• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ ಚುನಾವಣೆಯಲ್ಲಿ ಗೆದ್ದ ಕರ್ನಾಟಕ ಮೂಲದ ಲಕ್ಷಾಧೀಶ ಉದ್ಯಮಿ

|

ಹ್ಯೂಸ್ಟನ್, ನವೆಂಬರ್ 5: ಅಮೆರಿಕದ ಪ್ರತಿಷ್ಠಿತ ಚುನಾವಣೆಯಲ್ಲಿ ಈ ಬಾರಿ ಭಾರತೀಯರ ಪ್ರಾಬಲ್ಯ ಜೋರಾಗಿದೆ. ಭಾರತ ಮೂಲದ ಬೇರು ಹೊಂದಿರುವ ಐದಕ್ಕೂ ಹೆಚ್ಚು ಮಂದಿ ಜನಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಬಾರಿ ರಚನೆಯಾಗುವ ಹೊಸ ಸರ್ಕಾರದಲ್ಲಿ ಭಾರತ ಮೂಲದವರು ಪ್ರಮುಖ ಹುದ್ದೆಗಳನ್ನು ಪಡೆಯುವ ನಿರೀಕ್ಷೆಯಿದೆ. ಹೀಗೆ ಆಯ್ಕೆಯಾದ ಭಾರತೀಯರಲ್ಲಿ ಕರ್ನಾಟಕ ಮೂಲದ ಉದ್ಯಮಿಯೊಬ್ಬರೂ ಸೇರಿದ್ದಾರೆ.

ಉದ್ಯಮಿ, ಲಕ್ಷಾಧಿಪತಿಯಾಗಿರುವ ಶ್ರೀ ಥಾನೇದರ್ ಅವರು ಈ ಬಾರಿಯ ಚುನಾವಣೆಯಲ್ಲಿ ಜನಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದಾರೆ. ಶ್ರೀ ಥಾನೇದರ್ ಅವರ ಮೂಲ ಕರ್ನಾಟಕದ ಬೆಳಗಾವಿ. ಬೆಳಗಾವಿಯಲ್ಲಿ ಜನಿಸಿದ ಶ್ರೀ ಥಾನೇದರ್ ಅವರು ಬಾಂಬೆ ವಿಶ್ವವಿದ್ಯಾಲಯದಲ್ಲಿ 18ನೇ ವರ್ಷದಲ್ಲಿ ರಸಾಯನ ಶಾಸ್ತ್ರ ವಿಷಯದಲ್ಲಿ ಪದವಿ ಪಡೆದು ಬಳಿಕ ಅಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ಪೂರೈಸಿದ್ದರು.

ತಿಂಗಳ ಹಿಂದೆಯೇ ಕೋವಿಡ್‌ನಿಂದ ಸತ್ತಿದ್ದ ಅಭ್ಯರ್ಥಿಗೆ ಅಮೆರಿಕ ಚುನಾವಣೆಯಲ್ಲಿ ಜಯ!

ನಂತರ ಅವರು ಹೆಚ್ಷಿನ ಅಧ್ಯಯನಕ್ಕಾಗಿ ಅಮೆರಿಕಕ್ಕೆ ವಲಸೆ ಹೋಗಿದ್ದರು. 1979ರಲ್ಲಿ ಅಮೆರಿಕಕ್ಕೆ ತೆರಳಿದ್ದ ಅವರು ಆಕ್ರೋನ್ ವಿಶ್ವವಿದ್ಯಾಲಯ ಹಾಗೂ ಮಿಚಿಗನ್ ವಿಶ್ವವಿದ್ಯಾಲಯಗಳಿಂದ ಉನ್ನತ ಅಧ್ಯಯನ ಪಡೆದುಕೊಂಡಿದ್ದಾರೆ. ಮುಂದೆ ಓದಿ.

ಶೇ 93ರಷ್ಟು ಮತಗಳು

ಶೇ 93ರಷ್ಟು ಮತಗಳು

ಮಿಚಿಗನ್‌ನಲ್ಲಿ ಸ್ಪರ್ಧಿಸಿದ್ದ ಶ್ರೀ ಥಾನೇದರ್ ಅವರು ಜನಪ್ರತಿನಿಧಿ ಸಭೆಗೆ ಶೇ 93ರಷ್ಟು ಮತಗಳೊಂದಿಗೆ ಆಯ್ಕೆಯಾಗಿದ್ದಾರೆ. ಎರಡು ವರ್ಷಗಳ ಕಾಲ ಗವರ್ನರ್ ಆಗಿ ಕಾರ್ಯ ನಿರ್ವಹಿಸಿದ್ದ ಅವರು ಜೋ ಬೈಡೆನ್ ಅವರ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿದ್ದರು.

