• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇರಾನ್‌ನಿಂದ ತೈಲ ಆಮದು: ಭಾರತಕ್ಕೆ ವಿನಾಯಿತಿ ನೀಡಿದ ಅಮೆರಿಕ

|

ವಾಷಿಂಗ್ಟನ್, ನವೆಂಬರ್ 2: ಇರಾನ್‌ ಮೇಲೆ ನಿರ್ಬಂಧ ಜಾರಿಯಾದ ಬಳಿಕವೂ ಅದರಿಂದ ತೈಲ ಖರೀದಿ ಮಾಡಲು ಭಾರತಕ್ಕೆ ಅವಕಾಶ ನೀಡಲು ಅಮೆರಿಕ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಇದರಿಂದ ಭಾರತವು ತೈಲ ಬಿಕ್ಕಟ್ಟು ಎದುರಿಸುವ ಕಳವಳ ಸದ್ಯಕ್ಕೆ ದೂರವಾಗಿದೆ.

ಭಾರತ ಮಾತ್ರವಲ್ಲದೆ ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಎಂಟು ದೇಶಗಳಿಗೆ ಅಮೆರಿಕ ಈ ಅನುಮತಿ ನೀಡಿದೆ ಎನ್ನಲಾಗಿದೆ.

ತೈಲ ಉತ್ಪಾದನೆಯಲ್ಲಿ ಮುಂಚೂಣಿ ದೇಶಗಳಲ್ಲಿ ಒಂದಾಗಿರುವ ಇರಾನ್ ಮೇಲೆ ಅಮೆರಿಕ ತನ್ನ ದಿಗ್ಬಂಧನಗಳನ್ನು ಮರುಹೇರಿಕೆ ಮಾಡುತ್ತಿದ್ದು, ನವೆಂಬರ್ ನಾಲ್ಕರಂದು ಜಾರಿಯಾಗುತ್ತಿದೆ.

ಇರಾನ್‌ನ ಆರ್ಥಿಕತೆಯ ಎಲ್ಲ ಮಾರ್ಗಗಳನ್ನು ಬಂದ್ ಮಾಡುವ ಗುರಿ ಹೊಂದಿರುವ ಟ್ರಂಪ್ ಆಡಳಿತ, ತೈಲಕ್ಕೆ ಅಧಿಕ ಬೆಲೆ ತೆರದೆ ಆಮದು ಮಾಡಿಕೊಳ್ಳಲು ಕೆಲವು ದೇಶಗಳಿಗೆ ವಿನಾಯಿತಿ ನೀಡಿದೆ.

ತೆರಿಗೆ ವಿನಾಯಿತಿ ರದ್ದು: ಟ್ರಂಪ್ ಆದೇಶದಿಂದ ಭಾರತದ ವ್ಯಾಪಾರಕ್ಕೆ ಸಂಕಷ್ಟ

ಇರಾನ್‌ನಿಂದ ಅಧಿಕ ಪ್ರಮಾಣದಲ್ಲಿ ತೈಲ ಖರೀದಿ ಮಾಡುವ ಚೀನಾ, ಈಗಾಗಲೇ ಅಮೆರಿಕದೊಮದಿಗೆ ಮಾತುಕತೆ ನಡೆಸಿದೆ. ಅಮೆರಿಕ ವಿನಾಯಿತಿ ಪಡೆದಿರುವ ಎಂಟು ದೇಶಗಳಲ್ಲಿ ಚೀನಾ ಕೂಡ ಸೇರಿದೆ. ಇತರೆ ನಾಲ್ಕು ದೇಶಗಳು ಯಾವುವು ಎಂಬುದು ಇನ್ನೂ ಗೊತ್ತಾಗಿಲ್ಲ.

ನಿರ್ಬಂಧದ ನಿಯಮವೇನು?

ನಿರ್ಬಂಧದ ನಿಯಮವೇನು?

ಅಮೆರಿಕದ ನಿರ್ಬಂಧದ ಪ್ರಕಾರ ನವೆಂಬರ್ 5ರಿಂದ ಇರಾನ್‌ನಿಂದ ತೈಲ ಸೇರಿದಂತೆ ಯಾವುದೇ ಉತ್ಪನ್ನಗಳ ಖರೀದಿ ಹಾಗೂ ಅದರೊಂದಿಗೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ. ನಿಯಮಗಳನ್ನು ಮೀರಿ ಯಾವುದೇ ದೇಶ ಅಥವಾ ಸಂಸ್ಥೆ ಅಥವಾ ವ್ಯಕ್ತಿ ಅದರೊಂದಿಗೆ ವ್ಯವಹಾರ ನಡೆಸಿದರೆ ಅವರ ಮೇಲೆಯೂ ವಿವಿಧ ನಿರ್ಬಂಧಗಳನ್ನು ಹೇರಬಹುದು.

