ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲಭೆಯ ಬಳಿಕ ಕೊನೆಗೂ ತಲೆಬಾಗಿದ ಟ್ರಂಪ್: ಸುಗಮ ಅಧಿಕಾರ ಹಸ್ತಾಂತರಕ್ಕೆ ಒಪ್ಪಿಗೆ

|
Google Oneindia Kannada News

ವಾಷಿಂಗ್ಟನ್, ಜನವರಿ 7: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧದ ಜೋ ಬೈಡನ್ ಅವರ ಎಲೆಕ್ಟೊರಲ್ ಕಾಲೇಜ್ ವಿಜಯವನ್ನು ಅಲ್ಲಿನ ಸಂಸತ್ತು ಘೋಷಿಸಿದೆ. ಈ ಮೂಲಕ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರ ಗೆಲುವನ್ನು ಸಂಪೂರ್ಣವಾಗಿ ಪ್ರಮಾಣೀಕರಿಸಿದಂತೆ ಆಗಿದೆ. ಚುನಾವಣೆ ನಡೆದ ಎರಡು ತಿಂಗಳಿನಿಂದಲೂ ತಮ್ಮ ಸೋಲು ಒಪ್ಪಿಕೊಳ್ಳದೆ, ಚುನಾವಣೆಯಲ್ಲಿ ಅಕ್ರಮ ಮತ್ತು ವಂಚನೆ ನಡೆದಿದೆ ಎಂದು ಆರೋಪಿಸುತ್ತಿದ್ದ ಡೊನಾಲ್ಡ್ ಟ್ರಂಪ್ ಅವರು ಕೊನೆಗೂ ಸುಗಮ ಅಧಿಕಾರ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಅಮೆರಿಕದಲ್ಲಿ ನಡೆದ ಹಿಂಸಾಚಾರ 'ಸುಂದರ ದೃಶ್ಯ' ಎಂದು ಚೀನಾ ಲೇವಡಿಅಮೆರಿಕದಲ್ಲಿ ನಡೆದ ಹಿಂಸಾಚಾರ 'ಸುಂದರ ದೃಶ್ಯ' ಎಂದು ಚೀನಾ ಲೇವಡಿ

ಟ್ರಂಪ್ ವಿರುದ್ಧದ ಫಲಿತಾಂಶವನ್ನು ರದ್ದಗೊಳಿಸಬೇಕು ಎಂದು ಅವರ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿದ ಕೆಲವೇ ಗಂಟೆಗಳಲ್ಲಿ ಅಲ್ಲಿನ ಸಂಸತ್ತು ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕಠಿಣ ಸಂದೇಶ ರವಾನಿಸಿದೆ.

ಹಿಂಸಾಚಾರ ನಡೆಸಿದವರನ್ನು 'ದೇಶಭಕ್ತರು' ಎಂದ ಟ್ರಂಪ್ ಪುತ್ರಿಹಿಂಸಾಚಾರ ನಡೆಸಿದವರನ್ನು 'ದೇಶಭಕ್ತರು' ಎಂದ ಟ್ರಂಪ್ ಪುತ್ರಿ

ಅಮೆರಿಕ ಚುನಾವಣೆಯಲ್ಲಿನ ರಾಜ್ಯಗಳ ಎಲೆಕ್ಟೊರಲ್ ಕಾಲೇಜು ಮತಗಳು 270ರ ಗಡಿಯನ್ನು ತಲುಪಿದ್ದು, ಬೈಡನ್ ಅವರ ಗೆಲುವನ್ನು ಸಂಸತ್ತು ಖಚಿತಪಡಿಸಿದೆ ಎಂದು ಉಪಾಧ್ಯಕ್ಷ ಮೈಕ್ ಪೆನ್ಸ್ ಪ್ರಕಟಿಸಿದ್ದಾರೆ. ಈ ಮೂಲಕ ಜನವರಿ 20ರಂದು ಬೈಡನ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ವಿಚಾರದ ಮುಂದೆ ಇದ್ದ ಎಲ್ಲ ಅಡೆತಡೆಗಳು ನಿವಾರಣೆಯಾದಂತಾಗಿದೆ. ಮುಂದೆ ಓದಿ.

ರಿಪಬ್ಲಿಕನ್ ದಾಂಧಲೆ

ರಿಪಬ್ಲಿಕನ್ ದಾಂಧಲೆ

ಜೋ ಬೈಡನ್ ಅವರ ಗೆಲುವನ್ನು ಪ್ರಮಾಣೀಕರಿಸುವ ಸಲುವಾಗಿ ಬುಧವಾರ ಅಮೆರಿಕ ಸಂಸತ್ತು ಸಭೆ ಸೇರಿತ್ತು. ಆಗ ರಿಪಬ್ಲಿನ್ ಬಾವುಟ ಹೊತ್ತ ಟ್ರಂಪ್ ಬೆಂಬಲಿತ ಸಾವಿರಾರು ಪ್ರತಿಭಟನಾಕಾರರು ಕಟ್ಟಡದ ಒಳಗೆ ನುಗ್ಗಿ ದಾಂಧಲೆ ನಡೆಸಿದ್ದರು. ಪೊಲೀಸರು ಮತ್ತು ಪ್ರತಿಭಟನಾಕಾರರೊಂದಿಗೆ ನಡೆದ ಸಂಘರ್ಷದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಸುಗಮ ಅಧಿಕಾರ ಹಸ್ತಾಂತರ