ತಮ್ಮದೇ ಸಂಪತ್ತನ್ನು ಬಳಸಿದ್ದರು

ತಮ್ಮದೇ ಸಂಪತ್ತನ್ನು ಬಳಸಿದ್ದರು

65 ವರ್ಷದ ಶ್ರೀ ಥಾನೇದರ್, ವಿಜ್ಞಾನಿ ಕೂಡ ಹೌದು. ಉದ್ಯಮಿಯಾಗಿ ಗುರುತಿಸಿಕೊಂಡಿರುವ ಅವರು ತಮ್ಮದೇ ಸ್ವಂತ ಸಂಪತ್ತಿನ ಮೂಲಕವೇ ದಾಖಲೆಯ 4,38,620 ಡಾಲರ್ ದೇಣಿಗೆ ಸಂಗ್ರಹಿಸಿದ್ದರು. ಅವರು ಡೆಮಾಕ್ರಟಿಕ್ ಪಕ್ಷದ ಇತರೆ ಆರು ಎದುರಾಳಿಗಳ ನಡುವೆ ಪ್ರಾಥಮಿಕ ಚುನಾವಣೆಯಲ್ಲಿ ಜಯಗಳಿಸಿದ್ದರು.

'ಅಮೆರಿಕ ಚುನಾವಣೆ ಫಲಿತಾಂಶದ ಬಳಿಕ ಭಾರತದ ಜತೆಗಿನ ಸಂಬಂಧ ಬದಲಾಗುವುದಿಲ್ಲ'

ಶ್ರೀ ಫಾರ್ ವಿ ಜಾಹೀರಾತು

ಶ್ರೀ ಫಾರ್ ವಿ ಜಾಹೀರಾತು

2018ರಲ್ಲಿ ಪ್ರಾಥಮಿಕ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಅವರು ಅನ್ ಅರ್ಬೊರ್‌ನಿಂದ ಡೆಟ್ರಾಯಿಟ್‌ಗೆ ಸ್ಥಳಾಂತರಗೊಂಡಿದ್ದರು. ಮಿಚಿಗನ್‌ನ 3ನೇ ಜಿಲ್ಲೆಯಿಂದ ಸ್ಪರ್ಧಿಸಿದ್ದ ಅವರು, ಶೇ 93ರಷ್ಟು ಭಾರಿ ಮತಗಳಿಂದ ಜಯಗಳಿಸಿದ್ದಾರೆ. ಎರಡು ವರ್ಷದಿಂದಲೇ ಅವರು ಇಲ್ಲಿ ಬಹು ಜನಪ್ರಿಯತೆ ಗಳಿಸಿದ್ದರು. 'ಶ್ರೀ ಫಾರ್ ವಿ' ಎಂಬ ಟಿವಿ ಜಾಹೀರಾತುಗಳಿಂದ ಅವರು ಚಿರಪರಿಚಿತರಾಗಿದ್ದರು.

ಮೂರನೇ ಸ್ಥಾನ ಪಡೆದಿದ್ದರು

ಮೂರನೇ ಸ್ಥಾನ ಪಡೆದಿದ್ದರು

2018ರ ಗವರ್ನರ್ ಪ್ರಾಥಮಿಕ ಚುನಾವಣೆಯಲ್ಲಿ ತಮ್ಮದೇ ಸಂಪಾದನೆಯ 10 ಮಿಲಿಯನ್ ಡಾಲರ್ ಹಣವನ್ನು ವೆಚ್ಚ ಮಾಡಿದ್ದ ಅವರು, ಗವರ್ನರ್ ಗ್ರೆಚನ್ ವೈಟ್ಮರ್ ಮತ್ತು ಅಬ್ದುಲ್ ಎಲ್ ಸಯದ್ ಎದುರು ಮೂರನೇ ಸ್ಥಾನ ಪಡೆದಿದ್ದರು. ಆದರೆ ಡೆಟ್ರಾಯಿಟ್‌ನಲ್ಲಿ ಅಧಿಕ ಮತಗಳನ್ನು ಪಡೆದಿದ್ದರು.

English summary
US Elections: Karnataka's Belagavi origin millionaire, businessman Shri Thanedar has been elected to Michigan state legislature from Democratic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X