ಅಮೆರಿಕದಲ್ಲಿ ಹುಟ್ಟಿದ ಮಾತ್ರಕ್ಕೆ ಪೌರತ್ವ ಸಿಗದು: ಹೊಸ ಆದೇಶಕ್ಕೆ ಟ್ರಂಪ್ ಯೋಚನೆ

ಇರಾನ್ ಮೇಲೆ ಅವಲಂಬನೆ

ಇರಾನ್ ಮೇಲೆ ಅವಲಂಬನೆ

ಅಮೆರಿಕದ ಈ ನಿರ್ಧಾರ ಭಾರತದ ಆತಂಕ್ಕೆ ಕಾರಣವಾಗಿತ್ತು. ಏಕೆಂದರೆ, ಭಾರತ ತನ್ನ ಹೆಚ್ಚಿನ ಪಾಲಿನ ತೈಲವನ್ನು ಇರಾನ್‌ನಿಂದಲೇ ಖರೀದಿ ಮಾಡುತ್ತಿದೆ. ಅಮೆರಿಕ ನಿರ್ಬಂಧ ಕಟ್ಟುನಿಟ್ಟಾಗಿ ಜಾರಿಯಾದರೆ ತೈಲಕ್ಕಾಗಿ ಭಾರತ ಪರ್ಯಾಯ ಮಾರ್ಗಗಳನ್ನು ಹುಡುಕಬೇಕು. ಅಲ್ಲದೆ, ಅಮೆರಿಕದ ಎಚ್ಚರಿಕೆ ಮೀರಿ ಇರಾನ್‌ನಿಂದ ತೈಲ ಖರೀದಿ ಮಾಡಿದರೆ ಅದರಿಂದ ವಿವಿಧ ನಿರ್ಬಂಧಗಳಿಗೂ ಒಳಪಡಬೇಕಾದ ಭೀತಿ ಎದುರಾಗಿತ್ತು.

ಛತ್ರಿ ಮುಚ್ಚಲು ಹೆಣಗಿದ ಟ್ರಂಪ್, ಟ್ವಿಟ್ಟರ್ ನಲ್ಲಿ ಹಾಸ್ಯದ ಹೊನಲು

ತಾತ್ಕಾಲಿಕ ಮಾತ್ರ

ತಾತ್ಕಾಲಿಕ ಮಾತ್ರ

ಈ ವಿನಾಯಿತಿ ತಾತ್ಕಾಲಿಕ ಮಾತ್ರ. ಇರಾನ್ ಮೇಲಿನ ನಿರ್ಬಂಧ ಜಾರಿಯಾದ ಬಳಿಕ ಹಂತ ಹಂತವಾಗಿ ಅದರಿಂದ ತೈಲ ಖರೀದಿ ಪ್ರಮಾಣವನ್ನು ಕಡಿಮೆಗೊಳಿಸಬೇಕು. ಆದರೆ, ವಿನಾಯಿತಿಯ ಅಡಿಯಲ್ಲಿ ದೇಶಗಳು ಈಗ ಎಷ್ಟು ಪ್ರಮಾಣದ ತೈಲ ಖರೀದಿ ಮಾಡಲು ಅವಕಾಶ ನೀಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದರು.

ಭಾರತದ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಟ್ರಂಪ್ ಬರ್ತಾ ಇಲ್ಲ

ಸೋಮವಾರ ಬಹಿರಂಗ

ಸೋಮವಾರ ಬಹಿರಂಗ

ಇರಾನ್‌ನಿಂದ ತೈಲ ಖರೀದಿ ಮಾಡಲು ಭಾರತ, ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾಗಳಿಗೆ ಅಮೆರಿಕ ವಿನಾಯಿತಿ ನೀಡಿದೆ. ಜತೆಗೆ ಇನ್ನೂ ನಾಲ್ಕು ದೇಶಗಳು ಈ ಅವಕಾಶ ಪಡೆದುಕೊಂಡಿದ್ದು, ಅವುಗಳ ಮಾಹಿತಿಯನ್ನು ಸೋಮವಾರ ಬಹಿರಂಗಪಡಿಸಲಾಗುವುದು. ಇರಾನ್ ಜತೆಗೆ ಇತರೆ ಆರ್ಥಿಕ ಒಪ್ಪಂದಗಳನ್ನು ಸಹ ಕಡಿತಗೊಳಿಸುವಂತೆ ಎಲ್ಲ ದೇಶಗಳಿಗೆ ಟ್ರಂಪ್ ಸರ್ಕಾರ ಸೂಚಿಸಿದೆ. ನಿರ್ಬಂಧದ ವ್ಯಾಪ್ತಿಗೆ ಒಳಪಡದೆ ಇದ್ದರೂ, ಸರಕುಗಳ ವ್ಯಾಪಾರವನ್ನು ತಗ್ಗಿಸುವಂತೆ ಅದು ಕೋರಿದೆ.

ನಿರ್ಬಂಧ ಯಾಕೆ?

ನಿರ್ಬಂಧ ಯಾಕೆ?

ಇರಾನ್‌ನಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಕಾರ್ಯಚಟುವಟಿಕೆಗಳು ಹೆಚ್ಚಾಗಿದ್ದು, ಅವರನ್ನು ನಿಯಂತ್ರಿಸಲು ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಲ್ಲದೆ, ಅಣ್ವಸ್ತ್ರ ಚಟುವಟಿಕೆಗಳನ್ನು ಇರಾನ್ ಸ್ಥಗಿತಗೊಳಿಸುತ್ತಿಲ್ಲ. ವಿರೋಧದ ನಡುವೆಯೂ ಇರಾನ್ ಅಣ್ವಸ್ತ್ರ ಪ್ರಯೋಗಗಳನ್ನು ನಡೆಸಿತ್ತು. ಹೀಗಾಗಿ ಇರಾನ್ ಪರಮಾಣು ಒಪ್ಪಂದದಿಂದ ಅಮೆರಿಕ ಹೊರನಡೆದಿತ್ತು. 2015ರಿಂದಲೇ ಆಗಿನ ಅಧ್ಯಕ್ಷ ಬರಾಕ್ ಒಬಾಮ ಸರ್ಕಾರ ಮೊದಲ ಹಂತದ ನಿರ್ಬಂಧ ಜಾರಿ ಮಾಡಿತ್ತು.

English summary
Donald Trump government of US has agreed to give exceptions to 8 countries including india for continue import oil from Iran after the sanction implemented.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X