• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತೀಯರ ಅಮೆರಿಕ ಕನಸು ಮತ್ತಷ್ಟು ಸುಲಭ ಮಾಡಲಿರುವ ಬೈಡನ್..!

|

ಅಮೆರಿಕದ ಹಾಲಿ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಮಕಾಡೆ ಮಲಗಿದ್ದಾಗಿದೆ. ಬೈಡನ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ ಬೈಡನ್‌ ಆಡಳಿತ ನಡೆಸಲು ವಾತಾವರಣ ಸಹಕಾರಿಯಾಗಿಲ್ಲ. ಟ್ರಂಪ್ ಮಾಡಿಕೊಂಡ ಎಡವಟ್ಟುಗಳನ್ನ ಒಂದೊಂದಾಗಿ ಸರಿಪಡಿಸಬೇಕಿದೆ. ಅದರಲ್ಲೂ ಪ್ರಮುಖವಾಗಿ ವಲಸೆ ನೀತಿಯಲ್ಲಿ ಬಹುದೊಡ್ಡ ಬದಲಾವಣೆಗಳನ್ನ ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳು ನಿರೀಕ್ಷಿಸುತ್ತಿವೆ.

ಏಕೆಂದರೆ ಟ್ರಂಪ್ ಕೈಗೊಂಡ ನಿರ್ಧಾರದಿಂದ ಭಾರತ ಮೂಲದ ಅಮೆರಿಕನ್ನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅಮೆರಿಕಗೆ ವಲಸೆ ಹೋಗಲು ಸಾವಿರ ಕನಸು ಕಂಡ ಭಾರತೀಯರಿಗೆ ಸಾಕಷ್ಟು ಹಿನ್ನಡೆ ಉಂಟಾಗಿತ್ತು. ಟ್ರಂಪ್ ಕೈಗೊಂಡ ನಿರ್ಧಾರ ಜಗತ್ತಿನೆದುರು ಅಮೆರಿಕ ವಿಲನ್ ಆಗುವಂತೆ ಮಾಡಿತ್ತು. ಬೈಡನ್ ಚುನಾವಣೆ ಸ್ಪರ್ಧಿಸಿದ ದಿನದಿಂದಲೂ ಇದನ್ನ ಸಾರಿ ಹೇಳುತ್ತಿದ್ದಾರೆ.

ಕೊಟ್ಟ ಮಾತು ಉಳಿಸಿಕೊಂಡ ಬೈಡನ್, ಸಂಪುಟದಲ್ಲಿ ಭಾರತೀಯರೇ ಮಿಂಚಿಂಗ್ಕೊಟ್ಟ ಮಾತು ಉಳಿಸಿಕೊಂಡ ಬೈಡನ್, ಸಂಪುಟದಲ್ಲಿ ಭಾರತೀಯರೇ ಮಿಂಚಿಂಗ್

ಅಲ್ಲದೆ ಟ್ರಂಪ್ ಮಾಡಿದ ಎಡವಟ್ಟು ಸರಿಪಡಿಸುವ ಭರವಸೆಯನ್ನ ನೀಡಿದ್ದರು. ಈಗ ಬೈಡನ್ ಗೆದ್ದಾಗಿದೆ, 46ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಕೌಂಟ್‌ಡೌನ್ ಶುರುವಾಗಿದೆ. ಹಾಗಾದರೆ ಟ್ರಂಪ್ ಕೈಗೊಂಡ ಪ್ರಮುಖ 6 ವಲಸೆ ನೀತಿಗಳಲ್ಲಿ ಬೈಡನ್ ಏನೆಲ್ಲಾ ಬದಲಾವಣೆ ತರಲಿದ್ದಾರೆ ಎಂಬುದನ್ನ ನೋಡೋಣ ಬನ್ನಿ.

ಅಮೆರಿಕ ಕನಸು ಇದೀಗ ನನಸು..!

ಅಮೆರಿಕ ಕನಸು ಇದೀಗ ನನಸು..!

