ಡೆಲ್ಟಾ ದಾಳಿ: 2.4 ಮಿಲಿಯನ್ ಜನರಿರುವ ಯುಎಸ್ ನಗರದಲ್ಲಿ ಕೇವಲ 6 ಐಸಿಯು ಬೆಡ್ ಬಾಕಿ!
ವಾಷಿಂಗ್ಟನ್, ಆ.09: ಕೊರೊನಾ ವೈರಸ್ ಸೋಂಕಿನ ರೂಪಾಂತರ ಡೆಲ್ಟಾ ದಾಳಿಯಿಂದಾಗಿ ಐಸಿಯು ಹಾಸಿಗೆಗಳ ಲಭ್ಯತೆಯು ಒಂದು ಅಂಕಿಗೆ ಇಳಿದಿರುವುದು ಯುಎಸ್‌ನ ನಗರ ಆಸ್ಟಿನ್‌ನಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕೊರೊನಾ ವೈರಸ್ ಸಾಂಕ್ರಾಮಿಕದ ಸ್ಥಳೀಯ ಸ್ಥಿತಿ "ಭೀಕರ" ಎಂದು ತಿಳಿಯುವ ತುರ್ತು ಎಚ್ಚರಿಕೆಯ ಗಂಟೆಯನ್ನು ಟೆಕ್ಸಾಸ್ ರಾಜಧಾನಿ ಆಸ್ಟಿನ್‌ನ ನಿವಾಸಿಗಳಿಗೆ ಈ ಬೆಡ್ ಕೊರತೆ ನೀಡಿದೆ.
ಆಸ್ಟಿನ್ ಪ್ರದೇಶ ಸುಮಾರು 2.4 ಮಿಲಿಯನ್ ಜನಸಂಖ್ಯೆ ಇರುವ ನಗರವಾಗಿದ್ದರೂ, ಆದರೆ ಪ್ರಸ್ತುತ ಕೇವಲ ಆರು ತೀವ್ರ ನಿಗಾ ಘಟಕ ಹಾಸಿಗೆಗಳನ್ನು ಹೊಂದಿದೆ ಎಂದು ರಾಜ್ಯ ಆರೋಗ್ಯ ದತ್ತಾಂಶ ತೋರಿಸುತ್ತದೆ. ಒಟ್ಟು 313 ವೆಂಟಿಲೇಟರ್‌ಗಳು ಲಭ್ಯವಿದೆ ಎಂದು ವರದಿ ಉಲ್ಲೇಖ ಮಾಡಿದೆ. "ಪರಿಸ್ಥಿತಿ ನಿರ್ಣಾಯಕವಾಗಿದೆ" ಎಂದು ಸಾರ್ವಜನಿಕ ಆರೋಗ್ಯ ವೈದ್ಯಕೀಯ ನಿರ್ದೇಶಕ ಡೆಸ್ಮಾರ್ ವಾಕ್ಸ್ ಶನಿವಾರ ಹೇಳಿಕೆಯಲ್ಲಿ ಹೇಳಿದರು.
"ದುರಂತ" ದ ಎಚ್ಚರಿಕೆಯನ್ನು ಸರ್ಕಾರವು ಮಧ್ಯಾಹ್ನ ನಿವಾಸಿಗಳಿಗೆ ಲಿಖಿತ ಸಂದೇಶಗಳು, ಇಮೇಲ್‌ಗಳು ಮತ್ತು ದೂರವಾಣಿ ಕರೆಗಳ ಮೂಲಕ ಕಳುಹಿಸಿದೆ. "ನಮ್ಮ ಆಸ್ಪತ್ರೆಗಳು ತೀವ್ರವಾಗಿ ಒತ್ತಡಕ್ಕೀಡಾಗಿವೆ ಮತ್ತು ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳೊಂದಿಗೆ ಈ ಪರಿಸ್ಥಿತಿಯ ಪರಿಣಾಮವನ್ನು ಕಡಿಮೆ ಮಾಡುವ ಮೂಲಕ ನಾವು ಹೊರೆಯನ್ನು ತಗ್ಗಿಸುವ ಪ್ರಯತ್ನ ಮಾಡಬಹುದು," ಎಂದು ತಿಳಿಸಿದೆ.

