ಎಲೆಕ್ಟೊರಲ್ ವೋಟಿಂಗ್: ಜೋ ಬೈಡನ್‌ಗೆ ಆಘಾತ ನೀಡಿದ ಟ್ರಂಪ್
ವಾಷಿಂಗ್ಟನ್, ನವೆಂಬರ್ 4: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲೆಕ್ಟೊರಲ್ ಮತಗಳಲ್ಲಿ ನಿಚ್ಚಳ ಮುನ್ನಡೆ ಪಡೆದಿದ್ದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಅವರಿಗೆ ಡೊನಾಲ್ಡ್ ಟ್ರಂಪ್ ಆಘಾತ ನೀಡಿದ್ದಾರೆ.
ಫಾಕ್ಸ್ ನ್ಯೂಸ್ ವರದಿ ಪ್ರಕಾರ ಅಮೆರಿಕ ಅಧ್ಯಕ್ಷ ಸ್ಥಾನಕ್ಕೇರಲು ಬೇಕಿರುವ 270 ಎಲೆಕ್ಟೊರಲ್ ಮತಗಳಲ್ಲಿ ಜೋ ಬೈಡೆನ್ 223 ಮತಗಳೊಂದಿಗೆ ಭಾರಿ ಮುನ್ನಡೆ ಪಡೆದಿದ್ದರು. ಅವರ ಗೆಲುವಿಗೆ ಕೇವಲ 47 ಮತಗಳು ಬೇಕಿದ್ದವು. ಇನ್ನೊಂದಡೆ 148 ಎಲೆಕ್ಟೊರಲ್ ಮತಗಳೊಂದಿಗೆ ಡೊನಾಲ್ಡ್ ಟ್ರಂಪ್ ತೀವ್ರ ಹಿನ್ನಡೆ ಅನುಭವಿಸಿದ್ದರು. ಇದರಿಂದ ಬೈಡನ್ ಅಧ್ಯಕ್ಷಗಾದಿಗೆ ಏರುವುದು ಸುಲಭ ಎಂದೇ ಹೇಳಲಾಗಿತ್ತು.
ಆದರೆ ನಂತರದ ಮತಗಳಲ್ಲಿ ಜೋ ಬೈಡನ್ ಅವರಿಗೆ ಟ್ರಂಪ್ ಆಘಾತ ನೀಡಿದ್ದಾರೆ. ಬೈಡೆನ್ ಅವರ ಎಲೆಕ್ಟೊರಲ್ ಮತಗಳು 223ರಲ್ಲಿಯೇ ನಿಂತಿದ್ದರೆ, 148ರಲ್ಲಿದ್ದ ಡೊನಾಲ್ಡ್ ಟ್ರಂಪ್, ತಮ್ಮ ಎಲೆಕ್ಟೊರಲ್ ಮತಗಳನ್ನು 204ಕ್ಕೆ ಏರಿಸಿಕೊಂಡಿದ್ದಾರೆ.

ಭಾರತೀಯ ಸಮುದಾಯದವರೇ ಅಧಿಕ ಸಂಖ್ಯೆಯಲ್ಲಿರುವ ಕ್ಯಾಲಿಫೋರ್ನಿಯಾದಲ್ಲಿ ಬೈಡೆನ್ ಭಾರಿ ಗೆಲುವು ಕಂಡಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಪೈಕಿ ಅತ್ಯಧಿಕ, ಎಂದರೆ 55 ಎಲೆಕ್ಟೊರಲ್ ಮತಗಳನ್ನು ಹೊಂದಿರುವ ಕ್ಯಾಲಿಫೋರ್ನಿಯಾದಲ್ಲಿ ಜೋ ಬೈಡೆನ್ ಪರ ಶೇ 70 ಮತಗಳು ಚಲಾವಣೆಯಾಗಿದ್ದರೆ, ಕೇವಲ ಶೇ 28ರಷ್ಟು ಮತಗಳು ಟ್ರಂಪ್‌ಗೆ ಸಿಕ್ಕಿದೆ.












Click it and Unblock the Notifications