ಸುಗಮ ಅಧಿಕಾರ ಹಸ್ತಾಂತರ

ಸಂಸತ್ತಿನ ಘೋಷಣೆ ಬಳಿಕ ಹೇಳಿಕೆ ನೀಡಿರುವ ಡೊನಾಲ್ಡ್ ಟ್ರಂಪ್, 'ಈ ನಿರ್ಧಾರವು ಅಧ್ಯಕ್ಷೀಯ ಇತಿಹಾಸದ ಮಹಾನ್ ಮೊದಲ ಅವಧಿಯನ್ನು ಬಿಂಬಿಸುತ್ತದೆ' ಎಂದಿದ್ದಾರೆ. 'ಚುನಾವಣೆಯ ಫಲಿತಾಂಶವನ್ನು ನಾನು ಸಂಪೂರ್ಣ ಒಪ್ಪದೇ ಹೋದರೂ ಮತ್ತು ವಾಸ್ತವಗಳು ನನ್ನ ವಿರುದ್ಧವಾಗಿದ್ದರೂ ಜನವರಿ 20ರಂದು ಸುವ್ಯವಸ್ಥಿತ ಅಧಿಕಾರ ಹಸ್ತಾಂತರ ನಡೆಯಲಿದೆ' ಎಂದು ಅವರು ತಿಳಿಸಿದ್ದಾರೆ.

ಹಿಂಸಾಚಾರಕ್ಕೆ ಟ್ರಂಪ್ ಕಾರಣ: ಬರಾಕ್ ಒಬಾಮ ಆರೋಪಹಿಂಸಾಚಾರಕ್ಕೆ ಟ್ರಂಪ್ ಕಾರಣ: ಬರಾಕ್ ಒಬಾಮ ಆರೋಪ

ಇದು ಹೋರಾಟದ ಆರಂಭ

ಇದು ಹೋರಾಟದ ಆರಂಭ

'ಕಾನೂನುಬದ್ಧ ಮತಗಳನ್ನು ಮಾತ್ರ ಎಣಿಕೆ ಮಾಡಬೇಕು ಎಂಬುದನ್ನು ಖಾತರಿಪಡಿಸುವ ನನ್ನ ಹೋರಾಟವನ್ನು ಮುಂದುವರಿಸುವುದಾಗಿ ಸದಾ ಹೇಳುತ್ತಿದ್ದೆ. ಇದು ಅಧ್ಯಕ್ಷೀಯ ಇತಿಹಾಸದ ಮಹಾನ್ ಮೊದಲ ಅವಧಿ ಆಡಳಿತವನ್ನು ಪ್ರತಿನಿಧಿಸುತ್ತದೆ. ಇದು ಅಮೆರಿಕವನ್ನು ಮತ್ತೆ ಮಹಾನ್ ದೇಶವನ್ನಾಗಿಸುವ ನಮ್ಮ ಹೋರಾಟದ ಆರಂಭವಷ್ಟೇ' ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ರಿಪಬ್ಲಿಕನ್ನರ ಆಕ್ಷೇಪ ವಿಫಲ

ರಿಪಬ್ಲಿಕನ್ನರ ಆಕ್ಷೇಪ ವಿಫಲ

ಸಂಸತ್‌ನಲ್ಲಿ ಬುಧವಾರ ನಡೆದ ಚರ್ಚೆಯ ವೇಳೆ ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾಗಳಲ್ಲಿನ ಬೈಡನ್ ಗೆಲುವಿನ ವಿರುದ್ಧ ರಿಪಬ್ಲಿಕನ್ನರು ಆಕ್ಷೇಪ ವ್ಯಕ್ತಡಿಸಿದ್ದರು. ಅದನ್ನು ಸಂಸತ್ತು ತಿರಸ್ಕರಿಸಿತು. ಅರಿಝೋನಾ, ನೆವಾಡ ಮತ್ತು ಮಿಚಿಗನ್ ಎಲೆಕ್ಟೊರಲ್ ಮತಗಳ ವಿರುದ್ಧ ಕೂಡ ಆಕ್ಷೇಪ ತಿಳಿಸಿದರು. ಆದರೆ ಅವು ಚರ್ಚೆಗೆ ಬರುವ ಮೊದಲೇ ನಿರ್ಣಯಗಳು ವಿಫಲವಾದವು. ಪ್ರತಿಭಟನಾಕಾರರ ದಾಂಧಲೆಯಿಂದ ಸಂಸತ್ ಕಾರ್ಯಕಲಾಪ ಸ್ಥಗಿತಗೊಂಡಿತ್ತು. ಪೊಲೀಸರು ಪ್ರತಿಭಟನಾಕಾರರನ್ನು ಹೊರಹಾಕಿದ ಬಳಿಕ ಉಪಾಧ್ಯಕ್ಷ ಪೆನ್ಸ್ ಅವರು ಪುನಃ ಸದನ ನಡೆಸಿದರು.

English summary
US Congress confirmed Joe Biden win with 306 votes hours after Donald Trump supporters stormed the US Capitol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X