ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2018ರ ನಂತರ ಮೊದಲ ಬಾರಿಗೆ ಬಡ್ಡಿದರ ಏರಿಸಿದ ಯುಎಸ್‌ ಫೆಡರಲ್ ರಿಸರ್ವ್

|
Google Oneindia Kannada News

ವಾಷಿಂಗ್ಟನ್‌, ಮಾರ್ಚ್ 17: ಉಕ್ರೇನ್‌ ಹಾಗೂ ರಷ್ಯಾದ ಯುದ್ಧದ ನಡುವೆ ಯುಎಸ್‌ ಫೆಡರಲ್ ರಿಸರ್ವ್ ಬಡ್ಡಿದರವನ್ನು ಏರಿಕೆ ಮಾಡಿದೆ. 1970 ರ ನಂತರದ ಕೆಟ್ಟ ಹಣದುಬ್ಬರವನ್ನು ಎದುರಿಸುವ ಗುರಿಯನ್ನು ಹೊಂದಿರುವ ಒಂದು ಕ್ರಮದ ಭಾಗವಾಗಿ ಯುಎಸ್‌ ಫೆಡರಲ್ ರಿಸರ್ವ್ ಮಾರ್ಚ್ 16 ರಂದು ತನ್ನ ಬೆಂಚ್-ಮಾರ್ಕ್ ಅಲ್ಪಾವಧಿಯ ಬಡ್ಡಿದರದಲ್ಲಿ 0.25 ಶೇಕಡಾ ಹೆಚ್ಚಳವನ್ನು ಘೋಷಿಸಿದೆ.

ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (FOMC) ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವು ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಮುಖ ಬಡ್ಡಿದರವನ್ನು ಹೆಚ್ಚಿಸಿದೆ. ಕೊನೆಯ ಬಾರಿ ಡಿಸೆಂಬರ್ 2018 ರಲ್ಲಿ ಸಮಿತಿಯು ಬಡ್ಡಿದರ ಹೆಚ್ಚಳವನ್ನು ಅನುಮೋದಿಸಿತು.

 ಉಕ್ರೇನ್‌ಗೆ 1 ಬಿಲಿಯನ್‌ ಡಾಲರ್‌ ಶಸ್ತ್ರಾಸ್ತ್ರ ಸಹಾಯ ಘೋಷಿಸಿದ ಯುಎಸ್‌ ಉಕ್ರೇನ್‌ಗೆ 1 ಬಿಲಿಯನ್‌ ಡಾಲರ್‌ ಶಸ್ತ್ರಾಸ್ತ್ರ ಸಹಾಯ ಘೋಷಿಸಿದ ಯುಎಸ್‌

25 ಬೇಸಿಸ್ ಪಾಯಿಂಟ್ ಹೆಚ್ಚಳವು ಈಗ ಬಡ್ಡಿದರವನ್ನು 0.25-0.5 ಶೇಕಡಾ ವ್ಯಾಪ್ತಿಗೆ ತಳ್ಳಿದೆ. ದರ ಹೆಚ್ಚಳವು ಅಂತಿಮವಾಗಿ ಅನೇಕ ಗ್ರಾಹಕರು ಮತ್ತು ವ್ಯವಹಾರಗಳಿಗೆ ಹೆಚ್ಚಿನ ಸಾಲದ ದರಗಳನ್ನು ವಿಧಿಸುವುದು ಎಂಬ ಅರ್ಥವನ್ನು ಹೊಂದಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕದ ದೃಷ್ಟಿಯಿಂದ ವಿಸ್ತರಿಸಲಾದ ಕೆಲವು ಕ್ರಮಗಳನ್ನು ಹಿಂದಕ್ಕೆ ಪಡೆಯಲು ಪ್ರಾರಂಭಿಸುವುದಾಗಿ ಕೇಂದ್ರ ಬ್ಯಾಂಕ್ ಸೂಚಿಸಿದ ಹಿನ್ನೆಲೆ ಯುಎಸ್‌ ಫೆಡರಲ್ ರಿಸರ್ವ್‌ನ ಈ ಕ್ರಮವು ವ್ಯಾಪಕವಾಗಿ ನಿರೀಕ್ಷಿತವಾಗಿತ್ತು.

Ukraine-Russia War: US Federal Reserve Hikes Interest Rates by 0.25%

ಫೆಡ್ ಅಧಿಕಾರಿಗಳು ಬುಧವಾರ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ ಹಣದುಬ್ಬರವು ತೀವ್ರ ಹೆಚ್ಚಳವಾಗಿದೆ. 2022 ಕ್ಕೆ 4.3 ಶೇಕಡಾಕ್ಕೆ ಕೊನೆಗೊಳ್ಳುತ್ತದೆ ಎಂಬ ನಿರೀಕ್ಷೆಯನ್ನು ಹೊಂದಿದ್ದಾರೆ. ಅಧಿಕಾರಿಗಳು ಈಗ ಈ ವರ್ಷ ಹೆಚ್ಚು ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ಗುರುತಿಸಿಕೊಂಡಿದ್ದು, ಈ ಕ್ರಮವನ್ನು ಕೈಗೊಂಡಿದ್ದಾರೆ.

2019ರಲ್ಲಿ ಮೂರು ಬಾರಿಗೆ ಬಡ್ಡಿ ದರ ಕಡಿತ

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌, 2019ರಲ್ಲಿ ಮೂರು ಬಾರಿಗೆ ಬಡ್ಡಿ ದರಗಳಲ್ಲಿ ಕಡಿತ ಮಾಡಿತ್ತು. ಇದರಿಂದ ಮೂಲ ಬಡ್ಡಿದರವು ಶೇ 1.50 ರಿಂದ ಶೇ 1.75ರ ಮಟ್ಟಕ್ಕೆ ತಲುಪಿತ್ತು. ಹೂಡಿಕೆ ಪ್ರಮಾಣ ತಗ್ಗುತ್ತಿರುವುದು, ಚೀನಾದ ಜತೆಗಿನ ವಾಣಿಜ್ಯ ಬಿಕ್ಕಟ್ಟು ಮತ್ತು ಜಾಗತಿಕ ಮಂದಗತಿಯ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿತ್ತು. ಜಾಗತಿಕ ವಿದ್ಯಮಾನಗಳ ಎದುರು ಅಮೆರಿಕದ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಹಾಗೂ ಸದ್ಯ ನಡೆಯುತ್ತಿರುವ ಬಿಕ್ಕಟ್ಟನ್ನು ಉಪಶಮನಗೊಳಿಸುವ ಉದ್ದೇಶದಿಂದ ಮೂರನೇ ಬಾರಿಗೆ ಬಡ್ಡಿದರದಲ್ಲಿ ಕಡಿತ ಮಾಡಲಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಜೆರೊಮ್‌ ಪಾವೆಲ್ ಅವರು ತಿಳಿಸಿದ್ದರು. (ಒನ್‌ಇಂಡಿಯಾ ಸುದ್ದಿ)

Recommended Video

ಸ್ಟುಡಿಯೊದಲ್ಲೀ ಅವಾಂತರ ಮಾಡ್ಕೊಂಡ ಪತ್ರಕರ್ತೆ! | Oneindia Kannada

English summary
Ukraine-Russia War: US Federal Reserve hikes interest rates by 0.25%, first time since 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X