ಯುಎಸ್‌ನಲ್ಲಿ ಡೆಲ್ಟಾ ದಾಳಿ
ನಗರದ ಆರೋಗ್ಯ ಇಲಾಖೆಯು ತನ್ನ ಸಾಂಕ್ರಾಮಿಕ ಡೆಲ್ಟಾ ರೂಪಾಂತರದ ಕಾರಣದಿಂದಾಗಿ 5 ನೇ ಹಂತದಲ್ಲಿ ತನ್ನ ಅಪಾಯದ ಮಟ್ಟವನ್ನು ತನ್ನ ಗರಿಷ್ಠ ಮಟ್ಟಕ್ಕೆ ಏರಿಸಿದೆ. ಈ ಬೆಳವಣಿಗೆಯಾದ ಎರಡು ದಿನಗಳ ನಂತರ ಈ ಎಚ್ಚರಿಕೆ ನೀಡಲಾಗಿದೆ. ನಿವಾಸಿಗಳು ಕೋವಿಡ್ ಲಸಿಕೆ ಹಾಕಲು ಸರ್ಕಾರಗಳು ಈಗಾಗಲೇ ಮನವಿ ಮಾಡುತ್ತಲಿದೆ, ಮನೆಯಲ್ಲೇ ಉಳಿಯಲು ಕೂಡಾ ಸರ್ಕಾರ ಸೂಚಿದಿದೆ. ಹಾಗೆಯೇ ತಮ್ಮ ಸಂಪೂರ್ಣ ಲಸಿಕೆ ಹಾಕಿದ್ದರೂ ಕೂಡಾ ಮಾಸ್ಕ್ ಧರಿಸಲು ತಿಳಿಸಲಾಗಿದೆ.

ಐಸಿಯು ಬೆಡ್ ಸ್ಥಿತಿಗತಿ: ಜನರಲ್ಲಿ ಆತಂಕ
ಕಳೆದ ತಿಂಗಳಲ್ಲಿ ಹೊಸ ಆಸ್ಪತ್ರೆ ದಾಖಲಾತಿ ಪ್ರಮಾಣವು ಏಳು ದಿನಗಳಲ್ಲಿ ಸರಾಸರಿ ಶೇ. 600 ಕ್ಕಿಂತ ಹೆಚ್ಚಿದ ನಂತರ ಅಪಾಯದ ಮಟ್ಟವನ್ನು ಹೆಚ್ಚಾಗಿದೆ ಎಂದು ಸೂಚಿಸಲಾಗಿತ್ತು. ಆದರೆ ಈ ಸಂದರ್ಭದಲ್ಲೇ ತೀವ್ರ ನಿಗಾ ಘಟಕಗಳಲ್ಲಿ ರೋಗಿಗಳ ಸಂಖ್ಯೆಯು ಶೇ. 570 ರಷ್ಟು ಜಿಗಿದಿದೆ. ವೆಂಟಿಲೇಟರ್‌ಗಳಲ್ಲಿರುವ ಕೋವಿಡ್ ರೋಗಿಗಳು ಶನಿವಾರದ ವೇಳೆಗೆ 102 ಕ್ಕೆ ಏರಿದ್ದು ಜುಲೈ 4 ರಂದು ಕೇವಲ ಎಂಟರಷ್ಟು ಕೋವಿಡ್ ರೋಗಿಗಳು ವೆಂಟಿಲೇಟರ್‌ನಲ್ಲಿ ಇದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಆಸ್ಟಿನ್ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು 10 ಪಟ್ಟು ಹೆಚ್ಚಾದಂತೆ ಆಸ್ಪತ್ರೆಗೆ ದಾಖಲು ಪ್ರಮಾಣವು ಅಧಿಕವಾಗಿದೆ. "ಆಸ್ಪತ್ರೆಯ ಹಾಸಿಗೆ ಲಭ್ಯತೆ ಮತ್ತು ನಿರ್ಣಾಯಕ ಆರೈಕೆ ನಮ್ಮ ಆಸ್ಪತ್ರೆ ವ್ಯವಸ್ಥೆಗಳಲ್ಲಿ ಅತ್ಯಂತ ಸೀಮಿತವಾಗಿದೆ," ಎಂದು ವಾಕ್ಸ್ ಹೇಳಿದರು, "ದುರಂತವನ್ನು ತಡೆಯಲು" ಸಹಾಯ ಮಾಡಲು ನಿವಾಸಿಗಳನ್ನು ಒಟ್ಟುಗೂಡಿಸಲಾಗುತ್ತಿದೆ ಎಂದು ಕೂಡಾ ಹೇಳಿದರು.