ಟ್ರಂಪ್ ಆಡಳಿತದಲ್ಲಿ ಕೋಟಿ ಕೋಟಿ ವಲಸಿಗರಿಗೆ ಅಮೆರಿಕ ಎಂಬ ದೈತ್ಯ ದೇಶ ಪ್ರವೇಶ ಕನಸು ಮರೀಚಿಕೆ ಆಗಿತ್ತು. ಆದರೆ ಈಗ ಅಂಧಕಾರ ತೊಲಗಲಿದ್ದು, ಅಮೆರಿಕ ಎಂಬ ಪವರ್‌ಫುಲ್ ದೇಶಕ್ಕೆ ವಲಸೆ ಹೋಗಲು ಇಚ್ಛಿಸಿರುವ ಟ್ಯಾಲೆಂಟ್‌ಗಳಿಗೆ ಅವಕಾಶ ಕಲ್ಪಿಸಲಿದ್ದಾರೆ. ಇನ್ನೆರಡು ತಿಂಗಳಲ್ಲಿ ಅಂದರೆ 2021ರ ಜನವರಿಯಲ್ಲಿ ಬೈಡನ್ ಅಧಿಕೃತವಾಗಿ ಅಮೆರಿಕದ ಆಡಳಿತ ವಹಿಸಿಕೊಳ್ಳಲಿದ್ದು, ಅಧಿಕಾರಕ್ಕೆ ಬಂದ ಮೊದಲ ದಿನವೇ ವಲಸೆ ನೀತಿ ತಿದ್ದುಪಡಿಗೆ ಮುಂದಾಗಲಿದ್ದಾರೆ. ಇದರಲ್ಲಿ ದಾಖಲೆಗಳಿಲ್ಲದೆ ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತದ 5 ಲಕ್ಷ ಜನರೂ ಸೇರಿದಂತೆ 1.10 ಕೋಟಿ ಮಂದಿಗೆ ಪೌರತ್ವ ನೀಡುವ ಸಾಧ್ಯತೆ ದಟ್ಟವಾಗಿದ್ದು, ವಾರ್ಷಿಕ 95 ಸಾವಿರ ನಿರಾಶ್ರಿತರಿಗೆ ಅಮೆರಿಕ ಪ್ರವೇಶಿಸಲು ಅವಕಾಶ ನೀಡುತ್ತಾರೆ ಎನ್ನಲಾಗುತ್ತಿದೆ.

2ನೇ ಬಾರಿಗೆ ವಾಗ್ದಂಡನೆ, ಡೊನಾಲ್ಡ್ ಟ್ರಂಪ್ ಭವಿಷ್ಯವೇನು?2ನೇ ಬಾರಿಗೆ ವಾಗ್ದಂಡನೆ, ಡೊನಾಲ್ಡ್ ಟ್ರಂಪ್ ಭವಿಷ್ಯವೇನು?

13 ದೇಶಗಳ ಮೇಲಿನ ನಿಷೇಧ ಹಿಂದಕ್ಕೆ..?

13 ದೇಶಗಳ ಮೇಲಿನ ನಿಷೇಧ ಹಿಂದಕ್ಕೆ..?

13 ದೇಶಗಳಿಂದ ಅಮೆರಿಕ ಪ್ರವೇಶಕ್ಕೆ ಹೇರಿದ್ದ ನಿಷೇಧ, ಟ್ರಂಪ್ ಆಡಳಿತದಲ್ಲಿ ದೊಡ್ಡ ಪ್ರಹಸನ ಸೃಷ್ಟಿಸಿತ್ತು. ಟ್ರಂಪ್ ನಿಷೇಧ ಹೇರಿದ್ದ 13 ದೇಶಗಳ ಪೈಕಿ ಬಹುತೇಕ ದೇಶಗಳು ಆಫ್ರಿಕಾ ಮೂಲದವು ಹಾಗೂ ಮುಸ್ಲಿಂ ದೇಶಗಳು. ಆದರೆ ಬೈಡನ್ ಇಂತಹ ತಿಕ್ಕಾಟಕ್ಕೆ ತಿಲಾಂಜಲಿ ಇಡಲಿದ್ದು, ಟ್ರಂಪ್ ಟ್ರಾವೆಲ್ ಬ್ಯಾನ್‌ಗೆ ಕೊನೇ ಮೊಳೆ ಹೊಡೆಯಲಿದ್ದಾರೆ. ಈ ಮೂಲಕ 13 ದೇಶಗಳಿಂದ ಅಮೆರಿಕ ಪ್ರವೇಶ ಸುಲಭವಾಗಲಿದೆ. ಹಾಗೇ ಈ ನಿರ್ಧಾರದಿಂದ ಅಮೆರಿಕದ ಹೆಸರಿಗೆ ಉಂಟಾಗಿದ್ದ ಕಳಂಕವನ್ನು ಬೈಡನ್ ಕೊನೆಗಾಣಿಸಲಿದ್ದಾರೆ.

ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ಭಾರತ ಮೂಲದ ವೇದಾಂತ್ ಪಟೇಲ್ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ಭಾರತ ಮೂಲದ ವೇದಾಂತ್ ಪಟೇಲ್

‘ಕೊರೊನಾ’ ನಿಷೇಧಕ್ಕೂ ಎಂಡ್..?

‘ಕೊರೊನಾ’ ನಿಷೇಧಕ್ಕೂ ಎಂಡ್..?

ಡೊನಾಲ್ಡ್ ಟ್ರಂಪ್ ಆಡಳಿತ ಅಮೆರಿಕದಲ್ಲಿ ಕೊರೊನಾ ಕಂಟ್ರೋಲ್‌ಗೆ ತರಲು ಆಗದ ಸಿಟ್ಟನ್ನು ಬೇರೆ ಬೇರೆ ದೇಶಗಳ ಮೇಲೆ ಹಾಕಿದ್ದೇ ಹೆಚ್ಚು. ತನ್ನ ದೇಶದಲ್ಲೇ ನೂರಾರು ಸಮಸ್ಯೆಗಳನ್ನು ಇಟ್ಟುಕೊಂಡಿದ್ದ ಟ್ರಂಪ್, ಈ ತಪ್ಪನ್ನು ಮುಚ್ಚಿಹಾಕಲು ಪ್ರಪಂಚದ ಇತರ ದೇಶಗಳಿಂದ ಜನ ಅಮೆರಿಕಗೆ ವಲಸೆ ಬರುವಂತಿಲ್ಲ ಎಂದಿದ್ದರು. ಈ ರಾಷ್ಟ್ರಗಳಲ್ಲಿ ಭಾರತವೂ ಸೇರಿದಂತೆ ಬ್ರೆಜಿಲ್, ಯುರೋಪ್ ದೇಶಗಳು ಸೇರಿದ್ದವು. ಇದರ ಪರಿಣಾಮ ಕೋಟ್ಯಂತರ ಮಂದಿ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಇನ್ನೇನು ಆ ಸಂಕಷ್ಟದ ದಿನಗಳು ದೂರವಾಗಲಿದ್ದು, ಬೈಡನ್ ಆಡಳಿತ ಟ್ರಂಪ್ ಕೈಗೊಂಡಿದ್ದ ಟ್ರಾವೆಲ್ ಬ್ಯಾನ್‌ಗೆ ಅಂತ್ಯ ಹಾಡಲಿದೆ. ಜನವರಿ ವೇಳಗೆ ಕೊರೊನಾ ಅಬ್ಬರ ಕೂಡ ಕಡಿಮೆಯಾಗುವ ನಿರೀಕ್ಷೆ ಇದ್ದು, ಬೈಡನ್ ಈ ಟ್ರಾವೆಲ್ ಬ್ಯಾನ್‌ಗೆ ಮುಕ್ತಿ ಕೊಡಲಿದ್ದಾರೆ.

ಟ್ಯಾಲೆಂಟ್ಸ್ ಬಾಯಿಗೆ ಲಡ್ಡು..!

ಟ್ಯಾಲೆಂಟ್ಸ್ ಬಾಯಿಗೆ ಲಡ್ಡು..!

