್ಮನಿ ಕೂಡ ಇದೇ ರೀತಿ ಪರೋಕ್ಷವಾಗಿ ಅಮೆರಿಕದ ಮೇಲೆ ಒತ್ತಡ ಹೇರುತ್ತಿದೆ. 2021 ಆಗಸ್ಟ್ 31ರೊಳಗೆ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ಬದಲಾಗಿ ಇನ್ನಷ್ಟು ತಿಂಗಳು ಅಫ್ಘಾನಿಸ್ತಾನದಲ್ಲೇ ಅಮೆರಿಕ ಸೇನೆ ನಿಯೋಜಿಸುವಂತೆ ಒತ್ತಾಯಿಸುತ್ತಿವೆ. ತಾಲಿಬಾನ್ ಅಫ್ಘಾನ್‌ನ ವಶಕ್ಕೆ ಪಡೆದ ನಂತರ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದೆ. ಹೀಗಾಗಿ ನಿಮ್ಮ ನಿರ್ಧಾರ ಬದಲಿಸಿಕೊಳ್ಳಿ ಎಂದು ಮಿತ್ರ ರಾಷ್ಟ್ರಗಳು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು 'ವಿಶ್ವದ ದೊಡ್ಡಣ್ಣ'ನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

‘ತೊಲಗದಿದ್ರೆ ಸರಿ ಇರಲ್ಲ’

‘ತೊಲಗದಿದ್ರೆ ಸರಿ ಇರಲ್ಲ’

ಅಮೆರಿಕ ಈಗಾಗಲೇ ಗಟ್ಟಿ ನಿರ್ಧಾರ ಕೈಗೊಂಡಾಗಿದೆ. ತನ್ನ ಸೇನೆಯನ್ನು ಹಿಂದಕ್ಕೆ ಕರಸಿಕೊಳ್ಳಬೇಕೆಂದು ಸ್ವತಃ ಅಮೆರಿಕ ಅಧ್ಯಕ್ಷರು ಖಡಕ್ ಆದೇಶ ಹೊರಡಿಸಿದ್ದಾರೆ. ಆದರೆ ಇದೀಗ ಒತ್ತಡಗಳು ಕೇಳಿಬರುತ್ತಿರುವ ಬೆನ್ನಲ್ಲೇ ತಾಲಿಬಾನ್ ಉಗ್ರರು ಮತ್ತೊಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ನೀವು ಆಗಸ್ಟ್ 31ರೊಳಗಾಗಿ ಅಫ್ಘಾನ್ ಬಿಟ್ಟು ಹೋಗದಿದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ತಾಲಿಬಾನ್ ಮುಖಂಡರು ಎಚ್ಚರಿಸಿದ್ದಾರೆ. ಕೆಂಡವಾಗಿರುವ ಪರಿಸ್ಥಿತಿ ತಣ್ಣಗಾಗಿಸಲು ಅಮೆರಿಕ ಪರದಾಡುತ್ತಿದೆ. ತನ್ನವರನ್ನ ಸ್ಥಳಾಂತರ ಮಾಡಲು ಬೃಹತ್ ಕಾರ್ಯಾಚರಣೆ ಕೈಗೊಂಡಿದೆ. ಇದರ ನಡುವೆ ಅಫ್ಘಾನ್ ಬಿಟ್ಟು ಹೊರಹೋಗದಂತೆ ಒತ್ತಡಗಳು ಹೆಚ್ಚಾಗುತ್ತಿವೆ.

ತಾಲಿಬಾನ್ ಆಡಳಿತ ಕಿತ್ತೆಸೆದ ಅಮೆರಿಕ..! ಹೇಗಿತ್ತು 20 ವರ್ಷಗಳ ಭೀಕರ ಸಂಘರ್ಷ..?ತಾಲಿಬಾನ್ ಆಡಳಿತ ಕಿತ್ತೆಸೆದ ಅಮೆರಿಕ..! ಹೇಗಿತ್ತು 20 ವರ್ಷಗಳ ಭೀಕರ ಸಂಘರ್ಷ..?

 ‘ನನ್ನ ನಿರ್ಧಾರ ಸರಿಯಾಗಿದೆ’

‘ನನ್ನ ನಿರ್ಧಾರ ಸರಿಯಾಗಿದೆ’

ಮತ್ತೊಂದು ಕಡೆ ಅಫ್ಘಾನ್‌ನಿಂದ ಅಮೆರಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ತಮ್ಮ ನಿರ್ಧಾರವನ್ನು ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ. ಬೈಡನ್ ನಿರ್ಧಾರ ಸರಿಯಿಲ್ಲ, ಬೈಡನ್ ಮಾಡಿದ ಎಡವಟ್ಟಿನಿಂದ ಇಷ್ಟೆಲ್ಲಾ ಸಮಸ್ಯೆ ಎದುರಾಗಿದೆ ಎಂದು ಟ್ರಂಪ್ ಸೇರಿದಂತೆ ಹಲವರು ಆರೋಪಿಸುತ್ತಿದ್ದಾರೆ. ಆದ್ರೆ ಬೈಡನ್ ಮಾತ್ರ ಈ ನಿರ್ಧಾರ ಸರಿಯಾಗಿದೆ ಎಂದಿದ್ದಾರೆ. ಈಗಾಗ್ಲೇ ಇಡೀ ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದಿದೆ, ಆದರೂ ಕಾಬೂಲ್ ವಿಮಾನ ನಿಲ್ದಾಣವನ್ನ ಮಾತ್ರ ಅಮೆರಿಕ ಉಳಿಸಿಕೊಂಡಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಕಾಬೂಲ್ ಏರ್ಪೋರ್ಟ್ ಬಳಕೆಯಾಗುತ್ತಿದ್ದು, ಪರಿಸ್ಥಿತಿ ಕ್ಷಣಕ್ಷಣಕ್ಕೂ ಗಂಭೀರವಾಗುತ್ತಿದೆ.

ಯಾಕೆ ಬೇಕಿತ್ತು ಇದೆಲ್ಲಾ..?

ಯಾಕೆ ಬೇಕಿತ್ತು ಇದೆಲ್ಲಾ..?

ಅಮೆರಿಕ ಸೂಕ್ತ ವ್ಯವಸ್ಥೆ ಮಾಡಿಕೊಂಡು ಅಫ್ಘಾನಿಸ್ತಾನ ಬಿಟ್ಟು ಹೊರಟಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬುದು ತಜ್ಞರ ವಾದ. ಅಮೆರಿಕ ಕೈಗೊಂಡ ಆತುರದ ನಿರ್ಧಾರ ಈಗ ಅದೇ ದೇಶಕ್ಕೆ ಮುಳುವಾಗುತ್ತಿದೆ. ಗಂಟುಮೂಟೆ ಕಟ್ಟಿಕೊಂಡು ಓಡಿ ಹೋಗಿದ್ದ ‘ದೊಡ್ಡಣ್ಣ' ವಾಪಸ್ ಬರುವಂತಾಗಿದೆ. ಇಷ್ಟೆಲ್ಲಾ ಹೈಡ್ರಾಮಾಕ್ಕೆ ಮೊದಲು ಸೂಕ್ತವಾಗಿ ಅಫ್ಘಾನ್ ಪಡೆಗಳಿಗೆ ಸೇನಾ ಸ್ಥಳಗಳನ್ನ ಹಸ್ತಾಂತರ ಮಾಡಿದ್ದರೆ ಇಂತಹ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಆದರೆ ಸುಮ್ಮನೆ ಇರದೆ ಇರುವೆ ಬಿಟ್ಟುಕೊಂಡ ಅಮೆರಿಕ ಜಗತ್ತಿನ ಎದುರು ವಿಲನ್ ಆಗುತ್ತಿದೆ. ತನ್ನದೇ ತಪ್ಪಿಗೆ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾದ ಅನಿವಾರ್ಯತೆ ಕೂಡ ಸೃಷ್ಟಿಯಾಗಬಹುದು.

ಅಮೆರಿಕ ವಶದಲ್ಲಿ ಏರ್ಪೋರ್ಟ್

ಅಮೆರಿಕ ವಶದಲ್ಲಿ ಏರ್ಪೋರ್ಟ್

ಇಡೀ ಅಫ್ಘಾನಿಸ್ತಾನವನ್ನೇ ತಾಲಿಬಾನ್ ತನ್ನ ವಶಕ್ಕೆ ಪಡೆದಾಗಿದೆ. ಆದರೆ ಅಫ್ಘಾನ್‌ನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣ ಮಾತ್ರ ಈಗಲೂ ಅಮೆರಿಕದ ವಶದಲ್ಲಿದ್ದು, ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಜನರನ್ನ ಏರ್‌ಲಿಫ್ಟ್ ಮಾಡಲಾಗುತ್ತಿದೆ. ಈಗಾಗಲೇ ಏರ್ಪೋರ್ಟ್ ಸುತ್ತಮುತ್ತ ಗುಂಡಿನ ಮೊರೆತ ಕೇಳಿಬಂದಿದ್ದು ಅಲ್ಲಿ ಕ್ಷಣಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ ಆದಷ್ಟು ಬೇಗ ಜಾಗ ಖಾಲಿ ಮಾಡಲು ಅಮೆರಿಕ ಸೇನೆ ಪರದಾಡುತ್ತಿವೆ. ಯಾವ ಕ್ಷಣದಲ್ಲಿ ಬೇಕಾದರೂ ತಾಲಿಬಾನ್ ಕಾಬೂಲ್ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಎಲ್ಲವೂ ಅಮೆರಿಕದ ಎಡವಟ್ಟು..!

ಎಲ್ಲವೂ ಅಮೆರಿಕದ ಎಡವಟ್ಟು..!

ದಿಢೀರ್ ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡಿದ್ದ ಅಮೆರಿಕ ಪತರುಗುಟ್ಟಿದೆ. ಅಮೆರಿಕ ಕನಸಲ್ಲೂ ಅಂದುಕೊಳ್ಳದ ರೀತಿ ತಾಲಿಬಾನ್ ಕಮ್‌ಬ್ಯಾಕ್ ಮಾಡಿದೆ. ಸತತ 20 ವರ್ಷಗಳ ಕಾಲ ಅಫ್ಘಾನಿಸ್ತಾನ ಆಳಿದ್ದ ಅಮೆರಿಕ ದಿಢೀರ್ ಅಂತಾ ಹೊರ ಬಂದಿದ್ದೇ ತಡ, ತಾಲಿಬಾನ್ ಅಲರ್ಟ್ ಆಗಿ ಇಡೀ ಅಫ್ಘಾನಿಸ್ತಾನವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಯಾವ ಕ್ಷಣದಲ್ಲಿ ಬೇಕಾದ್ರೂ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ದಾಳಿ ನಡೆಸಿ ವಶಕ್ಕೆ ಪಡೆಯುವ ಸಾಧ್ಯತೆ ಇದ್ದು, ಅಕಸ್ಮಾತ್ ಈ ಜಾಗವೂ ಅಮೆರಿಕದ ತೆಕ್ಕೆಯಿಂದ ಬಿಟ್ಟು ಹೋದರೆ ಅಮೆರಿಕದ ಪಾಲಿಗೆ ಅಫ್ಘಾನಿಸ್ತಾನದ ಬಾಗಿಲು ಸಂಪೂರ್ಣ ಬಂದ್ ಆದಂತೆಯೇ.

English summary
US is in pressure to extend the deadline of withdrawing troops from Afghan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X