ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಅಲ್‌ಖೈದಾ, ISIS ಉಗ್ರ ಸಂಘಟನೆಗಳ ಒಗ್ಗಟ್ಟು ಪ್ರದರ್ಶನ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 11: ಅಲ್‌ಖೈದಾ, ಐಎಸ್‌ಐಎಸ್‌ ಉಗ್ರ ಸಂಘಟನೆಗಳು ಅಫ್ಘಾನಿಸ್ತಾನದಲ್ಲಿ ಒಗ್ಗಟ್ಟಾಗುತ್ತಿರುವ ಬಗ್ಗೆ ಅಮೆರಿಕ ಎಚ್ಚರಿಕೆ ನೀಡಿದೆ.

ಅಮೆರಿಕದ ಸೇನಾದಂಡನಾಯಕ ಮೈಕೆಲ್ ಎರಿಕ್ ಈ ಬಗ್ಗೆ ಪ್ರಕಟಣೆ ನೀಡಿದ್ದು, ಜಗತ್ತಿನ ಎರಡು ಪ್ರಭಾವಿ ಉಗ್ರಸಂಘಟನೆಗಳು ಒಂದಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

11 ಮಂದಿ ಶಂಕಿತ ಐಎಸ್‌ಐಎಸ್ ಉಗ್ರರನ್ನು ಬಂಧಿಸಿದ ತಾಲಿಬಾನಿಗಳು11 ಮಂದಿ ಶಂಕಿತ ಐಎಸ್‌ಐಎಸ್ ಉಗ್ರರನ್ನು ಬಂಧಿಸಿದ ತಾಲಿಬಾನಿಗಳು

ತಾಲಿಬಾನ್ ಸರ್ಕಾರ ಇತ್ತೀಚಿಗಷ್ಟೆ ದೇಶದ ಜೈಲುಗಳಲ್ಲಿದ್ದ ಕೆಲ ಅಲ್ ಖೈದಾ ಮತ್ತು ಐಸಿಸ್ ಉಗ್ರರನ್ನು ಬಿಡುಗಡೆ ಮಾಡಿತ್ತು. ಈ ಬಗ್ಗೆ ಅಮೆರಿಕ ಆತಂಕಗೊಂಡಿದೆ.

US General Warns Of Al-Qaeda, ISIS Reconstituting In Afghanistan

ತಾಲಿಬಾನ್‌ ಆಡಳಿತದಲ್ಲಿ ಅಫ್ಗಾನ್‌ ಜೈಲಿನಿಂದ ಬಿಡುಗಡೆಗೊಂಡ ಕೈದಿಗಳು ಇಸ್ಲಾಮಿಕ್ ಸ್ಟೇಟ್(ಐಎಸ್‌, ಐಸಿಸ್‌) ಮತ್ತು ಅಲ್-ಖೈದಾ ಭಯೋತ್ಪಾದಕ ಗುಂಪುಗಳನ್ನು ಸೇರಿಕೊಂಡಿದ್ದಾರೆ ಎಂದು ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆಯ ಜಂಟಿ ಸಿಬ್ಬಂದಿ ಮುಖ್ಯಸ್ಥ ಅನಾಟೊಲಿ ಸಿಡೊರೊವ್ ಹೇಳಿದ್ದರು.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಅಫ್ಘಾನ್ ಕಾರಾಗೃಹಗಳಿಂದ ಬಿಡುಗಡೆಗೊಂಡವರು ಐಸಿಸ್ ಸೇರ್ಪಡೆಗೊಳ್ಳುತ್ತಿರುವುದರ ಜೊತೆಗೆ, ತಾಲಿಬಾನ್‌ ವಿರೋಧಿ ಉಗ್ರರನ್ನು ನೇಮಕ ಮಾಡಿಕೊಳ್ಳುತ್ತಿರುವುದರಿಂದ ಸಂಘಟನೆಗಳು ಬಲಗೊಳ್ಳುತ್ತಿವೆ ಎಂದಿದ್ದರು.

ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ 3 ದಶಲಕ್ಷಕ್ಕೂ ಹೆಚ್ಚು ಅಫ್ಘಾನ್ ಜನರು ತಮ್ಮ ದೇಶವನ್ನು ತೊರೆದಿದ್ದು, ಇರಾನ್‌ ಮತ್ತು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದಾರೆ ಎಂದು ಸಿಡೊರೊವ್ ಮಾಹಿತಿ ನೀಡಿದ್ದಾರೆ.

ತಾಲಿಬಾನಿಗಳು ಅಫ್ಘಾನ್ ಜೈಲಿನಲ್ಲಿದ್ದ ಸಾವಿರಾರು ಖೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ್ದರು. ಇದೀಗ ಅವರೆಲ್ಲಾ ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಮೇ 2020 ಮತ್ತು ಎಪ್ರಿಲ್ 2021ರ ಅಫ್ಘಾನಿಸ್ತಾನದ ಬೆಳವಣಿಗೆಗಳ ಹಿಂದೆ ಅಲ್ ಖೈದಾ ಕೈವಾಡ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ತಾಲಿಬಾನ್ ಮತ್ತು ಅಲ್ ಖೈದಾ ನಡುವೆ ಬೇರ್ಪಡಿಸಲಾಗದ ನಂಟು ಇರುವುದಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಸಲ್ಲಿಕೆಯಾಗಿರುವ ತಜ್ಞರ ವರದಿಯಲ್ಲಿ ಹೇಳಲಾಗಿದೆ.

ತಾಲಿಬಾನ್ ಮತ್ತು ಅಲ್ ಖೈದಾ ವಿಚಾರಧಾರೆಗಳಲ್ಲಿ ಸಾಮ್ಯತೆ ಇದ್ದು, ಅವೆರಡೂ ಸಂಘಟನೆಗಳು ಒಂದೇ ರೀತಿ ಹೋರಾಟ ನಡೆಸಿವೆ ಹಾಗೂ ಜಗತ್ತಿನ ವಿರೋಧ ಕಟ್ಟಿಕೊಂಡಿವೆ. ಎಲ್ಲಕ್ಕಿಂತ ಹೆಚ್ಚಾಗಿ ಅವೆರಡೂ ಸಂಘಟನೆಗಳ ನಡುವೆ ವಿವಾಹ ಸಂಬಂಧಗಳೂ ಏರ್ಪಟ್ಟಿವೆ. ಇವೆಲ್ಲದರಿಂದಾಗಿ ಅವರೆಡು ಸಂಘಟನೆಗಳ ನಡುವೆ ಬಿಡಿಸಲಾಗದ ನಂಟಿರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಲಿಬಾನ್ ಈ ಹಿಂದೆ ಅಮೆರಿಕ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಅಲ್ ಖೈದಾ ನಾಯಕರ ಸಲಹೆ ಪಡೆದುಕೊಂಡಿರುವ ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು ಇದು ಅಂತಾರಾಷ್ಟ್ರೀಯ ಸಮುದಾಯದ ನಾಯಕರ ನಿದ್ದೆಗೆಡಿಸಿದೆ. ಅಲ್ ಖೈದಾ ಸಲಹೆಯ ಮೇರೆಗೆ ತಾಲಿಬಾನ್ ಅಮೆರಿಕದ ಷರತ್ತುಗಳಿಗೆ ಒಪ್ಪಿಕೊಂಡಿತ್ತು. ಇದೀಗ ಈ ಷರತ್ತುಗಳಿಗೆ ತಾಲಿಬಾನ್ ಎಷ್ಟರಮಟ್ಟಿಗೆ ಬದ್ಧವಾಗಿರುವುದೆಂಬ ಕುತೂಹಲ ಮೊಳೆತಿದೆ.

English summary
Raising concern over the Taliban freeing Al-Qaeda and Islamic State (ISIS) prisoners, the nominee to head the US Central Command, Gen. Michael Erik Kurilla on Wednesday warned that the foreign terrorist groups are "reconstituting" in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X