ಹೌದು ಹತ್ತಾರು ವರ್ಷಗಳಿಂದಲೂ ಅಮೆರಿಕ ಜಗತ್ತಿನ ಕೌಶಲ್ಯಯುಕ್ತ ಕೆಲಸಗಾರರಿಗೆ ಸ್ವರ್ಗವಿದ್ದಂತೆ. ಅಲ್ಲಿನ ಸಂಬಳ ಹಾಗೂ ಸವಲತ್ತು ಬಡ ರಾಷ್ಟ್ರಗಳ ಜನರಿಗೆ ಸಾಕಷ್ಟು ಅಗತ್ಯವಾಗಿತ್ತು. ಆದರೆ ಸ್ಥಳೀಯರಿಗೆ ಮಾತ್ರ ಉದ್ಯೋಗ ಎಂಬ ನಿಲುವಿನಿಂದ ಟ್ರಂಪ್ ಈ ರೀತಿಯ ಟ್ಯಾಲೆಂಟ್ಸ್‌ಗೂ ನಿಷೇಧ ಹೇರಿದ್ದರು. ಪರಿಣಾಮ ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡಿದ್ದರು. ಇನ್ನೂ ಹಲವರು ಅಮೆರಿಕದ ಆಸೆ ಬಿಟ್ಟುಬಿಟ್ಟರು. ಆದರೆ ಬೈಡನ್ ಈ ನೀತಿಯನ್ನು ಹಿಂಪಡೆದು, H1B ವೀಸಾ ವಿಚಾರದಲ್ಲಿ ಬಹುದೊಡ್ಡ ಬದಲಾವಣೆ ತರಲಿದ್ದಾರೆ. ಹಾಗೇ ನೂತನ ಪೌರತ್ವ ನೀತಿಯಲ್ಲಿ ಕುಟುಂಬ ಆಧಾರಿತ ವಲಸೆ ಮತ್ತು ಕೌಟುಂಬಿಕ ಒಗ್ಗಟ್ಟಿನ ಸಂರಕ್ಷಣೆಗೆ ಆದ್ಯತೆ ನೀಡಲಿದ್ದಾರೆ. ಟ್ರಂಪ್‌ ಆಡಳಿತದಲ್ಲಿ ‘ಗ್ರೀನ್‌ ಕಾರ್ಡ್‌' ಹೊಂದಿರುವ ಜನರಿಗೂ ಅಮೆರಿಕ ಪೌರತ್ವ ನೀಡುವ ಕಾರ್ಯ ನಿಂತುಹೋಗಿತ್ತು. ಆದರೆ ಬೈಡನ್ ಮತ್ತೆ ಆರಂಭಿಸುವರು. ಗ್ರೀನ್‌ ಕಾರ್ಡ್‌ ಇರುವವರಿಗೆ ಉದ್ಯೋಗ ಆಧಾರಿತ ವೀಸಾ ನೀಡಲಾಗುತ್ತಿದ್ದು, ಇವರು ಅಮೆರಿಕದ ಶಾಶ್ವತ ಪೌರತ್ವ ಪಡೆಯಬಹುದು.

95 ಸಾವಿರ ವಲಸಿಗರಿಗೆ ಅವಕಾಶ

95 ಸಾವಿರ ವಲಸಿಗರಿಗೆ ಅವಕಾಶ

ಇದೆಲ್ಲಕ್ಕಿಂತ ಮುಖ್ಯವಾಗಿ ಇನ್ನುಮುಂದೆ ವರ್ಷಕ್ಕೆ 95 ಸಾವಿರ ನಿರಾಶ್ರಿತರಿಗೆ ಅಮೆರಿಕ ಪ್ರವೇಶಕ್ಕೆ ಅನುಮತಿ ಸಿಗಲಿದೆ. ಒಬಾಮಾ ಕಾಲದಲ್ಲಿ ವರ್ಷಕ್ಕೆ 1.25 ಲಕ್ಷ ಮಂದಿಗೆ ಅವಕಾಶ ನೀಡಲಾಗಿತ್ತು. ಟ್ರಂಪ್ ಈ ನೀತಿಗೆ ಬ್ರೇಕ್ ಹಾಕಿದ್ದರು. ಅಮೆರಿಕ ಕೇವಲ ಅಮೆರಿಕನ್ನರಿಗೆ ಮಾತ್ರ ಎಂಬುದು ಟ್ರಂಪ್ ನಿಲುವಾಗಿತ್ತು. ಆದರೆ ಬೈಡನ್ ಈ ಎಲ್ಲಾ ಎಲ್ಲೆಗಳನ್ನು ಮೀರಿ ವಲಸಿಗರಿಗೂ ಅಮೆರಿಕದಲ್ಲಿ ಅವಕಾಶ ಕಲ್ಪಿಸಲು ಮುಂದಾಗಿದ್ದಾರೆ. ಬೈಡನ್ ಅಧಿಕಾರಕ್ಕೆ ವಹಿಸಿಕೊಳ್ಳುತ್ತಿದ್ದಂತೆ ಪ್ರತಿವರ್ಷ 95 ಸಾವಿರ ವಲಸಿಗರಿಗೆ ಅಮೆರಿಕ ಪ್ರವೇಶಕ್ಕೆ ಸೂಕ್ತ ರೀತಿಯಲ್ಲಿ ಸೌಲಭ್ಯ ಕಲ್ಪಿಸಲಾಗುತ್ತದೆ.

