ಅಮೆರಿಕ: 2016ರ ಚುನಾವಣಾ ಅವಧಿ ಪೂರ್ವ ಮತದಾನಕ್ಕಿಂತಲೂ ಹೆಚ್ಚಿನ ಮತ ಚಲಾವಣೆ
ವಾಷಿಂಗ್ಟನ್, ಅಕ್ಟೋಬರ್ 26: ಅಧ್ಯಕ್ಷೀಯ ಚುನಾವಣೆಗೆ ಸನ್ನಿಹಿತವಾಗಿರುವ ಅಮೆರಿಕದಲ್ಲಿ ಆರಂಭದ ಮತದಾನವು ನಾಲ್ಕು ವರ್ಷದ ಹಿಂದಿನ ಚುನಾವಣೆಗಿಂತಲೂ ಹೆಚ್ಚು ಚುನಾವಣಾ ಪೂರ್ವ ಮತದಾನದ ಪ್ರಮಾಣವನ್ನು ಈಗಾಗಲೇ ಮೀರಿದೆ ಎಂದು ಸ್ವತಂತ್ರ ಮತದಾನ ನಿಗಾ ಸಂಸ್ಥೆಯೊಂದು ತಿಳಿಸಿದೆ. ನವೆಂಬರ್ 3ರಂದು ನಡೆಯಲಿರುವ ಚುನಾವಣೆಗೆ ಇನ್ನೂ ಎಂಟು ದಿನ ಬಾಕಿ ಇದೆ.
ಕೊರೊನಾ ವೈರಸ್ ಸೋಂಕಿನ ಭೀತಿಯ ಕಾರಣದಿಂದ ಚುನಾವಣೆಯ ದಿನದಂದು ಜನದಟ್ಟಣೆಯಿಂದ ತುಂಬಿಕೊಳ್ಳುವ ಮತಗಟ್ಟೆಗಳ ಬಗ್ಗೆ ಲಕ್ಷಾಂತರ ಅಮೆರಿಕನ್ನರು ಕೊನೆಯ ದಿನದ ಮತದಾನದಲ್ಲಿ ಪಾಳ್ಗೊಳ್ಳಲು ಹಿಂಜರಿಯುತ್ತಿದ್ದಾರೆ. ಆದರೆ ಡೊನಾಲ್ಡ್ ಟ್ರಂಪ್ ಮತ್ತು ಜೋ ಬಿಡೆನ್ ಅವರಲ್ಲಿ ಸೂಕ್ತ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಉತ್ಸಾಹ ಕಡಿಮೆಯಾಗಿಲ್ಲ. ಹೀಗಾಗಿ ಮೇಲ್ ಅಥವಾ ಖುದ್ದಾಗಿ ಬ್ಯಾಲೆಟ್‌ಗಳನ್ನು ಸಲ್ಲಿಸುತ್ತಿದ್ದು, ದಾಖಲೆ ಪ್ರಮಾಣದಲ್ಲಿ ಮತದಾನ ನಡೆದಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಕ್ಕು ಚಲಾಯಿಸಿದ ಟ್ರಂಪ್
ಫ್ಲೋರಿಡಾ ವಿಶ್ವವಿದ್ಯಾಲಯದ ಸ್ವತಂತ್ರ ಅಮೆರಿಕ ಚುನಾವಣಾ ಪ್ರಾಜೆಕ್ಟ್ ನಡೆಸಿದ ಅಧ್ಯಯನದ ಪ್ರಕಾರ ಭಾನುವಾರದ ವೇಳೆಗೆ 59 ಮಿಲಿಯನ್‌ಗೂ ಅಧಿಕ ಮಂದಿ ಮತ ಚಲಾಯಿಸಿದ್ದಾರೆ. ಅಮೆರಿಕ ಚುನಾವಣಾ ಸಹಾಯಕ ಆಯೋಗದ ವೆಬ್‌ಸೈಟ್ ಮಾಹಿತಿ ಪ್ರಕಾರ 2016ರಲ್ಲಿ ಮೇಲ್ ಅಥವಾ ಖುದ್ದು ಮತಪತ್ರ ನೀಡುವ ಮೂಲಕ 57 ಮಿಲಿಯನ್ ಮಂದಿ ಮತ ಚಲಾಯಿಸಿದ್ದರು.
ಡೆಮಾಕ್ರಟಿಕ್ ಪಕ್ಷವು ಮುಂಚೂಣಿ ಮತದಾನಕ್ಕೆ ಹೆಚ್ಚು ಪ್ರೋತ್ಸಾಹ ನೀಡಿತ್ತು. ಇದುವರೆಗಿನ ಮತದಾನದಲ್ಲಿ ಡೆಮಾಕ್ರಟಿಕ್ ಪಕ್ಷವೇ ಮುನ್ನಡೆ ಸಾಧಿಸಿದೆ. ಆದರೆ ಇದು ಬಿಡೆನ್ ಅವರಿಗೆ ಸುಲಭ ಗೆಲುವು ತಂದುಕೊಡುತ್ತದೆಯೇ ಎಂದು ಹೇಳಲಾಗದು. ಮೇಲ್ ಮೂಲಕ ಮಾಡುವ ಮತದಾನವು ವಂಚನೆಗೆ ಕಾರಣವಾಗುತ್ತದೆ ಎಂದು ಟ್ರಂಪ್ ಆರೋಪಿಸಿದ್ದರು. ಹೆಚ್ಚಿನ ರಿಪಬ್ಲಿಕನ್ನರು ಚುನಾವಣೆ ದಿನವೇ ಮತ ಚಲಾಯಿಸುವ ಸಾಧ್ಯತೆ ಇದೆ.
ಟ್ರಂಪ್ಗೆ ಸಣ್ಣ ವಿಷಯವೂ ಅರ್ಥವಾಗಲ್ಲ, ಆದರೆ ಕೋಪ ಚೆನ್ನಾಗಿ ಬರುತ್ತೆ: ಒಬಾಮಾ
ಈ ಬಾರಿ ಒಟ್ಟು 150 ಮಿಲಿಯನ್ ಮತಗಳು ಚಲಾವಣೆಯಾಗಲಿದೆ ಎಂದು ಚುನಾವಣಾ ಪ್ರಾಜೆಕ್ಟ್ ಅಂದಾಜಿಸಿದೆ. 2016ರಲ್ಲಿ ಸುಮಾರು 137 ಮಿಲಿಯನ್ ಮರಗಳು ಚಲಾವಣೆಯಾಗಿದ್ದವು.