ಉಕ್ರೇನ್‌ ಯುದ್ಧ: ರಷ್ಯಾದ 12 ಯುಎನ್‌ ರಾಜತಾಂತ್ರಿಕರು ಅಮೆರಿಕದಿಂದ ಹೊರಕ್ಕೆ

ವಾಷಿಂಗ್ಟನ್‌, ಮಾರ್ಚ್ 01: "ಗುಪ್ತಚರ ಕಾರ್ಯಕರ್ತರು" ಎಂಬ ಕಾರಣಕ್ಕಾಗಿ ರಷ್ಯಾದ ಯುಎನ್ ಮಿಷನ್‌ನ 12 ಸದಸ್ಯರನ್ನು ಅಮೆರಿಕದಿಂದ ಹೊರಹಾಕುತ್ತಿರುವುದಾಗಿ ಯುನೈಟೆಡ್ ಸ್ಟೇಟ್ಸ್ ಸೋಮವಾರ ಹೇಳಿದೆ. ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ಹಿನ್ನೆಲೆ ರಷ್ಯಾದ ಮೇಲೆ ಹಲವಾರು ಆರ್ಥಿಕ ನಿರ್ಬಂಧಗಳನ್ನು ಹೇರಿರುವ ಅಮೆರಿಕ ಈಗ ರಷ್ಯಾದ ಯುಎನ್‌ ರಾಜತಾಂತ್ರಿಕರನ್ನು ಕೂಡಾ ದೇಶದಲ್ಲಿ ಹೊರಹಾಕಿದೆ.

"ನಮ್ಮ ರಾಷ್ಟ್ರೀಯ ಭದ್ರತೆಗೆ ಪ್ರತಿಕೂಲವಾದ ಬೇಹುಗಾರಿಕೆ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಯುನೈಟೆಡ್ ಸ್ಟೇಟ್ಸ್‌ನಲ್ಲಿ ತಮ್ಮ ನಿವಾಸದ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ಈ 12 ರಷ್ಯಾದ ಯುಎನ್‌ ರಾಜತಾಂತ್ರಿಕರನ್ನು ಅಮೆರಿಕದಿಂದ ಹೊರ ಹಾಕಲಾಗು‌ತ್ತಿದ," ಎಂದು ಯುಎಸ್ ಮಿಷನ್‌ನ ವಕ್ತಾರರು ತಿಳಿಸಿದ್ದಾರೆ.

"ನಾವು ಯುಎನ್ ಪ್ರಧಾನ ಕಛೇರಿ ಒಪ್ಪಂದಕ್ಕೆ ಅನುಗುಣವಾಗಿ ಈ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ಕ್ರಮವನ್ನು ಹಲವಾರು ತಿಂಗಳುಗಳ ಪರಿಶೀಲನೆಯ ಬಳಿಕ ಕೈಗೊಳ್ಳಲಾಗಿದೆ," ಎಂದು ಕೂಡಾ ವಕ್ತಾರ ಒಲಿವಿಯಾ ಡಾಲ್ಟನ್ ಮಾಹಿತಿ ನೀಡಿದ್ದಾರೆ. ಯುಎನ್‌ನಲ್ಲಿನ ಯುಎಸ್ ಉಪ ರಾಯಭಾರಿ ರಿಚರ್ಡ್ ಮಿಲ್ಸ್, ಈ ಹಿಂದೆ ಉಕ್ರೇನ್‌ ಕುರಿತಾಗಿ ನಡೆದ ಭದ್ರತಾ ಮಂಡಳಿಯ ಸಭೆಯಲ್ಲಿ ಸುಮಾರು ಹನ್ನೆರಡು ರಾಜತಾಂತ್ರಿಕರು ರಾಜತಾಂತ್ರಿಕವಲ್ಲದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಬಗ್ಗೆ ಪ್ರಸ್ತಾತವನ್ನು ಮಾಡಿದ್ದರು.

Ukraine-Russia War: 12 Russian UN Diplomats Expelled From US

"ಯುನೈಟೆಡ್ ಸ್ಟೇಟ್ಸ್ ತೊರೆಯಲು ಹೇಳಿದ ಆ ರಾಜತಾಂತ್ರಿಕರು ರಾಜತಾಂತ್ರಿಕರಾಗಿ ತಮ್ಮ ಜವಾಬ್ದಾರಿಗಳು ಮತ್ತು ಕಟ್ಟುಪಾಡುಗಳಿಗೆ ಅನುಗುಣವಾಗಿ ನಡೆದುಕೊಂಡಿಲ್ಲ. ರಾಜತಾಂತ್ರಿಕರಾಗಿ ಯಾವ ಕಾರ್ಯವನ್ನು ಮಾಡಬಾರದೋ ಆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ," ಎಂದು ವಿವರಣೆ ನೀಡಲಾಗಿದೆ. ಆದರೆ ಈ ಬಗ್ಗೆ ನಿಖರವಾಗಿ ಉಲ್ಲೇಖ ಮಾಡಲಾಗಿಲ್ಲ.