ಕೊರೊನಾ ಲಸಿಕೆ ನೀಡಿಕೆ ಹೆಚ್ಚಾದಂತೆ ಕೋವಿಡ್ ಹೆಚ್ಚಳ
ಕೊರೊನಾ ವೈರಸ್ ಪ್ರಕರಣಗಳ ಏರಿಕೆಯು ರಾಷ್ಟ್ರವ್ಯಾಪಿ ಕೂಡ ಕಂಡುಬರುತ್ತದೆ. ಯುಎಸ್ನಲ್ಲಿ ಹೊಸ ಸೋಂಕುಗಳು ದಿನಕ್ಕೆ ಸರಾಸರಿ 100,000 ಕ್ಕಿಂತ ಹೆಚ್ಚಾಗಿದೆ, ಆರು ತಿಂಗಳ ಹಿಂದೆ ಚಳಿಗಾಲದ ಏರಿಕೆಯ ಮಟ್ಟಕ್ಕೆ ಮರಳಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮತ್ತು ಬ್ಲೂಮ್‌ಬರ್ಗ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಶುಕ್ರವಾರದ ಸಾಪ್ತಾಹಿಕ ಪ್ರಕರಣಗಳು 750,000 ದಾಟಿದವು, ಇದು ಫೆಬ್ರವರಿ ಆರಂಭದಿಂದಲೂ ಹೆಚ್ಚಾಗಿದೆ. ತಿಂಗಳುಗಳ ಕೋವಿಡ್ ಪ್ರಕರಣಗಳ ಕುಸಿತದ ನಂತರ ಯುಎಸ್ ಕೋವಿಡ್ ಲಸಿಕೆ ವೇಗವು ಹೆಚ್ಚಾಗುತ್ತಿದ್ದಂತೆ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ತಿಂಗಳಲ್ಲಿ ದೈನಂದಿನ ಸರಾಸರಿ ಸಾವುಗಳು ಎರಡು ಪಟ್ಟು ಹೆಚ್ಚಾಗಿದೆ. ಕಳೆದ ಚಳಿಗಾಲದ ಮಟ್ಟಕ್ಕಿಂತಲೂ ಕಡಿಮೆ ಇದ್ದರೂ, ಹೊಸ ಕೋವಿಡ್ ಸೋಂಕುಗಳ ವೇಗವು ಮಾರಕ ರೂಪಾಂತರಗಳನ್ನು ಪ್ರಚೋದಿಸಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
Recommended Video

ಹೂಸ್ಟನ್‌ನಲ್ಲಿ ಕೇವಲ 41 ಐಸಿಯು ಬೆಡ್ ಬಾಕಿ
"ಇದು ಅತ್ಯಂತ ಕೆಟ್ಟ ತಿರುವು ಪಡೆದುಕೊಂಡಿದೆ" ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಮುಖ್ಯ ವೈದ್ಯಕೀಯ ಸಲಹೆಗಾರ ಆಂಟನಿ ಫೌಸಿ ಬ್ಲೂಮ್‌ಬರ್ಗ್ ಕ್ವಿಕ್ಟೇಕ್ ಸಂದರ್ಶನದಲ್ಲಿ ಹೇಳಿದರು. ಫ್ಲೋರಿಡಾದೊಂದಿಗೆ ಟೆಕ್ಸಾಸ್ ಅನ್ನು ಪ್ರತ್ಯೇಕಿಸಿದರು. ಏಕೆಂದರೆ ಎರಡು ರಾಜ್ಯಗಳು "ಅತ್ಯಂತ ಅಸಮಾನವಾಗಿ ಹೆಚ್ಚಿನ ಪ್ರಮಾಣವನ್ನು ಹೊಂದಿವೆ. ಎರಡು ಪ್ರದೇಶದಲ್ಲಿ ಶೇ. 40 ಸೋಂಕು ಪ್ರಕರಣಗಳು ಇದೆ," ಎಂದು ಹೇಳಿದ್ದಾರೆ.
ಸುಮಾರು 29 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಟೆಕ್ಸಾಸ್ 439 ಐಸಿಯು ಹಾಸಿಗೆಗಳನ್ನು ಹೊಂದಿದೆ ಮತ್ತು 6,991 ವೆಂಟಿಲೇಟರ್‌ಗಳು ಇದೆ. 6.7 ಮಿಲಿಯನ್ ಜನಸಂಖ್ಯೆ ಹೊಂದಿರುವ ಹೂಸ್ಟನ್ ಪ್ರದೇಶದಲ್ಲಿ ಕೇವಲ 41 ಐಸಿಯು ಹಾಸಿಗೆಗಳು ಉಳಿದಿವೆ. 8 ದಶಲಕ್ಷಕ್ಕೂ ಹೆಚ್ಚು ಜನರಿರುವ ಗ್ರೇಟ್ ಡಲ್ಲಾಸ್ ಪ್ರದೇಶದಲ್ಲಿ 110 ಐಸಿಯು ಹಾಸಿಗೆಗಳು ಲಭ್ಯವಿದೆ. ಟೆಕ್ಸಾಸ್‌ನಲ್ಲಿ ಶುಕ್ರವಾರ 23,096 ರಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಫೆಬ್ರವರಿ ನಂತರ ಅತಿ ಹೆಚ್ಚು ಪ್ರಕರಣ ಇದಾಗಿದೆ ಮತ್ತು ಶನಿವಾರ 11,072 ಪ್ರಕರಣಗಳು ಈ ಪ್ರಕರಣಕ್ಕೆ ಸೇರ್ಪಡೆಯಾಗಿದೆ. ವಾರಾಂತ್ಯದಲ್ಲಿ ಕಡಿಮೆ ಪರೀಕ್ಷೆಗಳಿಂದಾಗಿ ಕಡಿಮೆ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗಿದೆ.
(ಒನ್‌ಇಂಡಿಯಾ ಸುದ್ದಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications