ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬ್ಬರು ಅಧಿಕಾರಿಗಳ ಅಮಾನತು ಹಿನ್ನೆಲೆ: ಅಮೆರಿಕಾದ 57 ಪೊಲೀಸ್ ಅಧಿಕಾರಿಗಳು ರಾಜೀನಾಮೆ

|
Google Oneindia Kannada News

ವಾಷಿಂಗ್ಟನ್, ಜೂನ್ 6: ಜಾರ್ಜ್ ಫ್ಲಾಯ್ಡ್ ಪ್ರತಿಭಟನೆಯ ಸಂದರ್ಭದಲ್ಲಿ 75 ವರ್ಷದ ವ್ಯಕ್ತಿಯನ್ನು ನೆಲಕ್ಕೆ ತಳ್ಳಿದ್ದಕ್ಕಾಗಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ ನಂತರ ಬಫಲೋ ಪೊಲೀಸ್ ಇಲಾಖೆಯ ತುರ್ತು ಪ್ರತಿಕ್ರಿಯೆ ತಂಡದ 57 ಸದಸ್ಯರು ರಾಜೀನಾಮೆ ನೀಡಿದ್ದಾರೆ.

Recommended Video

ಬದಲಾಯಿಸಲು ಯಾರೆಲ್ಲಾ ಸ್ಟಾರ್ ಗಳು ಬಂದಿದ್ದಾರೆ ನೋಡಿ | Badalagu Neenu Badalayisu Neenu | Oneindia Kannada

ಗಲಭೆ ಮತ್ತು ಜನಸಂದಣಿಯ ನಿಯಂತ್ರಣಕ್ಕೆ ಸ್ಪಂದಿಸುವ ಯುದ್ಧತಂತ್ರದ ಘಟಕದ ಇಬ್ಬರು ಸದಸ್ಯರನ್ನು ಗುರುವಾರ ಸಂಬಳವಿಲ್ಲದೆ ಅಮಾನತುಗೊಳಿಸಲಾಗಿತ್ತು. ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಪೊಲೀಸರು 75 ವರ್ಷದ ವ್ಯಕ್ತಿಯನ್ನು ತಳ್ಳಿದ ಸಂದರ್ಭದಲ್ಲಿ ಆತ ನೆಲಕ್ಕೆ ಬಿದ್ದು ಗಾಯಗೊಂಡಿದ್ದ. ಈ ಕುರಿತಾದ ವೀಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಇಬ್ಬರು ಪೊಲೀಸರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

ಜಾರ್ಜ್ ಫ್ಲಾಯ್ಡ್ ಹತ್ಯೆ: ಟ್ರಂಪ್ ಬಾಯಿಂದ ಬಂದಿದ್ದು ಅದೆಂಥ ಮಾತು.?ಜಾರ್ಜ್ ಫ್ಲಾಯ್ಡ್ ಹತ್ಯೆ: ಟ್ರಂಪ್ ಬಾಯಿಂದ ಬಂದಿದ್ದು ಅದೆಂಥ ಮಾತು.?

''ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದರು, ಈ ವೇಳೆ ಸಂವಾದದ ಸಮಯದಲ್ಲಿ ವ್ಯಕ್ತಿ ಜಾರಿಬಿದ್ದರು'' ಎಂದು ಬಫಲೋ ಪೋಲಿಸ್ ಬೆನೆವೊಲೆಂಟ್ ಅಸೋಸಿಯೇಶನ್ ಅಧ್ಯಕ್ಷ ಜಾನ್ ಇವಾನ್ಸ್ ತಿಳಿಸಿದ್ದರು.

US Entire Police Unit Resigns After 2 Officers Were Suspended For Pushing Elderly Man To Ground

'ನಿಮ್ಮ ಬಾಯಿ ಮುಚ್ಚಿ': ಅಧ್ಯಕ್ಷ ಟ್ರಂಪ್ ವಿರುದ್ಧ ಹೂಸ್ಟನ್ ಪೊಲೀಸ್ ಕೆಂಡಾಮಂಡಲ.!'ನಿಮ್ಮ ಬಾಯಿ ಮುಚ್ಚಿ': ಅಧ್ಯಕ್ಷ ಟ್ರಂಪ್ ವಿರುದ್ಧ ಹೂಸ್ಟನ್ ಪೊಲೀಸ್ ಕೆಂಡಾಮಂಡಲ.!

ಆದರೆ ,ಘಟನೆ ಬಳಿಕ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿದ್ದರಿಂದ, ನಿರ್ವಾಹಕರ ನಿರ್ಧಾರದ ಮೇಲಿನ ಅಸಹ್ಯತೆಯಿಂದ ಆ ಘಟಕದ ಉಳಿದ 57 ಸದಸ್ಯರು ರಾಜೀನಾಮೆ ನೀಡಿದ್ದಾರೆ.

English summary
The entire 57-member emergency response team of the Buffalo Police Department has resigned after two members of the unit were suspended for pushing a 75-year-old to the ground
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X