ವಿಶ್ವಸಂಸ್ಥೆಯ ರಷ್ಯಾದ ರಾಯಭಾರಿ ಈ ನಿರ್ಧಾರವನ್ನು ಮೊದಲು ವರದಿಗಾರರಿಗೆ ತಿಳಿಸಿದರು. 12 ಮಂದಿಯನ್ನು ಮಾರ್ಚ್ 7 ರೊಳಗೆ ಯುನೈಟೆಡ್ ಸ್ಟೇಟ್ಸ್ ತೊರೆಯುವಂತೆ ಆದೇಶಿಸಲಾಗಿದೆ ಎಂದು ವಾಸಿಲಿ ನೆಬೆಂಜಿಯಾ ನ್ಯೂಯಾರ್ಕ್‌ನಲ್ಲಿರುವ ಯುಎನ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇನ್ನು ಅಮೆರಿಕದಲ್ಲಿ ಹೊರಹೋಗಲು ಹೇಳಿದವರ ಪೈಕಿ ತಾನು ಕೂಡಾ ಓರ್ವರೇ ಎಂಬುವುದನ್ನು ಹೇಳಲು ವಿಶ್ವಸಂಸ್ಥೆಯ ರಷ್ಯಾದ ರಾಯಭಾರಿ ಹೇಳಲು ನಿರಾಕರಿಸಿದ್ದಾರೆ. ರಷ್ಯಾದ ರಾಜತಾಂತ್ರಿಕ ಮೂಲಗಳ ಪ್ರಕಾರ, ಯುಎನ್‌ನ ರಷ್ಯಾದ ಮಿಷನ್ ಸುಮಾರು 100 ಸಿಬ್ಬಂದಿಯನ್ನು ಹೊಂದಿದೆ.

ರಷ್ಯಾದ ಮೇಲೆ ಅಮೆರಿಕದ ಹಲವಾರು ನಿರ್ಬಂಧಗಳು

ಉಕ್ರೇನ್‌ನ ಮೇಲೆ ದಾಳಿ ನಡೆಸುವುದಕ್ಕೆ ಒಂದು ತಿಂಗಳಿಗಿಂತ ಮೊದಲೇ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದ್ದ ರಷ್ಯಾದ ವಿರುದ್ಧ ಯುಎಸ್ ಅಧ್ಯಕ್ಷ ಜೋ ಬೈಡನ್ ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾ ವಿರುದ್ಧ ನಿರ್ಬಂಧ, ರಫ್ತು ನಿಯಂತ್ರಣ ಘೋಷಿಸಿದ್ದಾರೆ. ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ಹೇರಲಿದೆ ಎಂದು ಹೇಳಿದ್ದಾರೆ.

ನಮ್ಮ ಪಡೆಗಳು ಉಕ್ರೇನ್‌ನಲ್ಲಿ ರಷ್ಯಾದೊಂದಿಗೆ ಸಂಘರ್ಷದಲ್ಲಿ ತೊಡಗಿಲ್ಲ ಮತ್ತು ತೊಡಗಲ್ಲ ಎಂದು ಕೂಡಾ ಈ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದ್ದಾರೆ. "ನಾನು ಅದನ್ನು ಮತ್ತೊಮ್ಮೆ ಹೇಳುತ್ತೇನೆ. ನಮ್ಮ ಪಡೆಗಳು ಉಕ್ರೇನ್‌ನಲ್ಲಿ ರಷ್ಯಾದೊಂದಿಗೆ ಸಂಘರ್ಷದಲ್ಲಿ ತೊಡಗಿಲ್ಲ ರಷ್ಯಾದೊಂದಿಗೆ ಸಂಘರ್ಷದಲ್ಲಿ ನಮ್ಮ ಪಡೆ ತೊಡಗಲ್ಲ," ಎಂದು ಕೂಡಾ ತಿಳಿಸಿದ್ದಾರೆ.

ರಫ್ತು ನಿಯಂತ್ರಣಗಳು ರಷ್ಯಾದ ಹೈಟೆಕ್ ಆಮದುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನದನ್ನು ಕಡಿತಗೊಳಿಸುತ್ತವೆ. ರಷ್ಯಾದ ಸೈಬರ್ ದಾಳಿಗೆ ಪ್ರತಿಕ್ರಿಯಿಸಲು ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಕೆಯನ್ನು ಕೂಡಾ ಜೋ ಬೈಡೆನ್‌ ನೀಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಕ್ರಮಣಕಾರಿ. ಪುಟಿನ್ ಈ ಯುದ್ಧವನ್ನು ಆರಿಸಿಕೊಂಡಿದ್ದರಿಂದ ಅವರು, ಅವರ ದೇಶ ಎರಡೂ ಪರಿಣಾಮವನ್ನು ಎದುರಿಸುತ್ತದೆ. ವಿಟಿಬಿ ಸೇರಿದಂತೆ ಇನ್ನೂ 4 ರಷ್ಯಾದ ಬ್ಯಾಂಕ್‌ಗಳ ಮೇಲೆ ನಿರ್ಬಂಧವನ್ನು ಹೇರಲಾಗುತ್ತದೆ ಎಂದು ಜೋ ಬೈಡೆನ್‌ ತಿಳಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+