• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತಕ್ಕೆ 90 ಮಿಲಿಯನ್ ಮೌಲ್ಯದ ಸೇನಾ ಸಾಧನಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ

|

ವಾಷಿಂಗ್ಟನ್, ಡಿಸೆಂಬರ್ 4: ಭಾರತಕ್ಕೆ ತನ್ನ ಸಿ-130 ಸೂಪರ್ ಹರ್ಕ್ಯುಲಸ್ ಸೇನಾ ಸಾಗಣೆ ವಿಮಾನದ ನೆರವಿನ ಸೇವೆಯ ಜತೆಗೆ 90 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸೇನಾ ಉಪಕರಣಗಳನ್ನು ಮಾರಾಟ ಮಾಡಲು ಅಮೆರಿಕ ಒಪ್ಪಿಕೊಂಡಿದೆ.

ಈ ಪ್ರಸ್ತಾಪಿತ ಮಾರಾಟವು ಅಮೆರಿಕ-ಭಾರತ ರಕ್ಷಣಾ ಸಂಬಂಧವನ್ನು ಬಲಪಡಿಸುವ ಮತ್ತು ದೇಶದ ಪ್ರಮುಖ ರಕ್ಷಣಾ ಪಾಲುದಾರನ ಭದ್ರತೆಯನ್ನು ಹೆಚ್ಚಿಸುವುದರ ಮೂಲಕ ತನ್ನ ವಿದೇಶಾಂಗ ನೀತಿ ಹಾಗೂ ರಾಷ್ಟ್ರೀಯ ಭದ್ರತೆಗೆ ಬಲ ನೀಡಲಿದೆ ಎಂದು ಅಮೆರಿಕದ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ (ಡಿಎಸ್‌ಸಿಎ) ಹೇಳಿದೆ.

ಅಮೆರಿಕಕ್ಕೆ ಅತಿದೊಡ್ಡ ಬೆದರಿಕೆ ಚೀನಾ: ಗುಪ್ತಚರ ಇಲಾಖೆ

ಕಾಂಗ್ರೆಸ್‌ಗೆ ಪ್ರಮುಖ ಮಾರಾಟ ಅಧಿಸೂಚನೆಯನ್ನು ನೀಡಿರುವ ಡಿಎಸ್‌ಸಿಎ, ಇಂಡೋ ಪೆಸಿಫಿಕ್ ಮತ್ತು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಮತ್ತು ಆರ್ಥಿಕ ಪ್ರಗತಿಯಲ್ಲಿ ಭಾರತ ಪ್ರಮುಖ ಶಕ್ತಿಯಾಗಿ ಮುಂದುವರಿಯಲಿದೆ ಎಂದು ತಿಳಿಸಿದೆ.

ಶುಕ್ರವಾರ ಭಾರತದ ನೌಕಾದಿನದ ಅಂಗವಾಗಿ, ಅಮೆರಿಕದ ರಕ್ಷಣಾ ಸಂಸ್ಥೆ ಲಾಕ್‌ಹೀಡ್ ಮಾರ್ಟಿನ್ ಭಾರತಕ್ಕೆ ತಾನು ಮಾರಾಟ ಮಾಡಲಿರುವ ಬಹುಪಾತ್ರದ ಎಂಎಚ್-60 ರೋಮಿಯೋ ಹೆಲಿಕಾಪ್ಟರ್‌ನ ಮೊದಲ ಫೋಟೊವನ್ನು ಹಂಚಿಕೊಂಡಿದೆ.

ಎಂಎಚ್-60 ರೋಮಿಯೋ ಹೆಲಿಕಾಪ್ಟರ್ ಜಗತ್ತಿನ ಅತ್ಯಾಧುನಿಕ ಆಂಟಿ ಸಬ್‌ಮೆರಿನ್ ಹೆಲಿಕಾಪ್ಟರ್‌ಗಳಲ್ಲಿ ಒಂದು ಎನಿಸಿದ್ದು, ನೌಕಾಪಡೆಯ ಯುದ್ಧನೌಕೆಗಳಲ್ಲಿ ನಿಯೋಜನೆಗೊಳ್ಳಲಿದೆ. ಹಲವು ದಶಕಗಳಿಂದ ಇದ್ದ ಬ್ರಿಟಿಷ್ ನಿರ್ಮಿತ ಸೀ ಕಿಂಗ್ ಜಾಗವನ್ನು ಇದು ತುಂಬಲಿದೆ. ಭಾರತದ ನೌಕಾಪಡೆಯು ಒಟ್ಟು 24 ಹೆಲಿಕಾಪ್ಟರ್‌ಗಳನ್ನು ಖರೀದಿ ಮಾಡುತ್ತಿದೆ. ಈ ಸಂಬಂಧ ಸರ್ಕಾರ 905 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದೆ.

English summary
US has approved the sale of $90 million worth military equipments and services to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X