ಗೋಡೆ ಮುರಿಯಲಿರುವ ಬೈಡನ್..!

ಗೋಡೆ ಮುರಿಯಲಿರುವ ಬೈಡನ್..!

ಅಮೆರಿಕದ ನೆರೆ ರಾಷ್ಟ್ರ ಮೆಕ್ಸಿಕೋ ಗಡಿಯಲ್ಲಿ ಟ್ರಂಪ್ ವಿವಾದಾತ್ಮಕ ಯೋಜನೆಯೊಂದನ್ನ ಕೈಗೊಂಡಿದ್ದರು. ಅಕ್ರಮ ವಲಸಿಗರನ್ನು ತಡೆಯುವ ನೆಪದಲ್ಲಿ ಗಡಿಯಲ್ಲಿ ಗೋಡೆ ಕಟ್ಟಲು ಮುಂದಾಗಿದ್ದರು. ಗೋಡೆ ವಿಷಯ ಅದೆಷ್ಟು ನಗೆಪಾಟಲಿಗೆ ಈಡಾಗಿತ್ತು ಎಂದರೆ, ಇಷ್ಟು ಅಗಾಧ ಗಾತ್ರದ ಗೋಡೆಗಳನ್ನೂ ಅಕ್ರಮ ವಲಸಿಗರು ದಾಟಿ ಬಂದಿದ್ದರು. ಅಷ್ಟೇ ಅಲ್ಲದೆ ಕಾಮಗಾರಿ ಕೂಡ ಕಳಪೆಯಾಗಿದೆ ಎಂಬುದು ಹಲವು ಸಂದರ್ಭದಲ್ಲಿ ಪ್ರೂವ್ ಆಗಿತ್ತು. ಸಾವಿರಾರು ಕೋಟಿ ಡಾಲರ್ ಸುರಿದು ಈ ಯೋಜನೆ ಕೈಗೊಂಡಿದ್ದರೂ, ಅದು ಫ್ಲಾಪ್ ಆಗುವ ಜೊತೆ ಅಮೆರಿಕ ಮತ್ತು ಮೆಕ್ಸಿಕೋ ಸಂಬಂಧಕ್ಕೆ ಹುಳಿ ಹಿಂಡಿತ್ತು. ಇಂತಹ ವಿವಾದಾತ್ಮಕ ಯೋಜನೆ ಬಗ್ಗೆ ಬೈಡನ್ ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಈಗ ಅಧಿಕಾರಕ್ಕೆ ಬಂದ ತಕ್ಷಣ ಮೆಕ್ಸಿಕೋ ಗಡಿಯಲ್ಲಿ ಗೋಡೆ ಕಟ್ಟುವುದನ್ನು ಬೈಡನ್ ನಿಲ್ಲಿಸುವ ಸಾಧ್ಯತೆ ಇದೆ.

1.9 ಟ್ರಿಲಿಯನ್ ಡಾಲರ್ ಪರಿಹಾರ, ಅಮೆರಿಕನ್ನರಿಗೆ ಬೈಡನ್ ಅಭಯ1.9 ಟ್ರಿಲಿಯನ್ ಡಾಲರ್ ಪರಿಹಾರ, ಅಮೆರಿಕನ್ನರಿಗೆ ಬೈಡನ್ ಅಭಯ

English summary
Biden will likely to change trump immigration policy after he takes the oath as 46th president of America on 20th January.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X