ಬೈಡನ್ ಬೆಂಬಲಿಗರ ನೃತ್ಯ, ಟ್ರಂಪ್ ಬೆಂಬಲಿಗರಿಂದ ಗನ್ ಹಿಡಿದು ಪ್ರತಿಭಟನೆ

ವಾಷಿಂಗ್ಟನ್, ನವೆಂಬರ್ 7: ಜೋ ಬೈಡೆನ್ ಬೆಂಬಲಿಗರು ಫಿಲಡೆಲ್ಫಿಯಾ ಬೀದಿಗಳಲ್ಲಿ ನರ್ತಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಗನ್‌ಗಳನ್ನು ಹಿಡಿದು ಫೀನಿಕ್ಸ್‌ನಲ್ಲಿ 'ಮತ ಎಣಿಕೆ ನಿಲ್ಲಿಸಿ' ಎಂದು ಕೂಗಿದರು.

ಡೆಟ್ರಾಯಿಟ್‌ನಲ್ಲಿ ರಿಪಬ್ಲಿಕನ್ ಪಕ್ಷದ ನೂರಾರು ಬೆಂಬಲಿಗರು ಬೀದಿಗಿಳಿದಿದ್ದರು. ಅವರಲ್ಲಿ ಅನೇಕರು ಗನ್‌ಗಳನ್ನು ಹಿಡಿದು ಬಂದಿದ್ದರು. ಮಿಚಿಗನ್‌ನ ದೊಡ್ಡ ನಗರ ಫೀನಿಕ್ಸ್‌ನಲ್ಲಿ ಮತ ಎಣಿಕೆ ಕೇಂದ್ರದ ಸುತ್ತಲೂ ನೆರೆದು 'ನಾವು ಗೆದ್ದಿದ್ದೇವೆ' ಎಂದು ಘೋಷಣೆ ಕೂಗಿದರು. ಶ್ವೇತಭವನಕ್ಕೆ ಪ್ರವೇಶಿಸಲಿರುವ ನಾಯಕನ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ. ಆದರೆ ಬೈಡೆನ್ ಈ ಚುನಾವಣೆಯನ್ನು ಬಹುತೇಕ ಜಯಿಸಿ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನು ಟ್ರಂಪ್ ಬೆಂಬಲಿಗರು ಒಪ್ಪಿಕೊಳ್ಳುತ್ತಿಲ್ಲ.

ಫಿಲಡೆಲ್ಫಿಯಾದಲ್ಲಿನ ಪರಿಸ್ಥಿತಿ ವಿಭಿನ್ನವಾಗಿದೆ. ಡೊನಾಲ್ಡ್ ಟ್ರಂಪ್ ಅವರು ಗೆಲ್ಲಲೇಬೇಕಾದ ರಾಜ್ಯವಾದ ಪೆನ್ಸಿಲ್ವೇನಿಯಾದಲ್ಲಿ ಜೋ ಬೈಡೆನ್ ಮುನ್ನಡೆ ಪಡೆಯುತ್ತಿರುವಂತೆಯೇ, ಬೈಡೆನ್ ಬೆಂಬಲಿಗರು ಬೀದಿಗಿಳಿದು ಸಂಭ್ರಮಿಸಿದರು. ಚುನಾವಣಾ ಥೀಮ್‌ನ ಉಡುಪುಗಳನ್ನು ಧರಿಸಿ, ವಯಲಿನ್ ಮತ್ತು ಟ್ರೊಂಬೋನ್‌ಗಳನ್ನು ಬಾರಿಸುತ್ತಾ ಹರ್ಷಿಸಿದರು.

US Elections: Biden Followers Dance On Streets, Trump Supporters Brought Guns

ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಟ್ರಂಪ್ ಆರೋಪವನ್ನು ಅವರ ಬೆಂಬಲಿಗರು ಅನುಮೋದಿಸಿದರು. 'ಅಮೆರಿಕವನ್ನು ಮತ್ತೆ ಮಹಾನ್ ದೇಶವನ್ನಾಗಿಸಿ' ಎಂಬ ಬರಹಗಳುಳ್ಳ ಬೇಸ್ ಬಾಲ್ ಕ್ಯಾಪ್‌ಗಳನ್ನು ಧರಿಸಿದ ಟ್ರಂಪ್ ಬೆಂಬಲಿಗರು, ಡೆಟ್ರಾಯಿಟ್ ಮತ್ತು ಫೀನಿಕ್ಸ್‌ಗಳಲ್ಲಿ ಪ್ರತಿಭಟನೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+